ಜೈಲಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ, ವಿವರಣೆ ನೀಡಲು ಗೃಹಸಚಿವರ ನಿವಾಸಕ್ಕೆ ಬಂದ ಪೊಲೀಸ್ ಕಮೀಶನರ್
ಜೈಲಿನೊಳಗೆ ದುಡ್ಡು ಕೊಟ್ರೆ ಎಲ್ಲವನ್ನು ಒದಗಿಸುವ ವ್ಯವಸ್ಥೆ ಅಗುತ್ತದೆ ಅಂತ ಹೇಳುತ್ತಾರೆ, ಜೈಲಿಗೆ ಪದೇಪದೆ ಹೋಗುವ ನಟೋರಿಯಸ್ ರೌಡಿಗಳಿಗೆ ಯಾರಿಂದ ಕೆಲಸವಾಗುತ್ತದೆ ಅಂತ ಗೊತ್ತಿರುತ್ತದೆ. ದರ್ಶನ್ ಜೊತೆ ಕೂತಿರುವ ವಿಲ್ಸನ್ ಗಾರ್ಡನ್ ನಾಗನಿಗೆ ಜೈಲು ಮಾವನ ಮನೆಯಿದ್ದಂತೆ. ಅವನೇ ದರ್ಶನ್ ಸಲುವಾಗಿ ಎಣ್ಣೆ, ಸಿಗರೇಟು, ಬಿರಿಯಾನಿಗಳ ವ್ಯವಸ್ಥೆ ಮಾಡಿಸುತ್ತಿದ್ದಾನಂತೆ.
ಬೆಂಗಳೂರು: ಇದು ಹೊಸತೇನಲ್ಲ. ವಿಐಪಿ ಖೈದಿಗಳಿಗೆ ಬಂಧಿಖಾನೆಗಳಲ್ಲಿ ರಾಯಲ್ ಟ್ರೀಟ್ಮೆಂಟ್ ಸಿಗೋದು ಅಥವಾ ಒದಗಿಸೋದು, ಲಿಕ್ಕರ್, ಸಿಗರೇಟು, ಮಾಂಸದೂಟದ ವ್ಯವಸ್ಥೆ ಮಾಡೋದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ ಮತ್ತು ಆನೇಕಲ್ ನಲ್ಲಿರುವ ಸೆಂಟ್ರಲ್ ಜೈಲು ಇದಕ್ಕೆ ಅಪವಾದವಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಅರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅಲ್ಲಿನ ಆವರಣದಲ್ಲಿ ಕೆಲ ಕುಖ್ಯಾತ ರೌಡಿಗಳ ಜೊತೆ ಕೂತು ಸಿಗರೇಟು ಸೇದುತ್ತ ಕಾಫಿ ಹೀರುತ್ತಿರುವ ಫೋಟೋ ಜೈಲು ಒಳಗಿನ ವ್ಯವಸ್ಥೆಯನ್ನು ಅಣಕಿಸುತ್ತಿದೆ. ದರ್ಶನ್ ಗೆ ಸಿಗುತ್ತಿರುವ ಸ್ಪೆಷಲ್ ಟ್ರೀಟ್ಮೆಂಟ್ ಬಗ್ಗೆ ಚರ್ಚೆಗಳಾಗುತ್ತಿವೆ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಪ್ರಾಯಶಃ ತಾಳ್ಮೆ ಕಳೆದುಕೊಂಡಿರಬಹುದು. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಸಚಿವ ನಿನ್ನೆ ಸಮಗ್ರ ಮಾಹಿತಿಯನ್ನು ತರಿಸಿಕೊಂಡು ಏನಿದು ಅವ್ಯವಸ್ಥೆ ಅಂತ ಕೇಳಲು ನಗರದ ಪೊಲೀಸ್ ಕಮೀಶನರ್ ಬಿ ದಯಾನಂದ ಅವರನ್ನು ಇಂದು ಬೆಳಗ್ಗೆ ತಮ್ಮ ನಿವಾಸಕ್ಕೆ ಕರೆಸಿದ್ದಾರೆ. ದಯಾನಂದ ಒಂದು ಫೈಲಿನೊಂದಿಗೆ ಪರಮೇಶ್ವರ್ ನಿವಾಸಕ್ಕೆ ಆಗಮಿಸುತ್ತಿರುವುದನ್ನು ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಸೆಂಟ್ರಲ್ ಜೈಲ್ ಈಗ ರೆಸಾರ್ಟ್’; ದರ್ಶನ್ ಫೋಟೋ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆ