Krishna Janmashtami: ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ನೃತ್ಯ ಮಾಡುತ್ತ ಭಕ್ತಿಯಲ್ಲಿ ಮೈ ಮರೆತ ಭಕ್ತರು

ಇಸ್ಕಾನ್ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಿಂದ ನೆರೆವೇರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಕೃಷ್ಣನನ್ನ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಕೃಷ್ಣನ ಮುಂದೆ ನೃತ್ಯ ಮಾಡುತ್ತ ಭಕ್ತಿಯಲ್ಲಿ ಮುಳುಗುತ್ತಿದ್ದಾರೆ. ದೇವಸ್ಥಾನದ ಸುತ್ತ ಹಬ್ಬದ ವಾತಾವರಣ ಮನೆ ಮಾಡಿದೆ.‌

Krishna Janmashtami: ಇಸ್ಕಾನ್​ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ನೃತ್ಯ ಮಾಡುತ್ತ ಭಕ್ತಿಯಲ್ಲಿ ಮೈ ಮರೆತ ಭಕ್ತರು
| Updated By: ಆಯೇಷಾ ಬಾನು

Updated on:Aug 26, 2024 | 8:51 AM

ಬೆಂಗಳೂರು, ಆಗಸ್ಟ್​.26: ಬೆಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಂಭ್ರಮ ಮನೆ ಮಾಡಿದೆ. ನಗರದ ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ನಿರ್ಮಾನವಾಗಿದೆ. ಅದ್ರಲ್ಲೂ ನಗರದ ಇಸ್ಕಾನ್ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿಯಿಂದ ನೆರೆವೇರುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಕೃಷ್ಣನನ್ನ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಕೃಷ್ಣನ ಮುಂದೆ ನೃತ್ಯ ಮಾಡುತ್ತ ಭಕ್ತಿಯಲ್ಲಿ ಮುಳುಗುತ್ತಿದ್ದಾರೆ. ದೇವಸ್ಥಾನದ ಸುತ್ತ ಹಬ್ಬದ ವಾತಾವರಣ ಮನೆ ಮಾಡಿದೆ.‌

ಈ ಭಾರಿ ಇಸ್ಕಾನ್ ದೇವಸ್ಥಾನದಲ್ಲಿ ದಕ್ಷಿಣ ಭಾರತದ ಶೈಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಅದ್ದೂರಿಯಿಂದ ಬರಮಾಡಿಕೊಳ್ಳುತ್ತಿದ್ದು, ಇಂದು ಬೆಳ್ಳಗ್ಗೆ ಶ್ರೀ ಕೃಷ್ಣನಿಗೆ ಪಂಚಾಭಿಷೇಕ, ಪುಷ್ಪಭಿಷೇಕ, ವಜ್ರಾಲಂಕಾರವನ್ನ ಮಾಡಿ ಭಕ್ತದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತದಿಗಳು ಬಂದು ದೇವರ ದರ್ಶನ‌ ಮಾಡ್ತಿದ್ದಾರೆ. ಇನ್ನು ಶ್ರೀ ಕೃಷ್ಣ ರೋಹಿಣಿ ನಕ್ಷತ್ರ ಮಧ್ಯರಾತ್ರಿ ಹುಟ್ಟಿರುವ ಕಾರಣ ನಿನ್ನೆ ಮಧ್ಯರಾತ್ರಿ ಒಂದು ಗಂಟೆಯವರೆಗೂ ವಿಶೇಷ ಪೂಜೆ ಹಾಗೂ ಭಜನೆಗಳನ್ನ ಹಮ್ಮಿಕೊಳ್ಳಲಾಗಿತ್ತು.

ಕೃಷ್ಣ ಜನ್ಮಾಷ್ಟಮಿ ಸಂಭ್ರಮ ನಿನ್ನೆಯಿಂದಲೇ ಶುರುವಾಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಸಮಸ್ಯೆಗಳಾಗದಂತೆ ಬ್ಯಾರಿಕೇಟ್ ವ್ಯವಸ್ಥೆ, ಪ್ರಸಾದದ ವ್ಯವಸ್ಥೆಯನ್ನ ಮಾಡಲಾಗಿದೆ. ಇನ್ನು ವಯ್ಯಸ್ಸಾದ ಭಕ್ತದಿಗಳನ್ನ ಹೊತ್ತು ತರಲು ಶೆಟಲ್ಸ್ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆಯನ್ನ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:48 am, Mon, 26 August 24

Follow us