‘ಸೆಂಟ್ರಲ್ ಜೈಲ್​ ಈಗ ರೆಸಾರ್ಟ್​’; ದರ್ಶನ್ ಫೋಟೋ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆ

‘ಸೆಂಟ್ರಲ್ ಜೈಲ್​ ಈಗ ರೆಸಾರ್ಟ್​’; ದರ್ಶನ್ ಫೋಟೋ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆ

ರಾಜೇಶ್ ದುಗ್ಗುಮನೆ
|

Updated on:Aug 26, 2024 | 9:23 AM

ನಟ ದರ್ಶನ್ ಅವರು ಜೈಲಿನಲ್ಲಿ ಹಾಯಾಗಿ ದಿನಗಳನ್ನು ಕಳೆಯುತ್ತಿದ್ದಾರೆ. ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ಫೋಟೋ ವೈರಲ್ ಆಗಿದೆ. ದರ್ಶನ್​ಗೆ ಇದರಿಂದ ರಾಜಾತಿಥ್ಯ ಸಿಗುತ್ತಿದೆಯೇ ಎನ್ನುವ ಪ್ರಶ್ನೆ ಏಳುವಂತೆ ಆಗಿದೆ. ಈ ಫೋಟೋನ ಅನೇಕರು ಟೀಕೆ ಮಾಡಿದ್ದಾರೆ.

ದರ್ಶನ್ ಅವರು ಜೈಲಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅವರ ಫೋಟೋಗೆ ಅನೇಕರು ಟೀಕೆ ಹೊರ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಕೇಂದ್ರ ಕಾರಾಗೃಹ ಈಗ ರೆಸಾರ್ಟ್ ಆಗಿದೆ ಎಂದು ಅನೇಕರು ಟೀಕೆ ಮಾಡಿದ್ದಾರೆ. ಇನ್ನು, ದರ್ಶನ್ ಫ್ಯಾನ್ಸ್ ಇದನ್ನು ಸಂಭ್ರಮಿಸುತ್ತಿದ್ದಾರೆ. ‘ದರ್ಶನ್​​ಗೆ ಎಲ್ಲಿದ್ದರೂ ರಾಜಾತಿಥ್ಯ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾ ಇದ್ದಾರೆ. ದರ್ಶನ್ ಅವರು ವಿಲ್ಸನ್ ಗಾರ್ಡ್ ನಾಗ ಮೊದಲಾದವರ ಜೊತೆ ಸಮಯ ಕಳೆಯುತ್ತಿದ್ದಾರೆ. ಅವರು ಜೈಲಿನಲ್ಲಿ ಬದಲಾಗಿಲ್ಲ ಎಂಬುದಕ್ಕೆ ಈ ಫೋಟೋಗಳೇ ಸಾಕ್ಷಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 26, 2024 08:09 AM