AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ

ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ

ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ|

Updated on: Aug 26, 2024 | 10:51 AM

Share

ಮಂತ್ರಲಾಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು (ಆಗಸ್ಟ್​.26) ಏಕಕಾಲದಲ್ಲಿ 350 ನೃತ್ಯ ಕಲಾವಿದರಿಂದ ನಾಮ ರಾಮಾಯಣಂ ನೃತ್ಯ ಪ್ರದರ್ಶನ ನಡೆಯಿತು. ಮಠದ ಕಾರಿಡಾರ್​ನಲ್ಲಿ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.

ರಾಯಚೂರು, ಆಗಸ್ಟ್​ 26: ಮಂತ್ರಾಲಯದ (Mantralaya) ಶ್ರೀ ಗುರು ರಾಘವೇಂದ್ರ ಸ್ವಾಮಿಗಳ (Raghavendra Swamiji) ಆರಾಧನೆ ಸಂಪನ್ನಗೊಂಡಿದೆ. ರಾಯರ ಆರಾಧನೆಯಲ್ಲಿ ಸುಮಾರು 67 ಲಕ್ಷ ಭಕ್ತರು ಭಾಗಿಯಾಗಿದ್ದರು. ಮಂತ್ರಾಲಯದಲ್ಲಿ ಇಂದು (ಆಗಸ್ಟ್​.26) ಏಕಕಾಲದಲ್ಲಿ 350 ನೃತ್ಯ ಕಲಾವಿದರಿಂದ ನಾಮ ರಾಮಾಯಣಂ ನೃತ್ಯ ಪ್ರದರ್ಶನ ನಡೆಯಿತು. ಮಠದ ಕಾರಿಡಾರ್​ನಲ್ಲಿ ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ಸ್ಥಳೀಯ, ಜಪಾನ್, ಜರ್ಮನಿ, ಇಂಡೋನೇಷಿಯಾ ಸೇರಿ ವಿವಿಧ ಕಡೆಗಳಿಂದ ಆಗಮಿಸಿದ್ದ 350 ಕಲಾವಿದರು ನೃತ್ಯ ಮಾಡಿದರು. ಒಂದೇ ವೇದಿಕೆಯಲ್ಲಿ 15 ನಿಮಿಷಗಳ ಕಾಲ ಶ್ರೀನಾಮ ರಾಮಾಯಣಂ ಗೀತಗೆ ನೃತ್ಯ ಮಾಡುವ ಮೂಲಕ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆಯಲು ಕಲಾವಿದರು ಈ ನೃತ್ಯ ಪ್ರದರ್ಶನ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ನೃತ್ಯ ಅಕಾಡಮಿ ಕೈ ಸೇರಲಿದೆ.

ಇದನ್ನೂ ಓದಿ: ಮಂತ್ರಾಲಯದ ಗುರು ರಾಘವೇಂದ್ರರ ಆರಾಧನೆಗೆ ತೆರೆ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ