ವಿಜಯನಗರ: ದೂರು ನೀಡಲು ಬಂದ ವ್ಯಕ್ತಿಯ ಮಗಳ ಜೊತೆ ಹೆಡ್ ಕಾನ್ಸೆಟೇನಲ್ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿರುವ ಘಟನೆ ನಡೆದಿದೆ. ಅನುಚಿತವಾಗಿ ವರ್ತಿಸಿದ ಹೆಡ್ ಕಾನಸ್ಟೇಬಲ್ ಆರೋಪಿ ಮಾರೆಪ್ಪನನ್ನು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೆಡ್ ಕಾನಸ್ಟೇಬಲ್ ಮಾರೆಪ್ಪ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದರು. ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಕೇಸ್ ನಿಮ್ಮ ಕಡೆ ಮಾಡುತ್ತೇನೆ ಎಂದು ಹೆಡ್ ಕಾನ್ಸಟೇಬಲ್ ಆಮಿಷವೊಡ್ಡಿದ್ದ ಎನ್ನಲಾಗಿದೆ.
ಜಾತಿ ವಿಚಾರ ಬಳಸಿ ಬುಟ್ಟಿಗೆ ಹಾಕಿಕೊಳ್ಳಲು ಆರೋಪಿ ಮಾರೆಪ್ಪ ಯತ್ನಿಸಿದ್ದ. ಮೊಬೈಲ್ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿಬಂದಿದೆ. ಮಾರೆಪ್ಪ ಇದನ್ನೆಲ್ಲಾ ತೆಲುಗಿನಲ್ಲಿ ಸಂಭಾಷಣೆ ನಡೆಸಿದ್ದ. ನಿನ್ನ ಮೇಲೆ ಮನಸ್ಸಾಗಿದೆ. ಎಲ್ಲಾದರೂ ಹೋಗಿ ಇಬ್ಬರೂ ಸೇರೋಣ ಅಂತ ಮಾರೆಪ್ಪ ಒತ್ತಾಯಿಸಿದ್ದನಂತೆ. ಲೈಂಗಿಕ ಸಮ್ಮತಿಗೆ ಒತ್ತಾಯ ಮಾಡಿದ ದೂರಿನ ಮೇರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.