ಬೆಡ್ಶೀಟ್ನಲ್ಲಿ ಸುತ್ತಿದ್ದ ಸ್ಥಿತಿಯಲ್ಲಿ 6 ವರ್ಷದ ಬಾಲಕಿಯ ಬೆತ್ತಲೆ ದೇಹ ಲುಧಿಯಾನದಲ್ಲಿ ಪತ್ತೆಯಾಗಿದೆ. ಮೋತಿ ನಗರದ ಫೌಜಿ ಕಾಲೊನಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿ ಬೆತ್ತಲೆ ಶವವನ್ನು ಕಂಬಳಿಯಲ್ಲಿ ಸುತ್ತಿ ನಂತರ ಕಾರ್ಮಿಕ ಕ್ವಾರ್ಟರ್‌ನ ಮೂರನೇ ಮಹಡಿಯಿಂದ ಎಸೆದಿದ್ದಾರೆ.
ಕೊಲೆಗೂ ಮುನ್ನ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂಬುದಾಗಿಯೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪ್ರಾಪ್ತ ಬಾಲಕಿ ತನ್ನ ಪೋಷಕರು ಮತ್ತು ಅಜ್ಜಿಯೊಂದಿಗೆ ಲುಧಿಯಾನಾದ ಫೌಜಿ ಕಾಲೋನಿಯಲ್ಲಿ ಒಂದು ತಿಂಗಳ ಹಿಂದೆ ಕಾರ್ಮಿಕ ಕ್ವಾರ್ಟರ್‌ಗೆ ತೆರಳಿದ್ದಳು.
ಆಕೆಯ ಪೋಷಕರು, ಕಾರ್ಖಾನೆಯ ಕೆಲಸಗಾರರು, ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಾರೆ ಮತ್ತು ಹಗಲಿನಲ್ಲಿ ಅವಳನ್ನು ನೋಡಿಕೊಳ್ಳುವ ಜವಾಬ್ದಾರಿ ಹುಡುಗಿಯ ಅಜ್ಜಿಯ ಮೇಲಿತ್ತು. ಮಂಗಳವಾರ ಎಂದಿನಂತೆ ತಂದೆ-ತಾಯಿ ಇಬ್ಬರೂ ಬೆಳಗ್ಗೆ ಮನೆಯಿಂದ ಹೊರ ಹೋಗಿದ್ದು, ಬಾಲಕಿ ಅಜ್ಜಿಯೊಂದಿಗೆ ಇದ್ದಳು.
ಮತ್ತಷ್ಟು ಓದಿ: ಅಪ್ರಾಪ್ತ ಬಾಲಕಿಯ ಅಪಹರಿಸಿ ಆ್ಯಸಿಡ್ ಎರಚಿದ ದುಷ್ಕರ್ಮಿಗಳು
ಬೆಳಗ್ಗೆ 11 ಗಂಟೆ ಸುಮಾರಿಗೆ ಅಜ್ಜಿಗೆ ಬಾಲಕಿ ಕಾಣೆಯಾಗಿರುವುದು ಗೊತ್ತಾಗಿದೆ. ಬಳಿಕ ಅವರು ಬಾಲಕಿಯನ್ನು ಹುಡುಕಲು ತುಂಬಾ ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಬಳಿಕ ಬಾಲಕಿ ಶವ ಪತ್ತೆಯಾಗಿದೆ.
ಬಾಲಕಿ ತನ್ನ ಕಾರ್ಮಿಕ ಕ್ವಾರ್ಟರ್‌ನ ಬಳಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಕೃತ್ಯ ಎಸಗಿದವರು ಯಾರು ಎಂಬುದಿನ್ನೂ ತಿಳಿದುಬಂದಿಲ್ಲ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ