ಬಾಲಕನ್ನ ಕಿಡ್ನ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್, ಸಿನಿಮೀಯ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ

| Updated By:

Updated on: Jul 28, 2020 | 12:02 PM

ನೆಲಮಂಗಲ: ನಾಯಿಮರಿ ಕೊಂಡುಕೊಳ್ಳುವ ನೆಪದಲ್ಲಿ ಬಾಲಕನ ಕಿಡ್ನ್ಯಾಪ್‌ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಐವರು ಕಿಡ್ನ್ಯಾಪರ್ಸ್​ನ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಅಂಧ್ರಹಳ್ಳಿಯ ಮನು(24), ದರ್ಶನ್(20), ಆದರ್ಶ(20), ಲೋಕೇಶ್(20), ಆಕಾಶ್(20) ಬಂಧಿತ ಆರೋಪಿಗಳು. ಸಂಜೆ ನಾಯಿಮರಿ ಖರೀದಿಸುವ ನೆಪದಲ್ಲಿ ಕಾರಿನಲ್ಲಿ ಬಂದು ಅಂಧ್ರಹಳ್ಳಿಯ ನಾಗರಾಜು, ರೇಣುಕಾ ದಂಪತಿ ಪುತ್ರ ನಿತಿನ್‌ನನ್ನು ಬೆಂಗಳೂರಿನ ಬೈಲಕೊನೇನಹಳ್ಳಿ ಸರ್ಕಲ್‌ ಬಳಿ ಕಿಡ್ನ್ಯಾಪ್‌ ಮಾಡಲಾಗಿತ್ತು. ನಂತರ 20 ಲಕ್ಷ ರೂಪಾಯಿಗೆ ಕೊಡದಿದ್ರೆ ಬಾಲಕನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಇಟ್ಟಿದ್ದರು. […]

ಬಾಲಕನ್ನ ಕಿಡ್ನ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್, ಸಿನಿಮೀಯ ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆ
Follow us on

ನೆಲಮಂಗಲ: ನಾಯಿಮರಿ ಕೊಂಡುಕೊಳ್ಳುವ ನೆಪದಲ್ಲಿ ಬಾಲಕನ ಕಿಡ್ನ್ಯಾಪ್‌ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಐವರು ಕಿಡ್ನ್ಯಾಪರ್ಸ್​ನ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಅಂಧ್ರಹಳ್ಳಿಯ ಮನು(24), ದರ್ಶನ್(20), ಆದರ್ಶ(20), ಲೋಕೇಶ್(20), ಆಕಾಶ್(20) ಬಂಧಿತ ಆರೋಪಿಗಳು.

ಸಂಜೆ ನಾಯಿಮರಿ ಖರೀದಿಸುವ ನೆಪದಲ್ಲಿ ಕಾರಿನಲ್ಲಿ ಬಂದು ಅಂಧ್ರಹಳ್ಳಿಯ ನಾಗರಾಜು, ರೇಣುಕಾ ದಂಪತಿ ಪುತ್ರ ನಿತಿನ್‌ನನ್ನು ಬೆಂಗಳೂರಿನ ಬೈಲಕೊನೇನಹಳ್ಳಿ ಸರ್ಕಲ್‌ ಬಳಿ ಕಿಡ್ನ್ಯಾಪ್‌ ಮಾಡಲಾಗಿತ್ತು. ನಂತರ 20 ಲಕ್ಷ ರೂಪಾಯಿಗೆ ಕೊಡದಿದ್ರೆ ಬಾಲಕನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಇಟ್ಟಿದ್ದರು. ಕೈ, ಕಾಲು ಮುರಿದು, ಕೊಲೆ ಮಾಡುವುದಾಗಿ ಬೆದರಿಸಿದ್ದರು. ನಂತರ ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.

ಪೋಷಕರ ದೂರಿನ ಮೇರೆಗೆ ಮಾದನಾಯಕನಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ನೇತೃತ್ವದಲ್ಲಿ ಅಪಹರಣಕಾರರ ಬಂಧನಕ್ಕಾಗಿ ಇಡೀ ರಾತ್ರಿ ಮಿಂಚಿನ ಕಾರ್ಯಾಚರಣೆ ಶುರುವಾಗಿದೆ. ಕೊನೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಾವನೂರ ಬಳಿ ಕಾರು ಚೇಸ್‌ ಮಾಡಿ ಬಾಲಕ ನಿತಿನ್‌ನನ್ನು ರಕ್ಷಿಸಿ ಐವರು ಕಿಡ್ನ್ಯಾಪರ್ಸ್​ನನ್ನ ಬಂಧಿಸಿದ್ದಾರೆ.

Published On - 7:59 am, Tue, 28 July 20