ಭೋಪಾಲ್​: ಪತಿಯಿಂದಲೇ ಪತ್ನಿ ಕೊಲೆ, ವಾಷಿಂಗ್​ ಮೆಷಿನ್​ನಿಂದ ಹತ್ಯೆ ಬಹಿರಂಗ

ಮಹಿಳಾ ಅಧಿಕಾರಿಯನ್ನು ನಿರುದ್ಯೋಗಿ ಪತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಳಿಕ ಪತಿ ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು ಸಹಜ ಸಾವು ಎಂದು ನಿರೂಪಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ದಿಂಡೋರಿ ಜಿಲ್ಲೆಯ ಶಹಪುರದಲ್ಲಿ ನಿಶಾ ನಾಪಿತ್​ ಅವರನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್​ ಆಗಿ ಪೋಸ್ಟಿಂಗ್ ಮಾಡಲಾಗಿತ್ತು.

ಭೋಪಾಲ್​: ಪತಿಯಿಂದಲೇ ಪತ್ನಿ ಕೊಲೆ, ವಾಷಿಂಗ್​ ಮೆಷಿನ್​ನಿಂದ ಹತ್ಯೆ ಬಹಿರಂಗ
Image Credit source: NDTV

Updated on: Jan 30, 2024 | 8:49 AM

ಮಹಿಳಾ ಅಧಿಕಾರಿಯನ್ನು ನಿರುದ್ಯೋಗಿ ಪತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಬಳಿಕ ಪತಿ ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು ಸಹಜ ಸಾವು ಎಂದು ನಿರೂಪಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ದಿಂಡೋರಿ ಜಿಲ್ಲೆಯ ಶಹಪುರದಲ್ಲಿ ನಿಶಾ ನಾಪಿತ್​ ಅವರನ್ನು ಉಪವಿಭಾಗೀಯ ಮ್ಯಾಜಿಸ್ಟ್ರೇಟ್​ ಆಗಿ ಪೋಸ್ಟಿಂಗ್ ಮಾಡಲಾಗಿತ್ತು.

ಸರ್ವೀಸ್​ಬುಕ್, ಬ್ಯಾಂಕ್ ಖಾತೆ ಎಲ್ಲೂ ನಾಮಿನಿಯಲ್ಲಿ ತನ್ನ ಹೆಸರಿಲ್ಲ ಎಂದು ಅವರ ಪತಿ ಮನೀಶ್​ ಶರ್ಮಾ ಅಸಮಾಧಾನಗೊಂಡಿದ್ದ. ದಿಂಬಿನಿಂದ ಪತ್ನಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದ, ಮೂಗಿನಿಂದ ವಿಪರೀತ ರಕ್ತಸ್ರಾವ ಆಗಿತ್ತು, ಅದನ್ನು ಒರೆಸಿದ್ದ, ಬಳಿಕ ಸಾಕ್ಷ್ಯಗಳನ್ನು ನಾಶ ಮಾಡಲು ದಿಂಬಿನ ಕವರ್ ಹಾಗೂ ಹಾಸಿಗೆ ವಸ್ತ್ರಗಳನ್ನು ವಾಶಿಂಗ್​ ಮೆಷಿನ್​ಗೆ ಹಾಕಿದ್ದ.

ಈ ವಾಷಿಂಗ್ ಮೆಷಿನ್​ ಇಂದಲೇ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿಂಬಿನ ಕವರ್ ಹಾಗೂ ಬೆಡ್​ಶೀಟ್​ ಇದೀಗ ಪೊಲೀಸರ ಕೈಗೆ ಸಿಕ್ಕಿದೆ. ನಾಪಿತ್ ಸಹೋದರಿ ನೀಲಿಮಾ ಅವರು ಶರ್ಮಾ ಅವರೇ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆತ ನಿತ್ಯ ಆಕೆಗೆ ಹಣಕ್ಕಾಗಿ ಪೀಡಿಸುತ್ತಿದ್ದ, ಕಿರುಕುಳ ನೀಡುತ್ತಿದ್ದ, ನನ್ನ ತಂಗಿಗೆ ಯಾವುದೇ ಕಾಯಿಲೆಗಳಿರಲಿಲ್ಲ, ಮನೀಶ್​ ಏನೋ ತಪ್ಪು ಮಾಡಿದ್ದಾನೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​​ನ ಶೂಟರ್​​ನ​​ ಕೈಕಾಲು ಕಟ್ಟಿ, ಬೆಂಕಿ ಹಚ್ಚಿ ಬರ್ಬರ ಕೊಲೆ

45 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 302,304 ಬಿ ಮತ್ತು 201 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾಗಿದ್ದ ನಿಶಾ ನಾಪಿತ್ ಮತ್ತು ಮನೀಶ್ ಶರ್ಮಾ ಅವರು 2020 ರಲ್ಲಿ ವಿವಾಹವಾದರು. ಕುಟುಂಬದವರಿಗೆ ತಿಳಿದಿರಲಿಲ್ಲ. ಪತಿ ನಿಶಾಳನ್ನು ಸಂಜೆ 4 ಗಂಟೆಯ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದ, ಅಲ್ಲಿಗೆ ಬಂದಾಕ್ಷಣ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಆಕೆಯ ಸಾವಿನ ಸುದ್ದಿ ತಿಳಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಆಗಮಿಸಿದರು.

ತನ್ನ ಪತ್ನಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಳು. ಶನಿವಾರ ಉಪವಾಸ ಮಾಡಿದ್ದಳು, ರಾತ್ರಿ ವಾಂತಿ ಮಾಡಿಕೊಂಡಿದ್ದಳು, ನಂತರ ಔಷಧ ಸೇವಿಸಿ ಮಲಗಿದ್ದಳು. ಮರುದಿನ ಭಾನುವಾರವಾಗಿದ್ದರಿಂದ ನಾನು ವಾಕಿಂಗ್​ಗೆ ಹೋಗಿದ್ದೆ, ಹೇಗೂ ರಜೆ ಮಲಗಿದ್ದಾಳೆ ಅಂತಾ ಸುಮ್ಮನಿದ್ದೆ, ಕೆಲಸದವಳು ಬಂದ ಬಳಿಕ ಆಕೆಯನ್ನು ಎಬ್ಬಿಸಿದ್ದೆ ಆಕೆ ಏಳಲಿಲ್ಲ, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದೇನೆ, ಆಸ್ಪತ್ರೆಗೆ ಹೋಗುವಾಗ ಮೂಗು ಹಾಗೂ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು ಎಂದು ಹೇಳಿದ್ದ. ಬಳಿಕ ಆತನೇ ಆರೋಪಿ ಎಂಬುದು ತಿಳಿದುಬಂದಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ