ಮಡಿಕೇರಿ ಹೋಮ್​ಸ್ಟೇನಲ್ಲಿ ಕೇರಳ ಮೂಲದ ದಂಪತಿ, ಮಗು ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 09, 2023 | 4:25 PM

ಪ್ರವಾಸಕ್ಕೆಂದು ಬಂದಿದ್ದ ಕೇರಳ ಮೂಲದ ದಂಪತಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ(Madikeri) ತಾಲೂಕಿನ ಕಗ್ಗೋಡ್ಲು ಗ್ರಾಮದ ಅರೇಕಾ ಹೋಮ್​ಸ್ಟೇನಲ್ಲಿ ನಡೆದಿದೆ. ಇವರು ಕೊಲ್ಲಂ ಮೂಲದವರಾಗಿದ್ದು, ಮೃತರ ಹೆಸರು ತಿಳಿದು ಬಂದಿಲ್ಲ. ಹೋಂಸ್ಟೇಯೊಳಗಡೆಯೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡಿಕೇರಿ ಹೋಮ್​ಸ್ಟೇನಲ್ಲಿ ಕೇರಳ ಮೂಲದ ದಂಪತಿ, ಮಗು ಆತ್ಮಹತ್ಯೆ
ಮಡಿಕೇರಿ ಹೋಮ್​ಸ್ಟೇನಲ್ಲಿ ಕೇರಳ ಮೂಲದ ದಂಪತಿ, ಮಗು ಆತ್ಮಹತ್ಯೆ
Follow us on

ಕೊಡಗು, ಡಿ.09: ಕೇರಳ ಮೂಲದ ದಂಪತಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ(Madikeri) ತಾಲೂಕಿನ ಕಗ್ಗೋಡ್ಲು ಗ್ರಾಮದ ಅರೇಕಾ ಹೋಮ್​ಸ್ಟೇನಲ್ಲಿ ನಡೆದಿದೆ. ಕೊಲ್ಲಂ ಮೂಲದ ಇವರು ನಿನ್ನೆ ಸಂಜೆ 6.30 ಕ್ಕೆ  ಪ್ರವಾಸಕ್ಕೆಂದು ರೆಸಾರ್ಟ್ ಗೆ ಆಗಮಿಸಿದ್ದರು. ಆದರೆ, ಇಂದು ಬೆಳಗ್ಗೆ ಎಷ್ಟು ಹೊತ್ಯಾದರೂ ಬಾಗಿಲು ತೆಗೆಯದ ಹಿನ್ನಲೆ ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಲ್ಲಂ‌ನಲ್ಲಿರುವ ಕುಟುಂಬಸ್ಥರಿಗೆ ಈಗಾಗಲೇ ಪೊಲೀಸರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಟುಂಬಸ್ಥರು ಬಂದ ಬಳಿಕವೇ ರೂಂ ಬಾಗಿಲು ಓಪನ್ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೈಕ್​ನಿಂದ​​ ಆಯಾ ತಪ್ಪಿ ಬಿದ್ದು​ ಸವಾರ ಸ್ಥಳದಲ್ಲೇ ಸಾವು

ತುಮಕೂರು: ಜಿಲ್ಲೆಯ ತಿಪಟೂರು ನಗರದ ಹಾಸನ ಸರ್ಕಲ್​​ ಬಳಿ ಚಲಿಸುತ್ತಿದ್ದ ಬೈಕ್​ನಿಂದ​​ ಆಯಾ ತಪ್ಪಿ ಬಿದ್ದು ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದೀಪಕ್.ಕೆ.ಗೌಡ (24)ಮೃತ ದುರ್ದೈವಿ. ಇತ ಬೆಂಗಳೂರಿನ ರಾಜಗೋಪಾಲ‌ ನಗರದ ನಿವಾಸಿಯಾಗಿದ್ದು, ತಿಪಟೂರಿನಿಂದ ಅರಸೀಕೆರೆಗೆ ಸಂಬಂಧಿಕರ ಮನೆಗೆ ಹೋಗುವ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ತಿಪಟೂರು ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತಿಪಟೂರಿನ‌ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ:ಹಂತಕನಾದ ಸೋಮಾರಿ, ದುಡಿಯಲು ಹೋಗು ಅಂದಿದ್ದಕ್ಕೆ ಪ್ರಾಣಿಯಂತೆ ಪತ್ನಿಯ ಕತ್ತು ಕತ್ತರಿಸಿ, ಸೀರೆಯಿಂದ ತಾನೂ ಆತ್ಮಹತ್ಯೆಗೆ ಶರಣಾದ

ಹಳೆ ವೈಷಮ್ಯದ ಹಿನ್ನೆಲೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರೆಕುರ ಗ್ರಾಮದಲ್ಲಿ ಹಳೆ ವೈಷಮ್ಯದ ಹಿನ್ನಲೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಯೋಗೇಶ್​​ (34) ಹತ್ಯೆಯಾದ ವ್ಯಕ್ತಿ, ಪೇಂಟ್​​ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಯೋಗೇಶ್​ಹತ್ಯೆಗೆ ಹಳೆ ವೈಷಮ್ಯವೇ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕೆಆರ್​ಎಸ್​​ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Sat, 9 December 23