ಖಾರದ‌ಪುಡಿ ಎರಚಿ ದರೋಡೆ ಮಾಡಿದ್ದವರ ಬಂಧನ

ಬೆಂಗಳೂರು: ಒಂಟಿ ಮಹಿಳೆಯನ್ನು ಗುರಿಯಾಗಿಸಿ‌ ಚಾಕು ತೋರಿಸಿ‌, ಖಾರದ‌ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ. ದರೋಡೆಕೋರರಾದ ಹರಿಕೃಷ್ಣ, ಚೇತನ್ ಕುಮಾರ್ ಬಂಧಿತ ಆರೋಪಿಗಳು. ಇವರು ನ.14ರಂದು ಮಹದೇವಪುರದ ರಂಗನಾಥ್​ ಲೇಔಟ್​ನಲ್ಲಿ ದರೋಡೆ ಮಾಡಿದ್ದರು. ಮನೆಯ ಮಾಲಿಕ ನಾಗೇಶ್ ಮನೆಯಿಂದ ಹೊರಹೋದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಖದೀಮರು ನಾಗೇಶ್ ಅವರ ಹೆಂಡತಿಗೆ ಚಾಕು ತೋರಿಸಿ, ಖಾರದಪಡಿ ಎರಚಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ ಚಿನ್ನಾಭರಣ, ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರನ್ನೂ ಕದ್ದೊಯ್ದಿದ್ದಾರೆ. ಆರೋಪಿಯಾಗಿರುವ […]

ಖಾರದ‌ಪುಡಿ ಎರಚಿ ದರೋಡೆ ಮಾಡಿದ್ದವರ ಬಂಧನ

Updated on: Nov 16, 2019 | 5:06 PM

ಬೆಂಗಳೂರು: ಒಂಟಿ ಮಹಿಳೆಯನ್ನು ಗುರಿಯಾಗಿಸಿ‌ ಚಾಕು ತೋರಿಸಿ‌, ಖಾರದ‌ಪುಡಿ ಎರಚಿ ದರೋಡೆ ಮಾಡಿದ್ದ ಆರೋಪಿಗಳನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ದರೋಡೆಕೋರರಾದ ಹರಿಕೃಷ್ಣ, ಚೇತನ್ ಕುಮಾರ್ ಬಂಧಿತ ಆರೋಪಿಗಳು. ಇವರು ನ.14ರಂದು ಮಹದೇವಪುರದ ರಂಗನಾಥ್​ ಲೇಔಟ್​ನಲ್ಲಿ ದರೋಡೆ ಮಾಡಿದ್ದರು. ಮನೆಯ ಮಾಲಿಕ ನಾಗೇಶ್ ಮನೆಯಿಂದ ಹೊರಹೋದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಖದೀಮರು ನಾಗೇಶ್ ಅವರ ಹೆಂಡತಿಗೆ ಚಾಕು ತೋರಿಸಿ, ಖಾರದಪಡಿ ಎರಚಿ ದರೋಡೆ ಮಾಡಿದ್ದಾರೆ.

ಮನೆಯಲ್ಲಿದ್ದ ಚಿನ್ನಾಭರಣ, ಮನೆ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರನ್ನೂ ಕದ್ದೊಯ್ದಿದ್ದಾರೆ. ಆರೋಪಿಯಾಗಿರುವ ಹರಿಕೃಷ್ಣ ನಾಗೇಶ್​​ ಅವರ ದೂರದ ಸಂಬಂಧಿ. ಈ ಹಿಂದೆ ಬ್ಯುಸಿನೆಸ್ ಮಾಡಲು ನಾಗೇಶ್‌ಬಳಿ ಹಣ ಕೇಳಿದ್ದ ಆದರೆ ನಾಗೇಶ್ ಹರಿಕೃಷ್ಣನಿಗೆ ಹಣ ನೀಡಿರಲಿಲ್ಲ. ಇದೇ ಕಾರಣಕ್ಕಾಗಿ ದರೋಡೆ ಮಾಡಿದ್ದಾರೆ.

ಸದ್ಯ ಮಹದೇವಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ ಚಿನ್ನಾಭರಣ, 25 ಸಾವಿರ ನಗದು, ಬೈಕ್​​, ಇನ್ನೋವಾ ಕಾರು ವಶಕ್ಕೆ ಪಡೆದಿದ್ದಾರೆ.