ಹೈದರಾಬಾದ್: ಪ್ರತಿಷ್ಠಿತ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಅನಿವಾಸಿ ಭಾರತೀಯರೊಬ್ಬರನ್ನು (NRI) ವಂಚಿಸಿದ್ದ ಆರೋಪದ ಮೇಲೆ ಮಾಳವಿಕಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ. ಮಾಯಾಂಗನೆ ಮಾಳವಿಕಾ ಇದೇ ರೀತಿ ಅನೇಕರಿಗೆ ವಂಚಿಸಿದ್ದ ಮಹಿಳೆ.
ಅಮೇರಿಕಾ ವಾಸಿ ಸಾಫ್ಟ್ವೇರ್ ಇಂಜಿನಿಯರ್ ವರುಣ ಎಂಬಾತನಿಗೆ ಸಹ ಮಾಳವಿಕಾ ಮೋಸ ಮಾಡಿದ್ದಳು ಎನ್ನಲಾಗಿದೆ. ಮಾಳವಿಕಾ, ತಾನು ಡಾಕ್ಟರ್ ಎಂದು ಪರಿಚಯಿಸಿಕೊಂಡು ವರುಣ ಅನ್ನೋ NRI ಬಳಿ 65 ಲಕ್ಷ ರೂಪಾಯಿ ಲಪಟಾಯಿಸಿದ್ದಳು.
ಈ ಹಿಂದೆ ಸಹ ಮೂರು ಬಾರಿ ಅರೆಸ್ಟ್ ಆಗಿದ್ದಳೆನ್ನಲಾದ ಮಾಳವಿಕಾ, ಮ್ಯಾಟ್ರಿಮನಿ ಸೈಟ್ ಗಳಲ್ಲಿ ಸುಂದರ ಯುವತಿಯರ ಫೋಟೋ ಹಾಕಿ ಯುವಕರನ್ನು ಆಕರ್ಷಿಸುತ್ತಿದ್ದಳು. ಮಾಳವಿಕಾ ತನ್ನ ಪತಿ, ಅತ್ತೆ, ಮಾವನೊಂದಿಗೆ ಸೇರಿ ಮೋಸಗಳನ್ನು ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.