CCB ಎಸಿಪಿ ಪ್ರಭುಶಂಕರ್ಗೆ ನಾನೇ 62 ಲಕ್ಷ ಹಣ ನೀಡಿದ್ದೇನೆ -ACB ಮುಂದೆ ಸಾಕ್ಷ್ಯ ದಾಖಲು!
ಬೆಂಗಳೂರು: ಕೊರೊನಾ ಲಾಕ್ಡೌನ್ ಸಮಯದಲ್ಲಿ ಸಿಗರೇಟ್ ಡೀಲರ್ಗಳಿಂದ ಸಿಸಿಬಿ ಪೊಲೀಸರು ಲಂಚ ಪಡೆದ ಪ್ರಕರಣ ಸಂಬಂಧ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಯನ್ನು ಎಸಿಬಿ ದಾಖಲಿಸಿಕೊಂಡಿದೆ. ಎರಡು ದಿನಗಳ ಕಾಲ 8 ಜನ ಸಿಗರೇಟ್ ವಿತರಕರು ಸೇರಿ 10 ಜನರ ವಿಚಾರಣೆಯನ್ನು ಎಸಿಬಿ ಪೊಲೀಸರು ನಡೆಸಿದ್ದಾರೆ. ಪ್ರಮುಖ ಸಾಕ್ಷಿ ಆದಿಲ್ ಅಜೀಜ್ ಹೇಳಿಕೆಯನ್ನು ಎಸಿಬಿ ದಾಖಲಿಸಿದೆ. ಅಮಾನತಾದ ಸಿಸಿಬಿ ಎಸಿಪಿ ಪ್ರಭುಶಂಕರ್ ಅವರಿಗೆ ನನ್ನ ಕೈಯಿಂದಲೇ 62.5 ಲಕ್ಷ ಹಣವನ್ನು ನೀಡಿದ್ದೇನೆ. ಏಪ್ರಿಲ್ 30 ರಂದು 32.5 ಲಕ್ಷ, […]
ಬೆಂಗಳೂರು: ಕೊರೊನಾ ಲಾಕ್ಡೌನ್ ಸಮಯದಲ್ಲಿ ಸಿಗರೇಟ್ ಡೀಲರ್ಗಳಿಂದ ಸಿಸಿಬಿ ಪೊಲೀಸರು ಲಂಚ ಪಡೆದ ಪ್ರಕರಣ ಸಂಬಂಧ ದೂರುದಾರರು ಮತ್ತು ಸಾಕ್ಷಿಗಳ ಹೇಳಿಕೆಯನ್ನು ಎಸಿಬಿ ದಾಖಲಿಸಿಕೊಂಡಿದೆ. ಎರಡು ದಿನಗಳ ಕಾಲ 8 ಜನ ಸಿಗರೇಟ್ ವಿತರಕರು ಸೇರಿ 10 ಜನರ ವಿಚಾರಣೆಯನ್ನು ಎಸಿಬಿ ಪೊಲೀಸರು ನಡೆಸಿದ್ದಾರೆ. ಪ್ರಮುಖ ಸಾಕ್ಷಿ ಆದಿಲ್ ಅಜೀಜ್ ಹೇಳಿಕೆಯನ್ನು ಎಸಿಬಿ ದಾಖಲಿಸಿದೆ.
ಅಮಾನತಾದ ಸಿಸಿಬಿ ಎಸಿಪಿ ಪ್ರಭುಶಂಕರ್ ಅವರಿಗೆ ನನ್ನ ಕೈಯಿಂದಲೇ 62.5 ಲಕ್ಷ ಹಣವನ್ನು ನೀಡಿದ್ದೇನೆ. ಏಪ್ರಿಲ್ 30 ರಂದು 32.5 ಲಕ್ಷ, ಮೇ ಮೊದಲ ವಾರದಲ್ಲಿ 30 ಲಕ್ಷ ರೂ. ಕೊಟ್ಟಿದ್ದೇನೆ. ಒಟ್ಟಾರೆಯಾಗಿ 62.5 ಲಕ್ಷ ರೂಪಾಯಿ ನೀಡಿದ್ದೇನೆ. ಸಿಸಿಬಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಹಣ ನೀಡಿರುವುದಾಗಿ ಆದಿಲ್ ಅಜೀಜ್ ಹೇಳಿಕೆ ಕೊಟ್ಟಿದ್ದಾನೆ.
ಯಲಹಂಕ ನಿವಾಸಿ ಬಾಬು ರಾಜೇಂದ್ರ ಪ್ರಸಾದ್ ಮತ್ತು ಭೂಷಣ್ ಮೂಲಕ ಮೂವರು ಸಿಸಿಬಿ ಅಧಿಕಾರಿಗಳ ಸಂಪರ್ಕ ಮಾಡಿದ್ದರು. ಪ್ರತಿಯೊಬ್ಬ ಸಿಗರೇಟ್ ವಿತರಕರಿಂದ 14 ಲಕ್ಷಕ್ಕೆ ಸಿಸಿಬಿ ಅಧಿಕಾರಿಗಳು ಬೇಡಿಕೆಯಿಟ್ಟಿದ್ದರು ಎಂದು ಬಾಯ್ಬಿಟ್ಟಿದ್ದಾನೆ ಎಂದು ಎಸಿಬಿ ಉನ್ನತ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ.