ಅಕ್ರಮ ಸಂಬಂಧ ಶಂಕೆ: ಕತ್ತು ಹಿಸುಕಿ ಪತ್ನಿಯನ್ನೇ ಕೊಂದ ಪಾಪಿ
ನೆಲಮಂಗಲ: ಅಕ್ರಮ ಸಂಬಂಧವನ್ನು ಶಂಕಿಸಿ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ನಡೆದಿದೆ. 23 ವರ್ಷದ ರಮ್ಯಾರನ್ನು ಆರೋಪಿ ಪತಿ ಬೋರ ಶೆಟ್ಟಿ ಕೊಲೆ ಮಾಡಿದ್ದಾನೆ. ಮಧುಗಿರಿ ಮೂಲದ ಸಿದ್ದಪುರದ ರಮ್ಯಾ 2 ವರ್ಷದ ಹಿಂದೆ ಮಂಡ್ಯ ಮೂಲದ ಬೋರ ಶೆಟ್ಟಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ವಿವಾಹವಾದ ಬಳಿಕ ಅರಿಶಿನಕುಂಟೆಯಲ್ಲಿ ದಂಪತಿ ವಾಸವಿದ್ರು. ತಡರಾತ್ರಿ ರಮ್ಯಾರನ್ನ ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೋಷಕರ ಬಳಿ ನಾಟಕವಾಡಿದ್ದ. ಪೋಷಕರಿಗೆ ಅನುಮಾನ ಬಂದು ನೆಲಮಂಗಲ ನಗರ […]
ನೆಲಮಂಗಲ: ಅಕ್ರಮ ಸಂಬಂಧವನ್ನು ಶಂಕಿಸಿ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿ ನಡೆದಿದೆ. 23 ವರ್ಷದ ರಮ್ಯಾರನ್ನು ಆರೋಪಿ ಪತಿ ಬೋರ ಶೆಟ್ಟಿ ಕೊಲೆ ಮಾಡಿದ್ದಾನೆ.
ಮಧುಗಿರಿ ಮೂಲದ ಸಿದ್ದಪುರದ ರಮ್ಯಾ 2 ವರ್ಷದ ಹಿಂದೆ ಮಂಡ್ಯ ಮೂಲದ ಬೋರ ಶೆಟ್ಟಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ವಿವಾಹವಾದ ಬಳಿಕ ಅರಿಶಿನಕುಂಟೆಯಲ್ಲಿ ದಂಪತಿ ವಾಸವಿದ್ರು. ತಡರಾತ್ರಿ ರಮ್ಯಾರನ್ನ ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೋಷಕರ ಬಳಿ ನಾಟಕವಾಡಿದ್ದ.
ಪೋಷಕರಿಗೆ ಅನುಮಾನ ಬಂದು ನೆಲಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಪೊಲೀಸರ ವಿಚಾರಣೆ ವೇಳೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಬೋರ ಶೆಟ್ಟಿ ತಪ್ಪೊಪ್ಪಿಕೊಂಡಿದ್ದಾನೆ.