ಬೆಂಗಳೂರು: ಇಸ್ಪೀಟ್ ಎಲೆಗಳಿಗೆ ಡಿವೈಸ್ ಅಳವಡಿಸಿ ಮೋಸಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ನಿವಾಸಿ ಇಮ್ರಾನ್ ಬಂಧಿತ ಆರೋಪಿ. ಈತ ಹಣ ಮಾಡುವ ಆಸೆಗೆ ಟೆಕ್ನಾಲಜಿ ಬಳಸಿ ಇಸ್ಪೀಟ್ ಎಲೆಗೆ ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿ ಹೈಟೆಕ್ ಟಚ್ ಕೊಟ್ಟು ಯಾಮಾರಿಸುತ್ತಿದ್ದ.
ಹಾಗೂ ಇದೇ ರೀತಿಯ ಎಲೆಗಳನ್ನ ತಯಾರಿಸಿ ಮಾರಾಟ ಮಾಡಲು ಯತ್ನಿಸಿದ. ಆದರೆ ಅಷ್ಟರಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಾಳಿ ವೇಳೆ 4 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಡಿವೈಸ್, ಹಿಡನ್ ಕ್ಯಾಮೆರಾ, ಮೈಕ್ರೋ ಕ್ಯಾಮೆರಾ, ನಗದು ವಶಕ್ಕೆ ಪಡೆಯಲಾಗಿದೆ. ಅಲ್ದೆ 500 ರೂಪಾಯಿ ನೋಟಿಗೂ ಮೈಕ್ರೋ ಕ್ಯಾಮೆರಾ ಆಳವಡಿಕೆ ಮಾಡಿದ್ದ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.