ಹಾಡಹಗಲೇ ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ
ಉಡುಪಿ: ಹಾಡಹಗಲೇ ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಚ್ಚಿ ಕೊಲೆಗೈದಿರುವ ಘಟನೆ ಕುಂದಾಪುರ ತಾಲೂಕಿನ ನೇರಳಕಟ್ಟೆ ಗ್ರಾಮದ ಬಳಿ ನಡೆದಿದೆ. ಜೋರುಮಕ್ಕಿ ವಾಲ್ತೂರು ಬಾಬುಶೆಟ್ಟಿ(55) ಹತ್ಯೆಯಾದ ದುರ್ದೈವಿ. ಬಡ್ಡಿ ವ್ಯವಹಾರ ಮತ್ತು ಜಮೀನು ವಿಷಯದಲ್ಲಿ ಬಾಬು ಶೆಟ್ಟಿ ಮೇಲೆ ಹಲವರಿಗೆ ದ್ವೇಷವಿತ್ತು. ಹೀಗಾಗಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಬಾಬು ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಹಾಡಹಗಲೇ ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಇರಿದು ಕೊಚ್ಚಿ ಕೊಲೆಗೈದಿರುವ ಘಟನೆ ಕುಂದಾಪುರ ತಾಲೂಕಿನ ನೇರಳಕಟ್ಟೆ ಗ್ರಾಮದ ಬಳಿ ನಡೆದಿದೆ. ಜೋರುಮಕ್ಕಿ ವಾಲ್ತೂರು ಬಾಬುಶೆಟ್ಟಿ(55) ಹತ್ಯೆಯಾದ ದುರ್ದೈವಿ.
ಬಡ್ಡಿ ವ್ಯವಹಾರ ಮತ್ತು ಜಮೀನು ವಿಷಯದಲ್ಲಿ ಬಾಬು ಶೆಟ್ಟಿ ಮೇಲೆ ಹಲವರಿಗೆ ದ್ವೇಷವಿತ್ತು. ಹೀಗಾಗಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡುರಸ್ತೆಯಲ್ಲೇ ಬಾಬು ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.