ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿ ಅರೆಸ್ಟ್

ಬೆಂಗಳೂರು: ಹೆಣ್ಣು ಮಕ್ಕಳ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುಳ ಅಲಿಯಾಸ್ ಕಳ್ಳ ಮಂಜಿ ಹಾಗೂ ಚೆಲುವರಾಯಿ ಅಲಿಯಾಸ್ ಚೆಲುವ ಬಂಧಿತ ಆರೋಪಿಗಳು. ಇವರು ಕಳೆದ ಹಲವು ವರ್ಷಗಳಿಂದ 100 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ರು. ಜ್ಯುವಲ್ಲರಿ ಶಾಪ್ ನಿಂದ ಹೊರಬರುವ ವಯೋವೃದ್ಧೆ, ಮಹಿಳೆಯರನ್ನು ಇವರು ಟಾರ್ಗೆಟ್ ಮಾಡ್ತಿದ್ರು. ಚಿನ್ನಾಭರಣ ಧರಿಸಿ ಬರುವವರನ್ನು ಟಾರ್ಗೆಟ್ ಮಾಡಿ. ಕಂತೆ ಕಂತೆ ನೋಟು ತೋರಿಸಿ ಹಣ ಬಿದ್ದಿದೆ. ಹಣ ನಿಮ್ಮದಲ್ಲಾ […]

ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿ ಅರೆಸ್ಟ್
Follow us
ಸಾಧು ಶ್ರೀನಾಥ್​
|

Updated on: Dec 17, 2019 | 10:06 AM

ಬೆಂಗಳೂರು: ಹೆಣ್ಣು ಮಕ್ಕಳ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ದಂಪತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುಳ ಅಲಿಯಾಸ್ ಕಳ್ಳ ಮಂಜಿ ಹಾಗೂ ಚೆಲುವರಾಯಿ ಅಲಿಯಾಸ್ ಚೆಲುವ ಬಂಧಿತ ಆರೋಪಿಗಳು. ಇವರು ಕಳೆದ ಹಲವು ವರ್ಷಗಳಿಂದ 100 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ರು. ಜ್ಯುವಲ್ಲರಿ ಶಾಪ್ ನಿಂದ ಹೊರಬರುವ ವಯೋವೃದ್ಧೆ, ಮಹಿಳೆಯರನ್ನು ಇವರು ಟಾರ್ಗೆಟ್ ಮಾಡ್ತಿದ್ರು.

ಚಿನ್ನಾಭರಣ ಧರಿಸಿ ಬರುವವರನ್ನು ಟಾರ್ಗೆಟ್ ಮಾಡಿ. ಕಂತೆ ಕಂತೆ ನೋಟು ತೋರಿಸಿ ಹಣ ಬಿದ್ದಿದೆ. ಹಣ ನಿಮ್ಮದಲ್ಲಾ ಅನ್ಸತ್ತೆ, ಯಾರೋ ಬೀಳಿಸಿಕೊಂಡು ಹೋಗಿದ್ದಾರೆ ಎಂದು ಸುಳ್ಳು ಹೇಳಿ. ನಂತರ ಹಣ ಸಿಕ್ಕಿರೋದು ನಮ್ಮಿಬ್ಬರಿಗೆ ಗೊತ್ತು ನಾವಿಬ್ರು ಹಣ ಹಂಚಿಕೊಳ್ಳೋಣ ಎಂದು ನಂಬಿಸಿ.

ಯಾರೂ ಇಲ್ದೆ ಇರೋ ಜಾಗಕ್ಕೆ ಹೋಗಿ ಹಣ ಶೇರ್ ಮಾಡ್ಕೊಳ್ಳೋಣ ಎಂದು ಕರೆದುಕೊಂಡು ಹೋಗುತ್ತಿದ್ದಳು ಮಂಜುಳ. ನಂತರ ನಿರ್ಜನ ಪ್ರದೇಶಕ್ಕೆ ಹೋಗಿ ನಿಮ್ಮ ಕತ್ತಲ್ಲಿರೋ ಒಡವೆ ತೆಗೆಯಿರಿ. ಇಲ್ಲಿ ಚೈನ್ ಸ್ನಾಚರ್ಸ್ ಇದ್ದಾರೆ ಸರ ಕಳ್ಳತನ ಮಾಡಿಕೊಂಡು ಹೋಗ್ತಾರೆ ಅಂತ ಹೆದರಿಸುತ್ತಿದ್ಲು.

ಬಳಿಕ ಸರ ಪಡೆದು ನಮ್ಮ ಮನೆಗೆ ಹೋಗೋಣ ಅಲ್ಲೇ ಹಣ ಲೆಕ್ಕ ಮಾಡೋಣ ಎಂದು ನಂಬಿಸಿ ತನ್ನ ಗಂಡ ಚೆಲುವನನ್ನ ಕರೆ ಮಾಡಿ ಆಕೆ ಇರೋ ಜಾಗಕ್ಕೆ ಕರೆಸಿಕೊಳ್ಳುತ್ತಿದ್ಲು. ತಾನು ಯಾವುದೇ ಕಾರಣಕ್ಕೂ ಮೋಸ ಮಾಡಲ್ಲ ನಂಬಿಕೆಯ ಹೆಣ್ಣು ಎನ್ನವ ರೀತಿ ನಂಬಿಸಿ. ತನ್ನ ನಂಬರ್ ಹಾಗೂ ಅಡ್ರೆಸ್ ಕೊಟ್ಟು ಆಟೋದಲ್ಲಿ ನನ್ನ ಫಾಲೋ ಮಾಡ್ಕೊಂಡು ಬಾ ಎಂದು ಹೇಳಿ ಚಿನ್ನಾಭರಣ ಕೈಗೆ ಸಿಕ್ಕ ಬಳಿಕ ದಂಪತಿಗಳಿಬ್ಬರು ಎಸ್ಕೇಪ್ ಆಗುತ್ತಿದ್ರು. ಸುಬ್ರಮಣ್ಯಪುರ ಎಸಿಪಿ ಮಹಾದೇವ್ ಹಾಗೂ ಇನ್ಸಪೆಕ್ಟರ್ ಧರ್ಮೇಂದ್ರ ಆರೋಪಿಗಳನ್ನು ಹಿಡಿಯಲು ತಂಡ ರೆಡಿ ಮಾಡಿದ್ರು. ಸದ್ಯ ದಂಪತಿಗಳಿಬ್ಬರನ್ನ ಬಂಧಿಸಿರುವ ಪೊಲೀಸರು 7ವರೆ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ