ರೌಡಿಶೀಟರ್ ಭರತ್ ಅಲಿಯಾಸ್ ಕೋಗಿಲು ಭರತ್ ಬರ್ಬರ ಹತ್ಯೆ
ಬೆಂಗಳೂರು: ನಗರದ ಸಂಪಿಗೆಹಳ್ಳಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆಯಾಗಿದೆ. ರೌಡಿಶೀಟರ್ ಭರತ್ ಅಲಿಯಾಸ್ ಕೋಗಿಲು ಭರತ್‌ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ. ರಾತ್ರಿ 9:30ರ ಸುಮಾರಿಗೆ ಸಂಪಿಗೆಹಳ್ಳಿಯ ವಿಜಯ ವೈನ್ಸ್ ಮುಂಭಾಗ ನಾಲ್ಕೈದು ಜನ ದುಷ್ಕರ್ಮಿಗಳು ಮಾರಕಾಸ್ತಗಳಿಂದ ಯಲಹಂಕ ಪೊಲೀಸ್ ಠಾಣೆಯ ರೌಡಿಶೀಟರ್ ಭರತ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಭರತ್ ವಿರುದ್ಧ ಯಲಹಂಕ, ಸಂಪಿಗೆ ಹಳ್ಳಿ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ನಗರದ ಸಂಪಿಗೆಹಳ್ಳಿಯಲ್ಲಿ ರೌಡಿಶೀಟರ್ ಬರ್ಬರ ಹತ್ಯೆಯಾಗಿದೆ. ರೌಡಿಶೀಟರ್ ಭರತ್ ಅಲಿಯಾಸ್ ಕೋಗಿಲು ಭರತ್‌ನನ್ನು ದುಷ್ಕರ್ಮಿಗಳು ಅಟ್ಟಾಡಿಸಿ ಮಾರಕಾಸ್ತಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ.
ರಾತ್ರಿ 9:30ರ ಸುಮಾರಿಗೆ ಸಂಪಿಗೆಹಳ್ಳಿಯ ವಿಜಯ ವೈನ್ಸ್ ಮುಂಭಾಗ ನಾಲ್ಕೈದು ಜನ ದುಷ್ಕರ್ಮಿಗಳು ಮಾರಕಾಸ್ತಗಳಿಂದ ಯಲಹಂಕ ಪೊಲೀಸ್ ಠಾಣೆಯ ರೌಡಿಶೀಟರ್ ಭರತ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಭರತ್ ವಿರುದ್ಧ ಯಲಹಂಕ, ಸಂಪಿಗೆ ಹಳ್ಳಿ ಸೇರಿದಂತೆ ಇತರೆ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.