ಸಿಸಿಬಿ ಕಾರ್ಯಾಚರಣೆಗೆ ಬೆದರಿದ ಡಾರ್ಕ್ ವೆಬ್ ದಂಧೆಕೋರರು
ಬೆಂಗಳೂರು: ಡಾರ್ಕ್ ವೆಬ್ ಮೂಲಕ ಹೈಡ್ರೊ ಗಾಂಜಾ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಸುದ್ದಗುಂಟೆ ಪಾಳ್ಯದಲ್ಲಿ ಅಥೀಪ್, ಸಲೀಂರನ್ನು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ದಿನಗಳ ಹಿಂದೆ ಕೆಂಗೇರಿ ಬಳಿ ಅಮರ್ಥ್ಯ ರಿಷಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಮರ್ಥ್ಯ ರಿಷಿ ಮತ್ತು ಅಥೀಪ್ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಅದ್ರೆ ಅಥೀಪ್ ಅರೆಸ್ಟ್ ಆಗಿದ್ದ ವಿಚಾರವನ್ನು ರಿಷಿ ಸೇರಿದಂತೆ ಅನೇಕರು ಡಾರ್ಕ್ ವೆಬ್ನಲ್ಲಿ ಹಂಚಿಕೊಂಡಿದ್ರು. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಡಾರ್ಕ್ ವೆಬ್ ದಂಧೆಕೋರರು […]
ಬೆಂಗಳೂರು: ಡಾರ್ಕ್ ವೆಬ್ ಮೂಲಕ ಹೈಡ್ರೊ ಗಾಂಜಾ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಸುದ್ದಗುಂಟೆ ಪಾಳ್ಯದಲ್ಲಿ ಅಥೀಪ್, ಸಲೀಂರನ್ನು ಅರೆಸ್ಟ್ ಮಾಡಿದ್ದರು. ಬಳಿಕ ಎರಡು ದಿನಗಳ ಹಿಂದೆ ಕೆಂಗೇರಿ ಬಳಿ ಅಮರ್ಥ್ಯ ರಿಷಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಮರ್ಥ್ಯ ರಿಷಿ ಮತ್ತು ಅಥೀಪ್ ನಡುವೆ ಯಾವುದೇ ಸಂಬಂಧ ಇರಲಿಲ್ಲ. ಅದ್ರೆ ಅಥೀಪ್ ಅರೆಸ್ಟ್ ಆಗಿದ್ದ ವಿಚಾರವನ್ನು ರಿಷಿ ಸೇರಿದಂತೆ ಅನೇಕರು ಡಾರ್ಕ್ ವೆಬ್ನಲ್ಲಿ ಹಂಚಿಕೊಂಡಿದ್ರು. ಮಾಧ್ಯಮಗಳಲ್ಲಿ ಬಂದ ಸುದ್ದಿಯನ್ನು ಡಾರ್ಕ್ ವೆಬ್ ದಂಧೆಕೋರರು ಹಂಚಿಕೊಂಡಿದ್ದಾರೆ. ಬೆಂಗಳೂರು ಸಿಸಿಬಿ ಪೊಲೀಸರು ಡಾರ್ಕ್ ನೆಟ್ ಕ್ರಾಕ್ ಮಾಡಿದ್ದಾರೆ ಎಚ್ಚರಿಕೆ ಎನ್ನುವ ಸಂದೇಶ ಸಾರಲಾಗಿತ್ತು. ಈ ಸಂದೇಶವನ್ನು ರಿಷಿ ಸೇರಿದಂತೆ ಹಲವು ಭಾರತೀಯ ಮೂಲದ ಖಾತೆಗಳಿಂದ ಹಂಚಿಕೆ ಮಾಡಲಾಗಿದೆ.
ಡಾರ್ಕ್ ವೆಬ್ ಖಾತೆ ಕ್ಲೋಸ್ ಮಾಡಲು ಸಂದೇಶ: ಡಾರ್ಕ್ ನೆಟ್ ಸೇಫ್ ಅಲ್ಲ. ಬೇರೆ ಮಾರ್ಗ ಹುಡುಕಿ ಜೊತೆಗೆ ಡಾರ್ಕ್ ವೆಬ್ ಖಾತೆ ಕ್ಲೋಸ್ ಮಾಡಲು ಸಂದೇಶ ರವಾನಿಸಲಾಗಿದೆ. ವಿಶ್ವ ಮಟ್ಟದಲ್ಲಿ ಡಾರ್ಕ್ ವೆಬ್ ಬಳಸಿ ಮಾದಕ ವಸ್ತುಗಳು, ಅಕ್ರಮ ಶಸ್ತ್ರಾಸ್ತ್ರ ಮತ್ತು ಮಾನವ ಅಂಗಾಂಗ ಮಾರಾಟ ನಡೆಯುತ್ತಿದೆ ಎಂದು ವಿಚಾರಣೆ ವೇಳೆ ಡ್ರಗ್ ಪೆಡ್ಲರ್ಸ್ ಬಾಯ್ಬಿಟ್ಟಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಇನ್ನು ಹಲವು ಜನರು ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಜಾಲದಲ್ಲಿ ಸಕ್ರಿಯವಾಗಿರೋದು ಸಹ ಪತ್ತೆಯಾಗಿದೆ.