ಬೆಂಗಳೂರು: ನಗರದ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರೊಫೆಸರ್ಗಳ ಫೋಟೋ ಮಾರ್ಫಿಂಗ್ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ವೈಟ್ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ವಿಶ್ವಾಸ್ ಬಂಧಿತ ಆರೋಪಿ.
ವಿಶ್ವಾಸ್ ಬೆದರಿಕೆ ಒಡ್ಡಿದ್ದ ಹಿನ್ನೆಲೆಯಲ್ಲಿ ಆತ ಹಾಗೂ ಆತನ ಗ್ಯಾಂಗ್ ವಿರುದ್ಧ ಪ್ರೊಫೆಸರ್ ಒಬ್ಬರು ವೈಟ್ಫೀಲ್ಡ್ ವಿಭಾಗದ CEN ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಆರೋಪಿ ವಿಶ್ವಾಸ್ನನ್ನು ಬಂಧಿಸಿದ್ದಾರೆ. ಅರೋಪಿ ನಗರದ ಹೊರವಲಯದ ಚಿಕ್ಕಜಾಲದ ಸಮೀಪ ಕೋಳಿ ಫಾರಂ ಇಟ್ಟುಕೊಂಡಿದ್ದ ಎಂದು ಸಹ ತಿಳಿದುಬಂದಿದೆ. ಸದ್ಯ ಆರೋಪಿಗೆ ಖಾಕಿ ಪಡೆ ವಿಚಾರಣೆ ನಡೆಸುತ್ತಿದ್ದು ಆತನ ಸಹಚರರರ ಪತ್ತೆಗಾಗಿ ಬಲೆ ಬೀಸಿದ್ದಾರೆ.