ಸೂಟ್‌ಕೇಸ್‌ನಲ್ಲಿ 2 ಶವ ಪತ್ತೆ; ಕೊನೆಗೂ ಬಯಲಾಯ್ತು ಡಬಲ್ ಮರ್ಡರ್ ರಹಸ್ಯ

ಕಳೆದ ವಾರ ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿರುವ ಕ್ಲಿಫ್ಟನ್ ತೂಗು ಸೇತುವೆಯಲ್ಲಿ ಸೂಟ್‌ಕೇಸ್‌ಗಳು ಪತ್ತೆಯಾದ ನಂತರ ಅಧಿಕಾರಿಗಳು ಅದರಲ್ಲಿ ಸಿಕ್ಕ ಶವಗಳ ಸುಳಿವು ಹುಡುಕಲು ಆರಂಭಿಸಿದ್ದರು. ಕೊನೆಗೂ ಅದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೂಟ್‌ಕೇಸ್‌ನಲ್ಲಿ 2 ಶವ ಪತ್ತೆ; ಕೊನೆಗೂ ಬಯಲಾಯ್ತು ಡಬಲ್ ಮರ್ಡರ್ ರಹಸ್ಯ
ಸಾಂದರ್ಭಿಕ ಚಿತ್ರ

Updated on: Jul 15, 2024 | 5:48 PM

ಲಂಡನ್: ಫ್ರಾನ್ಸ್‌ನಿಂದ ಬಂದ ವ್ಯಕ್ತಿಯ ಸೂಟ್‌ಕೇಸ್‌ಗಳಲ್ಲಿ ಇಬ್ಬರು ವ್ಯಕ್ತಿಗಳ ಮೃತದೇಹಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬ್ರಿಟನ್‌ನ ಪ್ರಸಿದ್ಧ ಸೇತುವೆಯೊಂದರ ಕೆಳಗೆ ಎಸೆಯಲಾಗಿದ್ದ ಸೂಟ್​ಕೇಸ್​ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಇದರ ನಂತರ ಕೊನೆಗೂ ಕೊಲೆಗಾರನನ್ನು ಪೊಲೀಸರು ಕಂಡುಹಿಡಿದಿದ್ದಾರೆ.

ಕೊಲೆಯಾದ ವ್ಯಕ್ತಿಗಳಿಗೂ ಕೊಲೆಗಾರನಿಗೂ ಈ ಹಿಂದೆ ಸಂಬಂಧವಿತ್ತು. ಕೊಲೆಯಾದವರಿಬ್ಬರೂ ಸಲಿಂಗ ಕಾಮಿಗಳು. ಅವರಿಬ್ಬರೂ ಪಶ್ಚಿಮ ಲಂಡನ್‌ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗಾರನೂ ಅವರೊಂದಿಗೆ ವಾಸಿಸುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: 3ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಿ ಕಾಲುವೆಗೆ ಎಸೆದ ಅಪ್ರಾಪ್ತ ಬಾಲಕರು

ಸಲಿಂಗ ಕಾಮದ ಕಾರಣಕ್ಕೇ ಈ ಕೊಲೆ ನಡೆದಿದೆಯೇ? ಎಂಬ ಬಗ್ಗೆ ಇನ್ನೂ ತನಿಖೆ ನಡೆಸಲಾಗುತ್ತಿದೆ. ಕೊಲೆಗಾರನ ಬಗ್ಗೆ ಸುಳಿವು ಸಿಕ್ಕಿದ್ದರೂ ಕೊಲೆಯ ಹಿಂದಿನ ಕಾರಣ ಇನ್ನೂ ದೃಢಪಟ್ಟಿಲ್ಲ. ಪೊಲೀಸರು ಕೊಲೆಯಾದವರನ್ನು ಆಲ್ಬರ್ಟ್ ಅಲ್ಫೋನ್ಸೊ (62) ಮತ್ತು ಪಾಲ್ ಲಾಂಗ್‌ವರ್ತ್ (71) ಎಂದು ಗುರುತಿಸಿದ್ದು, ಇವರು ಫ್ರಾನ್ಸ್‌ನ ಬ್ರಿಟಿಷ್ ಪ್ರಜೆಗಳು ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ 34 ವರ್ಷದ ಕೊಲಂಬಿಯಾದ ಪ್ರಜೆ ಯೋಸ್ಟಿನ್ ಆಂಡ್ರೆಸ್ ಮೊಸ್ಕ್ವೆರಾ ಅವರನ್ನು ಶನಿವಾರ ಬ್ರಿಸ್ಟಲ್‌ನಲ್ಲಿ ಬಂಧಿಸಲಾಗಿದೆ ಮತ್ತು ಸೋಮವಾರ ಆರೋಪ ಹೊರಿಸಲಾಗಿದೆ ಎಂದು ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 60ಕ್ಕೂ ಹೆಚ್ಚು ನಾಯಿಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ವ್ಯಕ್ತಿಗೆ 249 ವರ್ಷಗಳ ಜೈಲು ಶಿಕ್ಷೆ

ಮೊಸ್ಕ್ವೆರಾ ಕೂಡ ಕೊಲೆಯಾದವರೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಸ್ವಲ್ಪ ಸಮಯದವರೆಗೆ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಾಂಗ್‌ವರ್ತ್ ಬ್ರಿಟಿಷ್ ಮತ್ತು ಅಲ್ಫೊನ್ಸೊ ಮೂಲತಃ ಫ್ರಾನ್ಸ್‌ನವರಾಗಿದ್ದರೂ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ