ದೆಹಲಿಯಲ್ಲಿ ಮತ್ತೊಂದು ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕರವಾಲ್ ನಗರ ಪ್ರದೇಶದಲ್ಲಿ ಯುವಕನೊಬ್ಬನನ್ನು ಹೊಡೆದು ಕೊಂದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಯುವಕನನ್ನು ದೀಪಕ್ ಎಂದು ಗುರುತಿಸಲಾಗಿದ್ದು, ಆತನಿಗೆ 25 ವರ್ಷ ವಯಸ್ಸಾಗಿತ್ತು ಮತ್ತು ಶಿವ ವಿಹಾರ್ ನಿವಾಸಿ ಎಂದು ತಿಳಿಸಿದ್ದಾರೆ.
ದೀಪಕ್ ಶಿವವಿಹಾರ್ ಬಳಿ ಮೋಟಾರ್ ಸೈಕಲ್ ನಲ್ಲಿ ಎಲ್ಲೋ ಹೋಗುತ್ತಿದ್ದಾಗ ಮೂವರು ಯುವಕರು ಬಂದು ತಡೆದಿದ್ದಾರೆ. ಈ ಮೂವರು ಆರೋಪಿಗಳು ಸಹ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ ಆರೋಪಿಗಳು ದೀಪಕ್ ನನ್ನು ಹಲವು ಬಾರಿ ಚಾಕುವಿನಿಂದ ಇರಿದು ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾರೆ.
ಗಾಯಗೊಂಡ ದೀಪಕ್ ಅವರನ್ನು ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಮತ್ತಷ್ಟು ಓದಿ: ಒಂದು ಕೋಟಿಗೆ ಒಂದು ಕಿಡ್ನಿ..328 ಬಡ ಜನರ ಕಿಡ್ನಿ ಕಸಿ; ಬಡ ಪಾಕಿಸ್ತಾನದಲ್ಲಿ ಭೀಕರವಾದ ಕಿಡ್ನಿ ಟ್ರಾಫಿಕಿಂಗ್ ದಂಧೆ!
ಪೊದೆಯಲ್ಲಿ ಯುವಕನ ಮೃತ ದೇಹ ಪತ್ತೆ
ದೆಹಲಿಯಲ್ಲಿ ದಿನದಿಂದ ದಿನಕ್ಕೆ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸೆಪ್ಟೆಂಬರ್ 19 ರಂದು, ಕಾರವಾಲ್ ನಗರದ ಜೋಹರಿಪುರ ಪ್ರದೇಶದಲ್ಲಿ ಗಾಜಿಯಾಬಾದ್‌ನಲ್ಲಿ ಪೊದೆಯಲ್ಲಿ ಯುವಕನ ಶವ ಪತ್ತೆಯಾಗಿತ್ತು, ಈ ಪ್ರಕರಣದಲ್ಲಿ ಆರೋಪಿ ಸಚಿನ್ ಕುಮಾರ್ ಶರ್ಮಾ ಎಂಬಾತ ಬಾಗ್ಪತ್ ನಿವಾಸಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನ ಹೆಸರು ನಿತಿನ್, ಶಾಹದಾರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ನಿತಿನ್ ಸಹೋದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ದೆಹಲಿ ಪೊಲೀಸ್ ಪೇದೆಯೊಬ್ಬರು ಮಹಿಳಾ ಪೇದೆಯೊಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದಾರೆ. ಆರೋಪಿಗಳು ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಚರಂಡಿಯಲ್ಲಿ ಬಚ್ಚಿಟ್ಟಿದ್ದರು.
ಆರೋಪಿಯ ಸೂಚನೆ ಮೇರೆಗೆ ಪೊಲೀಸರು ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ. ಮಹಿಳಾ ಪೇದೆ ಆರೋಪಿಯ ಗೆಳತಿಯಾಗಿದ್ದು, ಮದುವೆಗೆ ಒತ್ತಡ ಹೇರುತ್ತಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ