Chikkaballapur: ಹೆಂಡತಿ ಮಕ್ಕಳಿದ್ದರೂ ಪಕ್ಕದ ಮನೆಯಾಕೆ ಜೊತೆ ಮದುವೆಗೆ ಪ್ಲಾನ್, ಪ್ರಶ್ನಿಸಿದ ಯುವತಿಯ ತಾಯಿಗೆ ಚಾಕು ಇರಿತ

ತನಗೆ ಹೆಂಡತಿ ಮಕ್ಕಳಿದ್ದರೂ ಈತನ ಪಕ್ಕದ ಮನೆಯ ಕಾಲೇಜು ಯುವತಿಯನ್ನು ಪುಸಲಾಯಿಸಿ ಮದುವೆಯಾಗಲು ಪ್ಲಾನ್ ಮಾಡಿದ್ದ. ಈ ವಿಚಾರ ತಿಳಿದು ಪ್ರಶ್ನಿಸಿದ ಯುವತಿಯ ತಾಯಿಗೆ ವಿವಾಹಿತ ಪುರುಷ ಚಾಕು ಇರಿದ ಘಟನೆ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Chikkaballapur: ಹೆಂಡತಿ ಮಕ್ಕಳಿದ್ದರೂ ಪಕ್ಕದ ಮನೆಯಾಕೆ ಜೊತೆ ಮದುವೆಗೆ ಪ್ಲಾನ್, ಪ್ರಶ್ನಿಸಿದ ಯುವತಿಯ ತಾಯಿಗೆ ಚಾಕು ಇರಿತ
ಚಿಕ್ಕಬಳ್ಳಾಪುರದಲ್ಲಿ ಮಹಿಳೆಗೆ ಚಾಕು ಇರಿದ ಆರೋಪಿ ಲಕ್ಷ್ಮೀನರಸಿಂಹಪ್ಪ
Edited By:

Updated on: Jul 24, 2023 | 8:32 PM

ಚಿಕ್ಕಬಳ್ಳಾಪುರ, ಜುಲೈ 24: ತನಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದರೂ ಈತನಿಗೆ ಪಕ್ಕದ ಮನೆಯ ಯುವತಿ ಮೇಲೆ ಕಣ್ಣು ಬಿದ್ದಿದೆ. ಅದರಂತೆ ಯುವತಿಯನ್ನು ಪುಸಲಾಯಿಸಿ ಮದುವೆಗೆ ಪ್ಲಾನ್ ಮಾಡಿಕೊಂಡಿದ್ದಾನೆ. ಈ ವಿಚಾರ ತಿಳಿದ ಯುವತಿಯ ತಾಯಿ ಬೈದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕುಪಿತನಾದ ವಿವಾಹಿತ ಪುರುಷ, ಆಕೆಗೆ ಚಾಕು ಇರಿದಿದ್ದಾನೆ (knife stab). ಈ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಆದೆನ್ನಗಾರಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.

ಆದೆನ್ನಗಾರಹಳ್ಳಿ ಗ್ರಾಮದ ಟಿಪ್ಪರ್ ಚಾಲಕ ಲಕ್ಷ್ಮೀನರಸಿಂಹಪ್ಪ (30) ವಿವಾಹಿತನಾಗಿದ್ದು, ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಎದುರು ಮನೆಯ 19 ವರ್ಷದ ಪದವಿ ವಿದ್ಯಾರ್ಥಿನಿಯ ಮೇಲೆ ಕಣ್ಣು ಹಾಕಿದ್ದಾನೆ. ಪ್ರೀತಿ ಪ್ರೇಮದ ಹೆಸರಿನಲ್ಲಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿದ್ದಾನೆ. ಹೆಂಡರು ಮಕ್ಕಳು ಇದ್ದರೂ ವಿದ್ಯಾರ್ಥಿನಿಗೆ ಚಿನ್ನ ರನ್ನ ಅಂತ ರಮಿಸಿ ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದ.

ಇದನ್ನೂ ಓದಿ: ಪ್ರೀತಿಸಿ, ಗರ್ಭಿಣಿಯಾಗಿಸಿ ಕೈಕೊಟ್ಟ ಮಹಾಶಯ: ವರನಿಗೆ ಥಳಿಸಿ ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಸಿನಿಮೀಯ ರೀತಿಯಲ್ಲಿ ಮದುವೆ!

ಈ ವಿಚಾರ ತಿಳಿದ ಯುವತಿಯ ಪೋಷಕರು ಲಕ್ಷ್ಮೀನರಸಿಂಹಪ್ಪಗೆ ಬೈಯ್ದು ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೆರಳಿದ ಲಕ್ಷ್ಮೀನರಸಿಂಹಪ್ಪ ಯುವತಿಯ ಮನೆಗೆ ನುಗ್ಗಿ ಆಕೆಯ ತಾಯಿಗೆ ಚಾಕುವಿನಿಂದ ಇರಿದು ಕೊಲೆ ಯತ್ನ ಮಾಡಿದ್ದಾನೆ.

ಪಕ್ರರಣ ಸಂಬಂಧ ಗಾಯಾಳು ಮಹಿಳೆ ನೀಡಿದ ದೂರಿನ ಮೇರೆಗೆ ಪೆರೇಸಂದ್ರ ಠಾಣೆ ಪೊಲೀಸರು ದೂರು ದಾಖಲಿಸಿ ಆರೋಪಿ ಲಕ್ಷ್ಮೀನರಸಿಂಹಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇತ್ತ ಯುವತಿಯ ತಾಯಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:32 pm, Mon, 24 July 23