AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime: ಹೆತ್ತವರನ್ನು ಕೊಂದು ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಮಗ ಮಡಿಕೇರಿಯಲ್ಲಿ ಬಂಧನ

ಹೆತ್ತವರನ್ನು ರಾಡ್​​ನಿಂದ ಹೊಡೆದು ಜುಲೈ 17ರಂದು ಕೊಲೆ ಮಾಡಿ ಮಡಿಕೇರಿಯ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಗನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

Bengaluru Crime: ಹೆತ್ತವರನ್ನು ಕೊಂದು ಕಾಡಿನಲ್ಲಿ ತಲೆಮರೆಸಿಕೊಂಡಿದ್ದ ಮಗ ಮಡಿಕೇರಿಯಲ್ಲಿ ಬಂಧನ
ಬಂಧಿತ ಆರೋಪಿ ಬಿ. ಶರತ್​
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jul 24, 2023 | 6:02 PM

Share

ಬೆಂಗಳೂರು, ಜುಲೈ 24: ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತಂದು-ತಾಯಿ (parents) ಯನ್ನು ಹಾಡಹಗಲೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಗನನ್ನು ಮಡಿಕೇರಿಯ ಕಾಡಿನಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿ ಶರತ್ (25) ಬಂಧಿತ ಆರೋಪಿ. ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ನಿವಾಸಿಯಾಗಿರುವ ತಂದೆ ಭಾಸ್ಕರ್ (61) ಮತ್ತು ತಾಯಿ ಬಿ ಶಾಂತಾ (60) ಅವರ ತಲೆಗೆ ರಾಡ್​​ನಿಂದ ಹೊಡೆದು ಜುಲೈ 17ರಂದು ಕೊಲೆ ಮಾಡಿದ್ದ.

ಭಾಸ್ಕರ್​ ಹಾಗೂ ಬಿ ಶಾಂತಾ ದಂಪತಿಗೆ ಇಬ್ಬರು ಮಕ್ಕಳು. ಅಣ್ಣ ಸಜಿತ್, ತಮ್ಮ ಶರತ್​. ಪದವೀಧರನ್ನಾಗಿದ್ದ ಶರತ್​, ಆದರೆ ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ. ಆಗಾಗ ಕುಡಿದು ಬಂದು ತಂದೆ, ತಾಯಿ ಮೇಲೆ ಹಲ್ಲೆ ಮಾಡುತ್ತಿದ್ದ. ಅದೇ ರೀತಿಯಾಗಿ ಜುಲೈ 17ರಂದು ತಂದೆ-ತಾಯಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.

ಕೊಲೆ ಮಾಡಿದ ಶರತ್​, ಮನೆಯಿಂದ ನೇರವಾಗಿ ಮೆಜೆಸ್ಟಿಕ್​ಗೆ ಬಂದಿದ್ದು ಬಿಎಂಟಿಸಿ ಬಸ್ ಹತ್ತಿದ್ದಾನೆ. ಅಲ್ಲಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಡಿಕೇರಿಗೆ ಬಂದಿಳಿದಿದ್ದಾನೆ. ಎರಡು ದಿನಗಳ ಕಾಲ ಊಟವಿಲ್ಲದೆ ಕಾಡಿನಲ್ಲಿ ತಲೆಮರಿಸಿಕೊಂಡಿದ್ದ. ಆದರೆ ಆಹಾರಕ್ಕಾಗಿ ಕಾಡಿನಿಂದ ಹೊರಬಂದ ವೇಳೆ ಅಂದರೆ ಶುಕ್ರವಾರ ರಾತ್ರಿ ನಾವು ಅವನನ್ನು ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಹೋಟೆಲ್ ಕ್ಯಾಶಿಯರ್​ ಕೊಲೆ: ಹೌಸ್​ಕೀಪರ್​​ ಬಂಧನ​​

ಪ್ರತಿಷ್ಠಿತ ಹೋಟೆಲ್ ಕ್ಯಾಂಟೀನ್‌ನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಭಾಸ್ಕರ್ ಮತ್ತು ನಿವೃತ್ತ ಐಟಿಐ ಉದ್ಯೋಗಿ ಶಾಂತಾ ಅವರನ್ನು ಶರತ್ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದ. ಶರತ್​​ ಪೋಷಕರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಆತನ ಅಣ್ಣ ಬಿ. ಸಜಿತ್ ದೂರು ದಾಖಲಿಸಿದ್ದರು.

ಇದನ್ನೂ ಓದಿ: Mysuru News: 25 ಲಕ್ಷ ರೂ. ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ: ಪ್ರವೇಶ ಪತ್ರ ಸಿಗದೆ‌ ಮೈಸೂರಿನ ವಿದ್ಯಾರ್ಥಿಗಳು ಅತಂತ್ರ

ಸಜಿತ್ ಪ್ರಕಾರ, ಶರತ್ ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಮತ್ತು ವಿಚಿತ್ರವಾಗಿ ವರ್ತಿಸುತ್ತಿದ್ದ. ಆತ ತಮ್ಮ ಮೇಲೂ ಹಲ್ಲೆ ನಡೆಸಬಹುದೆಂಬ ಭಯದಿಂದ ಭಾಸ್ಕರ್ ಮತ್ತು ಶಾಂತಾ ಅವರು ತಮ್ಮ ಮನೆಗೆ ಭೇಟಿ ನೀಡದಂತೆ ನೆರೆಹೊರೆಯವರಿಗೆ ಮನವಿ ಮಾಡಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:56 pm, Mon, 24 July 23