ಬೆಂಗಳೂರಿನಲ್ಲಿ ಹಾಡಹಗಲೇ ಹೋಟೆಲ್ ಕ್ಯಾಶಿಯರ್ ಕೊಲೆ: ಹೌಸ್ಕೀಪರ್ ಬಂಧನ
ಬೆಂಗಳೂರಿನ ಪ್ರತಿಷ್ಠಿತ ಸಿಟಡೆಲ್ ಹೋಟೆಲ್ ಕ್ಯಾಶಿಯರ್ ಹತ್ಯೆ ಮಾಡಿರುವಂತಹ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದ ಹೋಟೆಲ್ನಲ್ಲಿ ನಡೆದಿದೆ. ಕುಡಿದ ನಶೆಯಲ್ಲಿ ಹೌಸ್ ಕೀಪರ್ಯಿಂದ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ಬೆಂಗಳೂರು, ಜುಲೈ 20: ಹಾಡಹಗಲೇ ಪ್ರತಿಷ್ಠಿತ ಹೋಟೆಲ್ ಕ್ಯಾಶಿಯರ್ (cashier) ನನ್ನು ಕೊಲೆ ಮಾಡಿ ಪರಾರಿ ಆಗಿರುವಂತಹ ಘಟನೆ ಜೀವನ್ ಭೀಮಾ ನಗರದ ಮುರುಗೇಶ್ ಪಾಳ್ಯದ ಹೋಟೆಲ್ನಲ್ಲಿ ನಡೆದಿದೆ. ಸಿಟಡೆಲ್ ಹೋಟೆಲ್ನ ಸುಭಾಷ್ ಮೃತ ಕ್ಯಾಶಿಯರ್. ಅದೇ ಹೋಟೆಲ್ನಲ್ಲಿ ಹೌಸ್ ಕೀಪರ್ ಆಗಿರುವ ಅಭಿಷೇಕ್ ಎಂಬಾತ ಹತ್ಯೆ ಮಾಡಿದ್ದು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹೋಟೆಲ್ ಸೋಫಾ ಮೇಲೆ ಸುಭಾಷ್ ಮಲಗಿದ್ದ ವೇಳೆ ದೊಣ್ಣೆಯಿಂದ ಹೊಡೆದು ಹೌಸ್ ಕೀಪರ್ ಅಭಿಷೇಕ್ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಕುಡಿದ ನಶೆಯಲ್ಲಿ ಕೊಂದಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಮಗನ ಬರ್ತಡೇ ಸಂಭ್ರಮದಲ್ಲಿದ್ದ ತಂದೆಯ ಎದೆಗೆ ಚೂರಿ ಇರಿದ ಹಂತಕರು, ಉದ್ಯಮಿ ಕೊಲೆ ಪ್ರಕರಣಕ್ಕೆ ಬಿಗ್ ಟಿಸ್ಟ್
ಶೀಲಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ
ಹಾಸನ: ಶೀಲಶಂಕಿಸಿ ಪತ್ನಿಯನ್ನು ಪತಿ ಬರ್ಬರವಾಗಿ ಕೊಲೆ ಮಾಡಿರುವಂತಹ ಘಟನೆ ಹೊಳೆನರಸೀಪುರ ತಾಲೂಕಿನ ಎಸ್.ಅಂಕನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಪತ್ನಿ ಅಂಬಿಕಾ(28)ಳನ್ನು ಕೊಲೆ ಮಾಡಿದ ಪತಿ ಚಂದ್ರಮೌಳಿ. ಹೊಳೆನರಸೀಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಮಠದ ಅರ್ಚಕನ ಜತೆ ಪರಿಚಯ; 1 ಕೋಟಿ ರೂ. ಅಧಿಕ ಹಣ ಪಡೆದು ವಂಚನೆ, ಆರೋಪಿ ಅರೆಸ್ಟ್
ಬಳ್ಳಾರಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ
ಬಳ್ಳಾರಿ: ನಗರ ಹೊರವಲಯದ ಗುಗ್ಗರಹಟ್ಟಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಮೆಹಬೂಬ್ ಬಾಷಾ(40) ಮೃತ ವ್ಯಕ್ತಿ. ರಿಯಲ್ ಎಸ್ಟೇಟ್ ವ್ಯವಹಾರದ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:34 pm, Thu, 20 July 23