ಮತ್ತೊಬ್ಬ ಶಂಕಿತ ಉಗ್ರನ ಬಗ್ಗೆ ಸಿಸಿಬಿಗೆ ಸುಳಿವು, ವಿಧ್ವಂಸಕ ಕೃತ್ಯಕ್ಕೆ ಬೇಕು ಬೇಡಗಳನ್ನು ಪೂರೈಸಿದ್ದ ಯಾರವನು?

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನದ ಪ್ರಕರಣದಲ್ಲಿ ಸಿಸಿಬಿಗೆ ಏಂಟನೇ ವ್ಯಕ್ತಿ ಇರುವಿಕೆ ಬಗ್ಗೆ ಸುಳಿವು ಸಿಕ್ಕಿದೆ. ವಿಧ್ವಂಸಕ ಕೃತ್ಯಕ್ಕೆ ಬೇಕು ಬೇಡಗಳನ್ನು ಪೂರೈಸಿದ್ದ ಯಾರವನು?

ಮತ್ತೊಬ್ಬ ಶಂಕಿತ ಉಗ್ರನ ಬಗ್ಗೆ ಸಿಸಿಬಿಗೆ ಸುಳಿವು, ವಿಧ್ವಂಸಕ ಕೃತ್ಯಕ್ಕೆ ಬೇಕು ಬೇಡಗಳನ್ನು ಪೂರೈಸಿದ್ದ ಯಾರವನು?
ಸಾಂದರ್ಭಿಕ ಚಿತ್ರ
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on:Jul 20, 2023 | 3:22 PM

ಬೆಂಗಳೂರು, (ಜುಲೈ 20): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ(suspected terrorist) ಬಂಧನದ ಪ್ರಕರಣದಲ್ಲಿ ಸಿಸಿಬಿಗೆ ಏಂಟನೇ ವ್ಯಕ್ತಿ ಇರುವಿಕೆ ಬಗ್ಗೆ ಸುಳಿವು ಸಿಕ್ಕಿದೆ. ಜುನೈದ್ ಸೂಚನೆ ಪ್ರಕಾರ ಬೆಂಗಳೂರಿಗೆ ಆ ಅಪರಿಚಿತ ವ್ಯಕ್ತಿ ಬಂದಿದ್ದ ಎಂದು ತಿಳಿದುಬಂದಿದೆ. ಅಪರಿಚಿತ ವ್ಯಕ್ತಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್​​ ಜತೆ ಸಂಪರ್ಕ ಹೊಂದಿದ್ದಾನೆ, ಜುನೈದ್​ ಸೂಚನೆ ಮೇರೆಗೆ ಅಪರಿಚಿತ ವ್ಯಕ್ತಿ ಬೆಂಗಳೂರಿಗೆ ಬಂದಿದ್ದು, ವಿಧ್ವಂಸಕ ಕೃತ್ಯದ ಸಂಚಿನಲ್ಲಿ 8ನೇ ಶಂಕಿತ ಭಾಗಿಯಾಗಿರುವ ಮಾಹಿತಿ ಇದೆ.

ಇದನ್ನೂ ಓದಿ: ಬೆಂಗಳೂರಿನ ಶಂಕಿತ ಉಗ್ರರ ಬೇರೆಯದ್ದೆ ಕಥೆ ಹೇಳ್ತಿವೆ ಸಿಕ್ಕ ಪಿಸ್ತೂಲ್, ವಾಕಿಟಾಕಿ, ಜೀವಂತ ಗುಂಡುಗಳು

ಸದ್ಯ ಬಂಧಿತನಾಗಿರುವ ಓರ್ವ ಆರೋಪಿಗೆ  ಜುನೈದ್, ಈ ಅಪರಿಚಿತ ವ್ಯಕ್ತಿಯ ಪರಿಚಯ ಮಾಡಿಸಿದ್ದ. ಆತನೇ ಈ ಅಪರಿಚಿತ ವ್ಯಕ್ತಿಯ ಬೇಕು ಬೇಡಗಳನ್ನು ನೋಡಿಕೊಳ್ಳುತ್ತಿದ್ದ. ಆದರೆ ಈ ಅಪರಿಚಿತ ವ್ಯಕ್ತಿಯ ನಿಜವಾದ ಹೆಸರು, ಮಾಹಿತಿ ಗೊತ್ತಿರಲಿಲ್ಲ. ಬಂಧಿತ ಶಂಕಿತ ಉಗ್ರ ಆ ಅಪರಿಚಿತ ವ್ಯಕ್ತಿಯಿಂದ ಜನವರಿ ತಿಂಗಳಲ್ಲಿ ಮೊದಲ ಪಾರ್ಸೆಲ್ ಪಡೆದುಕೊಂಡಿದ್ದ. ಕಪ್ಪು ಬಣ್ಣದ ಪಾರ್ಸೆಲ್ ಬಾಕ್ಸ್ ನ ಓರ್ವ ವ್ಯಕ್ತಿ ಖುದ್ದಾಗಿ ಬಂದು ತಂದು ಕೊಟ್ಟು ಹೋಗಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ.

ಮೊದಲು ಬಂದ ಈ ಪಾರ್ಸೆಲ್ ನಲ್ಲಿ ಪಿಸ್ತೂಲ್ ಮತ್ತು ಲೈವ್ ಬುಲೆಟ್ಸ್ ಇತ್ತು. ಇದನ್ನು ಓರ್ವ ಶಂಕಿತ ಉಗ್ರನ ಮನೆಯಲ್ಲಿ ಇಡಲಾಗಿತ್ತು. ಇದಾದ ಬಳಿಕ ಬಕ್ರಿದ್ ಹಬ್ಬಕ್ಕೆ ಕೆಲವು ದಿನಗಳ ಮುನ್ನ ವಾಕಿಟಾಕಿಗಳು ಬಂದಿತ್ತು. ಬಳಿಕ ಇದೇ ತಿಂಗಳ 11ರಂದು ಗ್ರೆನೇಡ್ ಗಳು ಪೂರೈಕೆ ಆಗಿತ್ತು. ಹೆಬ್ಬಾಳದಿಂದ ನೆಲಮಂಗಲ ಟೋಲ್ ಬಳಿಗೆ ಕಾರ್ ನಲ್ಲಿ ತೆರಳಿ ಇದೇ ಅಪರಿಚಿತ ವ್ಯಕ್ತಿ ಗ್ರೆನೇಡ್ ಪಡೆದುಕೊಂಡಿದ್ದರು ಎನ್ನುವ ಸ್ಪೋಟ ಅಂಶ ಬೆಳಕಿಗೆ ಬಂದಿದ್ದು, ಆ ವ್ಯಕ್ತಿ ಯಾರು? ಎಲ್ಲಿಯವನು ಎನ್ನುವ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:48 pm, Thu, 20 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ