ಬೆಂಗಳೂರಿನ ಶಂಕಿತ ಉಗ್ರರ ಬೇರೆಯದ್ದೆ ಕಥೆ ಹೇಳ್ತಿವೆ ಸಿಕ್ಕ ಪಿಸ್ತೂಲ್, ವಾಕಿಟಾಕಿ, ಜೀವಂತ ಗುಂಡುಗಳು

ಸಿಸಿಬಿ ಅಧಿಕಾರಿಗಳು ಐವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿ ತನಿಖೆ ಶುರುಮಾಡಿದೆ ತನಿಖೆ ವೇಳೆ ಸ್ಪೋಟಕ ಅಂಶಗಳು ಹೊರಬರುತ್ತಿದೆ.. ಹಣದ ಮೂಲ. ಹಾಗು ಸಿಕ್ಕ ಜೀವಂತ ಗುಂಡುಗಳು, ವಾಕಿಟಾಕಿ, ಪಿಸ್ತೂಲ್​ ಬೇರೆಯದ್ದೆ ಕಥೆ ಹೇಳುತ್ತಿವೆ.

ಬೆಂಗಳೂರಿನ ಶಂಕಿತ ಉಗ್ರರ ಬೇರೆಯದ್ದೆ ಕಥೆ ಹೇಳ್ತಿವೆ ಸಿಕ್ಕ ಪಿಸ್ತೂಲ್, ವಾಕಿಟಾಕಿ, ಜೀವಂತ ಗುಂಡುಗಳು
ಶಂಕಿತ ಉಗ್ರರು
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jul 20, 2023 | 9:27 AM

ಬೆಂಗಳೂರು, (ಜುಲೈ 20): ಸಿಸಿಬಿ (CCB) ಅಧಿಕಾರಿಗಳು ಐವರು ಶಂಕಿತ ಉಗ್ರರನ್ನು(suspected terrorists) ಅರೆಸ್ಟ್ ಮಾಡಿ ತನಿಖೆ ಶುರುಮಾಡಿದೆ ತನಿಖೆ ವೇಳೆ ಸ್ಪೋಟಕ ಅಂಶಗಳು ಹೊರಬರುತ್ತಿದೆ.. ಹಣದ ಮೂಲ. ಹಾಗು ಸಿಕ್ಕ ಜೀವಂತ ಗುಂಡುಗಳು ಬೇರೆಯದ್ದೆ ಕಥೆ ಹೇಳುತ್ತಿವೆ. ಹೌದು.. ಸಿಸಿಬಿ ಕೈಯಲ್ಲಿ ಲಾಕ್ ಆಗಿರುವ ಕ್ರಿಮಿಗಳ ಬಳಿ 45 ಜೀವಂತ ಗುಂಡು, ಏಳು ಪಿಸ್ತೂಲ್, ವಾಕಿಟಾಕಿ, ಮೊಬೈಲ್ ಸಿಮ್ ಕಾರ್ಡ್​ಗಳು ಸಿಕ್ಕಿವೆ. ಇವುಗಳನ್ನೆಲ್ಲ ಖರೀದಿಸಲು ಖುದ್ದು ಎ2 ಆರೋಪಿ ಮಹಮ್ಮದ್ ಜುನೈದ್ ವಿದೇಶದಲ್ಲಿ ಕುಳಿತು ಫಂಡ್ ಕೊಡುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ. 2017 ರಲ್ಲಿ ಕೊಲೆ ಕೇಸ್ ಬಳಿಕ 2020ರಲ್ಲಿ ರಕ್ತ ಚಂದನ ಕೇಸ್, 2021ರಲ್ಲಿ ಎರಡು ಬಾರಿ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲು ಸೇರಿದ್ದ ಜುನೈದ್, 2021ರಲ್ಲಿ ಜೈಲಿಂದ ರಿಲೀಸ್ ಆದ್ಮೇಲೆ ನಾಪತ್ತೆಯಾಗಿದ್ದ. ಈಗ ವಿದೇಶದಲ್ಲಿ ಕುಳಿತು ಉಗ್ರವಾದಕ್ಕೆ ಮಸಲತ್ತು ಆತಂಕ ಮೂಡಿಸಿದೆ.. ಶಸ್ತ್ರಾಸ್ತ್ರ ಖರೀದಿಗೆ ಹಣ ಕೊಡುತ್ತಿದ್ದು, ಈ ಪಿಸ್ತೂಲ್, ಗುಂಡುಗಳು ಗುಜರಾತ್ ಮತ್ತು ಉತ್ತರ ಪ್ರದೇಶದಿಂದ ಬಂದಿರಬಹುದು ಎಂಬ ಮಾಹಿತಿ ಇದೆ.

ಇದನ್ನೂ ಓದಿ: ವಿಚಾರಣೆ ವೇಳೆ ಸಿಸಿಬಿ ಮುಂದೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಂಕಿತ ಉಗ್ರರು

ಸಿಸಿಬಿ ವಶಕ್ಕೆ ಪಡೆದಿರುವ ಪಿಸ್ತೂಲ್ ಮತ್ತು ಗುಂಡುಗಳು ಎರಡು ಮಾದರಿಯವು. ಒಂದು ಹೊರಗಿನ ಮಾರ್ಕೆಟ್​ನಲ್ಲಿ ಸೇಲ್ ಮಾಡಿದ್ರೆ, 15 ಗುಂಡುಗಳು ಒಪನ್ ಮಾರ್ಕೆಟ್​ನಲ್ಲಿ ಸೇಲ್ ಮಾಡುವಂತವು. ಈ ಗುಂಡುಗಳನ್ನ ಪೊಲೀಸರು, ಮಿಲಿಟರಿ ಮತ್ತು ವಿದೇಶಿ ಟೆರರ್ ಸಂಘಟನೆಗಳು ಬಳಸುತ್ತವೆ. ಇವು 303 ಹೆವೀ ರೈಫಲ್​ಗಿಂತ ಕೆಳ ಹಂತದ ವೆಪನ್​ಗೆ ಬಳಸುವ ಗುಂಡುಗಳಾಗಿವೆ. ಸದ್ಯಕ್ಕೆ ಸಿಸಿಬಿ ಪೊಲೀಸರ ತನಿಖೆ ವೇಳೆ ಮೂರು ಹಂತದಲ್ಲಿ ಈ ಮಾಡ್ಯೂಲ್ ಆಪರೇಟ್ ಆಗಿರುವುದು ಕಂಡು ಬಂದಿದೆ.

ಇಲ್ಲಿ ಐವರು ಬಂಧಿತ ಉಗ್ರರಿಗೆ ಟಿ ನಸೀರ್ ಲಿಂಕ್ ಇರುವುದು ಕಡಿಮೆ ಎನ್ನಲಾಗಿದೆ. ಇಬ್ಬರಿಗೂ ಮಧ್ಯದಲ್ಲಿ ಇದ್ದು ಕೆಲಸ ಮಾಡಿದ್ದವನು ಜುನೈದ್. ಹೀಗಾಗಿ ಜುನೈದ್ ಈ ಕೇಸ್ ಗೆ ಅವಶ್ಯಕ. ಹೀಗಾಗಿ ಸಿಸಿಬಿ ಹಾಗು ಕೇಂದ್ರ ತನಿಖಾ ಸಂಸ್ಥೆಯ ಮೂಲಕ ವಿದೇಶದಲ್ಲಿ ಇರುವ ಜುನೈದ್ ನ ಪತ್ತೆ ಮಾಡಲು ತಯಾರಿ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರರಿಂದ ಭಾರಿ ವಿಧ್ವಂಸಕ ಕೃತ್ಯವೆಸಗಲು ಸಂಚು​, ಸ್ಟೋಟಕ ಮಾಹಿತಿ ಬಹಿರಂಗಪಡಿಸಿದ ಪೊಲೀಸ್ ಕಮಿಷನರ್

ವಾಕಿಟಾಕಿ ಸುತ್ತ ಹಲವು ಅನುಮಾನ

ಇನ್ನು ಕಾರ್ಯಚರಣೆ ವೇಳೆ ಶಂಕಿತ ಉಗ್ರರ ಬಳಿ ಸಿಕ್ಕಿರುವ ವಾಕಿಟಾಕಿ ಸುತ್ತ ಹಲವಾರು ಸಂಶಯಗಳು ಹುಟ್ಟಿಕೊಂಡಿವೆ. ಮೊಬೈಲ್ ಬಳಸಲು ಸಾಧ್ಯವಿಲ್ಲದ ಕಡೆ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಕಾಡಿನಲ್ಲಿ ಟ್ರೈನಿಂಗ್ ನಡೆಸುವಾಗ ವಾಕಿಟಾಕಿ ಬಳಕೆ ಮಾಡಲಾಗುತ್ತೆ. ಒಂದ ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಕಟ್ಟಡದ ಮೇಲೆ ಅಟ್ಯಾಕ್ ಮಾಡಿದಾಗ ಪೊಲೀಸರು ಎಂಟ್ರಿ ಕೊಟ್ರೆ ಜಾಮರ್ ಬಳುತ್ತಾರೆ. ಈ ವೇಳೆ ಮೊಬೈಲ್ ವರ್ಕ್ ಆಗುವುದಿಲ್ಲ. ಹೀಗಾಗಿ ಆ ಸಮಯದಲ್ಲಿ ವಾಕಿಟಾಕಿ ಬಳಕೆ ಮಾಡುವ ಸಾದ್ಯತೆ ಇದೆ.

ಮುಂಬಯಿ ಅಟ್ಯಾಕ್ ಮಾದರಿಯಲ್ಲಿ ಕೃತ್ಯ ಎಸಗಿದ್ರೆ ವಾಕಿಟಾಕಿ ಸಹಾಯಕಾರಿ. ಹೀಗಾಗಿ ಬಂಧಿತರ ಅಸಲಿ ಪ್ಲ್ಯಾನ್​ ಏನು ಎಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಎನ್​ಐಎ ಅಧಿಕಾರಿಗಳು ಸಹ ಸಿಸಿಬಿ ತನಿಖೆಯ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ. ಅವಶ್ಯಕತೆ ಇದ್ದಲಿ ಕೇಸ್ ಮುಂದಿನ ಹಂತದಲ್ಲಿ ಎನ್ ಐ ಎ ತನಿಖೆ ನಡೆಸುವಾ ಸಾದ್ಯತೆಗಳಿವೆ.

ಶಂಕಿತ ಉಗ್ರರ ಬಳಿ ಸಿಕ್ಕ ಗನ್ ಅಸಲಿ ಕಥೆ ಏನು..?

ಇನ್ನು ಶಂಕಿತ ಉಗ್ರರ ಬಳಿ ಸಿಕ್ಕಿರುವ ಗನ್ ಅಸಲಿ ಕಥೆ ಏನು ಎನ್ನುವುದನ್ನು ನೋಡುವುದಾದರೆ, ಕಂಟ್ರಿ ಮೇಡ್ ಪಿಸ್ತೂಲ್ ತರಬೇತಿ ಪಡೆದಿದ್ರಾ ಎನ್ನುವ ಶಂಕೆಗಳು ವ್ಯಕ್ತವಾಗಿವೆ. ಗನ್ ಬಳಸೋದು ಹೇಗೆ ಎಂದು ಟ್ರೈನಿಂಗ್ ಪಡೆದಿರುವ ಶಂಕೆ ಇದ್ದು, ಈ ಬಗ್ಗೆ ಇನ್ನು ಯಾವುದೇ ವಿಚಾರ ಬಂಧಿತರು ಬಾಯ್ಬಿಟ್ಟಿಲ್ಲ. ಪಿಸ್ತೂಲ್ ಬಳಕೆ ಆಗಿದ್ಯಾ? ಎಷ್ಟು ಗುಂಡು ಬಳಕೆಯಾಗಿರಬಹುದು? ಮಾದರಿ ಯಾವುದು ಎಂಬುದೆಲ್ಲಾ ಪರಿಶೀಲನೆ ಮಾಡಲು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಪಿಸ್ತೂಲ್ ಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲು ಸಿದ್ದತೆ ನಡೆಸಿದ್ದು, ವರದಿ ಬಳಿಕ ಪಿಸ್ತೂಲ್ ದುಷ್ಕೃತ್ಯಕ್ಕೆ ಬಳಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:23 am, Thu, 20 July 23

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್