AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚಾರಣೆ ವೇಳೆ ಸಿಸಿಬಿ ಮುಂದೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಂಕಿತ ಉಗ್ರರು

ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಉಗ್ರರು ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ಸಿಸಿಬಿ ಪೊಲೀಸರ ಮುಂದೆ ಸ್ಫೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ.

ವಿಚಾರಣೆ ವೇಳೆ ಸಿಸಿಬಿ ಮುಂದೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಶಂಕಿತ ಉಗ್ರರು
ಬಂಧಿತ ಶಂಕಿತ ಉಗ್ರರು
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on:Jul 19, 2023 | 12:33 PM

ಬೆಂಗಳೂರು, (ಜುಲೈ 19): ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಶಂಕಿತ ಉಗ್ರರ ಪ್ಲ್ಯಾನ್ ವಿಫಲಗೊಳಿಸಿದ್ದಾರೆ. ಮಡಿವಾಳದ FSL ಆವರಣದ ಇಂಟ್ರಾಗೇಷನ್ ಸೆಲ್​ನಲ್ಲಿ ವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಈ ವೇಳೆ ಸ್ಫೋಟಕ ಅಂಶಗಳನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಸ್​​, ಹೋಟೆಲ್​​, ಬಸ್​​ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಶಂಕಿತ ಉಗ್ರರು ಮುಂದೆ ಬಾಯ್ಬಿಟ್ಟಿದ್ದಾರೆ. ಇನ್ನು ಈ ಪ್ರಕರಣ ಸಂಬಂಧ ಒಟ್ಟು 7 ಆರೋಪಿಗಳ ವಿರುದ್ಧ ಕೇಸ್ ದಾಖಲಾಗಿದೆ.  ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಯುಎಪಿಎ, 120 B, ಶಸ್ತ್ರಾಸ್ತ್ರ ನಿಗ್ರಹ ಕಾಯ್ದೆ ಸೆಕ್ಷನ್​​​​​​​ 122 ,121ಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಉಗ್ರರಿಂದ ಭಾರಿ ವಿಧ್ವಂಸಕ ಕೃತ್ಯವೆಸಗಲು ಸಂಚು​, ಸ್ಟೋಟಕ ಮಾಹಿತಿ ಬಹಿರಂಗಪಡಿಸಿದ ಪೊಲೀಸ್ ಕಮಿಷನರ್

2008ರ ಬೆಂಗಳೂರು ಸರಣಿ ಸ್ಫೋಟದ ಆರೋಪಿ ಟಿ.ನಜೀರ್​ ಎ1 ಆರೋಪಿಯಾಗಿದ್ದು, ಸದ್ಯ ಈತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಎ2 ಆರೋಪಿಯಾಗಿದ್ದಾನೆ. ಇನ್ನು ಬೆಂಗಳೂರಿನಲ್ಲಿ ಬಂಧಿತರಾಗಿರುವ ಐವರಲ್ಲಿ ಸುಹೇಲ್​ ಎ3, ಉಮರ್ ಎ4, ಜಾಹಿದ್​ ಎ5, ಮುದಾಸಿರ್​ ಎ6, ಫೈಜರ್​ 7ನೇ ಆರೋಪಿ ಎಂದು ಕೇಸ್ ದಾಖಲಾಗಿದೆ.

ಬಂಧಿತ ಶಂಕಿತ ಭಯೋತ್ಪಾದಕರು ಬೆಂಗಳೂರಿನ ಸುಲ್ತಾನ್​ ಪಾಳ್ಯದ ಕನಕನಗರದ ಪದ್ಮಾವತಿ ಎಂಬುವವರ ಮನೆಯಲ್ಲಿ ಕಳೆದ ಎರಡ್ಮೂರು ತಿಂಗಳಿಂದ ಬಾಡಿಗೆಗೆ ವಾಸವಿದ್ದರು. ಇನ್ನು ಬಂಧಿತ ಆರೋಪಿಗಳಿಂದ 7 ಪಿಸ್ತೂಲ್​​, 12 ಫೋನ್​ಗಳು, 45 ಜೀವಂತ ಗುಂಡು, ವಾಕಿಟಾಕಿ ಸೇರಿ ಹಲವು ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು, ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ

ಪ್ರಕರಣದ 2ನೇ ಆರೋಪಿ ಜುನೈದ್ ವಿರುದ್ಧದ ಪ್ರಕರಣಗಳು

  • 2017 ಕಿಡ್ನಾಪ್ ಅಂಡ್ ಮರ್ಡರ್ ಕೇಸ್.
  • 2020 ರಕ್ತ ಚಂದನ ಕೇಸ್,
  • 2021 ಡರೋಡೆಗೆ ಸಂಚು ಕೇಸ್
  • 2021 ದರೋಡೆಗೆ ಸಂಚು. ಕೇಸ್.
  • 2021 ರಿಂದ ಜುನೈದ್ ಜೈಲಿನಿಂದ ಬಿಡುಗಡೆಯಾಗಿದ್ದು, ಸದ್ಯ ಈತ ವಿದೇಶದಲ್ಲಿ ಇದ್ದಾನೆ ಎಂದು ತಿಳಿದುಬಂದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:20 pm, Wed, 19 July 23

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು