ಗುರ್​​ಗಾಂವ್ ರೂಪದರ್ಶಿಯ ದಿವ್ಯಾ ಪಹುಜಾ ಕೊಲೆ; ಮೃತದೇಹಕ್ಕಾಗಿ ಪೊಲೀಸ್ ಶೋಧ

|

Updated on: Jan 04, 2024 | 3:27 PM

ಹೋಟೆಲ್ ಸಿಟಿ ಪಾಯಿಂಟ್‌ನ ಲಾಬಿಯ ಮೂಲಕ ಬಿಎಂಡಬ್ಲ್ಯು ಕಾರಿಗೆ ಬಿಳಿ ಶೀಟ್​​ನಲ್ಲಿ  ಸುತ್ತಿದ ದಿವ್ಯಾಳ ಮೃತದೇಹವನ್ನು ಸಿಂಗ್ ತನ್ನ ಸಹಚರರೊಂದಿಗೆ ಎಳೆದುಕೊಂಡು ಹೋಗುತ್ತಿರುವುದನ್ನು ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಆದರೆ ಮೃತದೇಹ ಇನ್ನೂ ಸಿಕ್ಕಿಲ್ಲ. ಇದಕ್ಕಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಗುರ್​​ಗಾಂವ್ ರೂಪದರ್ಶಿಯ ದಿವ್ಯಾ ಪಹುಜಾ ಕೊಲೆ; ಮೃತದೇಹಕ್ಕಾಗಿ ಪೊಲೀಸ್ ಶೋಧ
ದಿವ್ಯಾ ಪಹುಜಾ
Follow us on

ಗುರ್​​ಗಾಂವ್ ಜನವರಿ 04: 27 ವರ್ಷದ ಮಾಡೆಲ್ ದಿವ್ಯಾ ಪಹುಜಾ (Divya Pahuja) ಕೊಲೆ ಪ್ರಕರಣದಲ್ಲಿ  (Murder case) ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ. ಗುರುಗ್ರಾಮ್‌ನ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿಯ(Sandeep Gadoli) ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾಮೀನು ಪಡೆದಿದ್ದ ದಿವ್ಯಾಳನ್ನು ಬುಧವಾರ ಗುರುಗ್ರಾಮ್ ಹೋಟೆಲ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಮುಖ ಶಂಕಿತ ಆರೋಪಿ ಅಭಿಜೀತ್ ಸಿಂಗ್, ಹೊಟೇಲ್ ಮಾಲೀಕ ಹಾಗೂ ಇನ್ನಿಬ್ಬರನ್ನು ಹೇಮರಾಜ್ ಮತ್ತು ಓಂಪ್ರಕಾಶ್ ಎಂದು ಗುರುತಿಸಲಾಗಿದ್ದು, ಈವರೆಗೆ ಮೂವರನ್ನು ಬಂಧಿಸಲಾಗಿದೆ.

ದಿವ್ಯಾ ಖಾಸಗಿ ಚಿತ್ರಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಿಂಗ್ ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಆದರೆ, ದಿವ್ಯಾ ಕುಟುಂಬದವರು ಈ ಆರೋಪಗಳನ್ನು ಕಟುವಾಗಿ ನಿರಾಕರಿಸಿದ್ದಾರೆ.

ಹೋಟೆಲ್ ಸಿಟಿ ಪಾಯಿಂಟ್‌ನ ಲಾಬಿಯ ಮೂಲಕ ಬಿಎಂಡಬ್ಲ್ಯು ಕಾರಿಗೆ ಬಿಳಿ ಶೀಟ್​​ನಲ್ಲಿ  ಸುತ್ತಿದ ದಿವ್ಯಾಳ ಮೃತದೇಹವನ್ನು ಸಿಂಗ್ ತನ್ನ ಸಹಚರರೊಂದಿಗೆ ಎಳೆದುಕೊಂಡು ಹೋಗುತ್ತಿರುವುದನ್ನು ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಇದಾದ ನಂತರ, ದಿವ್ಯಾಳ ಶವದೊಂದಿಗೆ ಕಾರನ್ನು ತೆಗೆದುಕೊಂಡು ಹೋದ ಇತರ ಇಬ್ಬರು ಮೂರು ವ್ಯಕ್ತಿಗಳಿಗೆ ಸಿಂಗ್ ಕರೆ ಮಾಡಿದ್ದಾರೆ

ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿ  ಪ್ರಮುಖ ಆರೋಪಿ ಸಿಂಗ್​​ನನ್ನು ಬಂಧಿಸಿದಾಗ ಅವರು ಈ ಬಗ್ಗೆ ಬಾಯ್ಬಿಟ್ಟಿದ್ದು ಇದು ಹೇಮರಾಜ್ ಮತ್ತು ಓಂಪ್ರಕಾಶ್ ಬಂಧನಕ್ಕೆ ಕಾರಣವಾಯಿತು. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಅಥವಾ ಮೂವರನ್ನು ಪತ್ತೆ ಹಚ್ಚಲು ಮತ್ತು ದಿವ್ಯಾಳ ಮೃತದೇಹವನ್ನು ಹೊರತೆಗೆಯಲು ಭಾರೀ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾರು ಈ ದಿವ್ಯಾ ಪಹುಜಾ?

ದಿವ್ಯಾ ಪಹುಜಾ ಮಾಜಿ ಮಾಡೆಲ್. ಗ್ಯಾಂಗ್​​ಸ್ಟರ್ ಸಂದೀಪ್ ಗಡೋಲಿ ಹತ್ಯೆಯ ಆರೋಪಿಗಳಲ್ಲಿ ಈಕೆಯೂ ಒಬ್ಬಳು. ಫೆಬ್ರವರಿ 7, 2016 ರಂದು ಮುಂಬೈ ಹೋಟೆಲ್‌ನಲ್ಲಿ ಈತನನ್ನು ಕೊಲೆ ಮಾಡಲಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ, ಬಾಂಬೆ ಹೈಕೋರ್ಟ್ ಆಕೆಗೆ ಜಾಮೀನು ನೀಡಿತ್ತು, ಏಳು ವರ್ಷಗಳ ನಂತರ ಕೊಲೆಗೆ ಸಂಬಂಧಿಸಿದಂತೆ ಆಕೆಯನ್ನು ಬಂಧಿಸಲಾಯಿತು.

ಗಡೋಲಿ ಹತ್ಯೆಗೆ ಸಂಬಂಧಿಸಿದಂತೆ ದಿವ್ಯಾ ಪಹುಜಾ, ಆಕೆಯ ತಾಯಿ ಮತ್ತು ಐವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಗಡೋಲಿಯನ್ನು ತನ್ನ ಗೆಳತಿ ಪಹುಜಾ ಸಹಾಯದಿಂದ ಹೋಟೆಲ್‌ನಲ್ಲಿ ಪೊಲೀಸರು ಆಮಿಷ ಒಡ್ಡಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದರು. ನಂತರ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್ ಪ್ರತಿಸ್ಪರ್ಧಿ ಗ್ಯಾಂಗ್ ಅನ್ನು ನಡೆಸುತ್ತಿದ್ದು ಗಡೋಲಿಯನ್ನು ಹತ್ಯೆ ಮಾಡಲು ಹರ್ಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಎನ್‌ಕೌಂಟರ್‌ನ ಸಮಯದಲ್ಲಿ ಜೈಲಿನಲ್ಲಿದ್ದ ಗುಜ್ಜರ್,  ಪಹುಜಾಳನ್ನು ಹನಿ ಟ್ರ್ಯಾಪ್‌ನಂತೆ ಬಳಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ದಿವ್ಯಾ ಪಹುಜಾ ಅವರು ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ ಕಾರಣ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆಕೆಯನ್ನು ಬಂಧಿಸಿ ಜೈಲಿಗೆ ಹಾಕಿದಾಗ ಪಹುಜಾಗೆ ಕೇವಲ 18 ವರ್ಷ ಆಗಿತ್ತು.

ಇದನ್ನೂ ಓದಿ: ವಿಚ್ಛೇದನ ನೀಡದಿದ್ದರೆ ಅಶ್ಲೀಲ ವಿಡಿಯೋ ವೈರಲ್ ಮಾಡುತ್ತೇನೆ: ಪತ್ನಿಗೆ ಬೆದರಿಕೆ ಹಾಕಿದ ಪತಿ ಆತ್ಮಹತ್ಯೆಗೆ ಯತ್ನ, ಬಂಧನ

ಸಂದೀಪ್ ಗಾಡೋಲಿ ಯಾರು?

ಗುರ್​​ಗಾಂವ್​​​ನ ಗ್ಯಾಂಗ್​​ಸ್ಟರ್ ಸಂದೀಪ್ ಗಡೋಲಿ ಕೊಲೆಗಳ ಸರಮಾಲೆಯ ಆರೋಪ ಹೊತ್ತಿದ್ದ ಮತ್ತು ಎರಡು ದಶಕಗಳಿಂದ ಪೊಲೀಸರ ವಾಟೆಂಡ್ ವ್ಯಕ್ತಿ ಆಗಿದ್ದ. ಫೆಬ್ರವರಿ 6, 2016 ರಂದು ಮುಂಬೈನಲ್ಲಿ ನಡೆದ ಶೂಟೌಟ್‌ನಲ್ಲಿ ಈತ ಗಂಭೀರವಾಗಿ ಗಾಯಗೊಂಡಿದ್ದ. ಇಬ್ಬರು ಗುರ್​​ಗಾಂವ್ ಪೊಲೀಸ್ ಕಾನ್‌ಸ್ಟೆಬಲ್‌ಗಳು ಗಡೋಲಿಯನ್ನು ಬಂಧಿಸಲು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮುಂಬೈನ ಅಂಧೇರಿಯಲ್ಲಿರುವ ಹೋಟೆಲ್‌ಗೆ ಬಂದಾಗ ಅವರ ಮೇಲೆ ಗುಂಡು ಹಾರಿಸಿದ್ದ. ಗಡೋಲಿ ಬಂಧನಕ್ಕೆ ₹ 1.25 ಲಕ್ಷ ನಗದು ಬಹುಮಾನ ಘೋಷಿಸಲಾಗಿತ್ತು. ಈತ 2015 ರ ಅಕ್ಟೋಬರ್‌ನಲ್ಲಿ ಮುನ್ಸಿಪಲ್ ಕೌನ್ಸಿಲರ್ ಬಿಂದರ್ ಗುಜ್ಜರ್ ಅವರ ಚಾಲಕನ ಹತ್ಯೆ ಸೇರಿದಂತೆ ಹಲವಾರು ಕೊಲೆಗಳಿಗೆ ಸಂಬಂಧಿಸಿದಂತೆ ವಾಟೆಂಡ್ ಆಗಿದ್ದ. ಗಡೋಲಿ ವಿರುದ್ಧ 36 ಪ್ರಕರಣಗಳು ದಾಖಲಾಗಿದ್ದವು. 2015ರಲ್ಲಿ ಬಾಂದ್ರಾದಲ್ಲಿ ಮಾಡೆಲ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆತನ ಸಹಾಯಕ ಸೋನು ಅವರನ್ನು ಮುಂಬೈನಲ್ಲಿ ಬಂಧಿಸಲಾಗಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ