ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪತ್ತೆ ಪ್ರಕರಣ: ಏಳು ದಿನಗಳಾದರೂ ಪೊಲೀಸರ ಕೈಸೇರದ ಪೋಸ್ಟ್ ಮಾರ್ಟಂ ವರದಿ
ಚಿತ್ರದುರ್ಗದಲ್ಲಿ ಒಂದೇ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದ್ದವು. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಅಸ್ಥಿಪಂಜರಗಳನ್ನು ಶವಾಗಾರಕ್ಕೆ ರವಾನಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ, ಪೋಸ್ಟ್ ಮಾರ್ಟಂ ನಡೆದು ಏಳು ದಿನಗಳು ಕಳೆದರೂ ವರದಿ ಪೊಲೀಸರ ಕೈಸೇರಲಿಲ್ಲ. ಪೋಸ್ಟ್ ಮಾರ್ಟಂ ಬಳಿಕ ಎರಡು ದಿನದೊಳಗೆ ವರದಿ ಸಿಗಬೇಕಿತ್ತು. ಸದ್ಯ ಪೋಸ್ಟ್ ಮಾರ್ಟ್ಂ, FSL ವರದಿ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಲಿದ್ದಾರೆ.
ಚಿತ್ರದುರ್ಗ, ಜ.5: ಜಿಲ್ಲೆಯಲ್ಲಿ (Chitradurga) ಒಂದೇ ಮನೆಯಲ್ಲಿ ಐದು ಅಸ್ಥಿಪಂಜರಗಳು (Skeleton) ಪತ್ತೆಯಾದ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷೆ ನಡೆದ ಏಳು ದಿನಗಳು ಕಳೆದರೂ ಅದರ ವರದಿ ಪೊಲೀಸರ ಕೈಸೇರಿಲ್ಲ. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯ ಡಾ.ವೇಣು ಪೋಸ್ಟ್ ಮಾರ್ಟಂ ಮಾಡುವ ಏಕೈಕ ವೈದ್ಯರಾಗಿದ್ದು, ಕೆಲ ದಿನಗಳಿಂದ ತರಬೇತಿ ಕಾರ್ಯಗಾರದಲ್ಲೂ ಭಾಗಿಯಾಗಿದ್ದಾರೆ. ಹೀಗಾಗಿ ವರದಿ ಪೊಲೀಸರ ಕೈಸೇರುವಲ್ಲಿ ವಿಳಂಬವಾಗಿದ್ದು,
ಡಿಸೆಂಬರ್ 28 ರ ರಾತ್ರಿ ಮನೆಯೊಂದರಲ್ಲಿ ಐವರು ವ್ಯಕ್ತಿಗಳ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಡಿ. 29 ರಂದು ಅಸ್ಥಿಪಂಜರಗಳನ್ನು ಪೊಲೀಸರು ಜೆಎಂಐಟಿ ಶವಾಗಾರಕ್ಕೆ ರವಾನಿಸಿದ್ದರು. ಡಿಸೆಂಬರ್ 30 ರಂದು ಮರಣೋತ್ತರ ಪರೀಕ್ಷೆ ನಡೆದಿತ್ತು. ಎರಡು ದಿನಗಳಲ್ಲಿ ಪೊಲೀಸರ ಕೈ ಸೇರಬೇಕಾಗಿದ್ದ ವರದಿ ನಾಳೆ ಸಂಜೆ ವೇಳೆಗೆ ಕೈಸೇರುವ ಸಾಧ್ಯತೆ ಇದೆ.
ಅಸ್ಥಿಪಂಚರಗಳ ಸ್ಯಾಂಪಲ್ ಎಫ್ಎಸ್ಎಲ್ಗೆ ರವಾನೆ
ಹೆಚ್ಚಿನ ಪರೀಕ್ಷೆಗಾಗಿ ಮೃತ ವ್ಯಕ್ತಿಗಳ ಮೂಳೆ, ಚರ್ಮ ಸೇರಿದಂತೆ ಇತರೆ ಸ್ಯಾಪಂಲ್ಗಳನ್ನು ಪೊಲೀಸರು ಬೆಂಗಳೂರಿನ ಎಫ್ಎಸ್ಎಲ್ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ. ಮುಂದಿನ ವಾರದಲ್ಲಿ ಇದರ ವರದಿ ಸಿಗುವ ನಿರೀಕ್ಷೆ ಇದೆ ಎಂದು ಪೊಲೀಸ್ ಮೂಲಗಳಿಂದ ಟಿವಿ9ಗೆ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್ಎಲ್ ವರದಿ ಆಧರಿಸಿ ತನಿಖೆ ನಡೆಸಲಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ