ಕೊಪ್ಪಳ, ಡಿ.16: ಜಿಲ್ಲೆಯಲ್ಲಿ (Koppal) ಕುರಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜೀವನೋಪಾಯಕ್ಕೆಂದು ಸಾಕುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳ್ಳತನ (Sheep Theft) ಮಾಡುವ ಖದೀಮ ಗ್ಯಾಂಗ್ನಿಂದ ಕುರಿಗಾಹಿಗಳು ಕಂಗಾಲಾಗಿದ್ದಾರೆ. ರಾತ್ರಿ ವೇಳೆ ಕುರಿಗಾಹಿಗಳು ಹಾಗೂ ನಾಯಿಗಳಿಗೆ ಕೆಮಿಕಲ್ ಸ್ಪ್ರೇ ಹಾಕಿ ಪ್ರಜ್ಞೆ ತಪ್ಪಿಸಿ ಕುರಿಗಳನ್ನು ಕಳ್ಳತನ ಮಾಡಿ ಗೂಡ್ಸ್ ವಾಹನದಲ್ಲಿ ಒಯ್ಯುತ್ತಿದ್ದಾರೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋದ್ಯಾ ಕ್ರಾಸ್, ಮಲ್ಲಾಪುರ ಸೇರಿ ಹಲವಡೆ ಕಳ್ಳತನ ಪ್ರಕರಣಗಳು ನಡೆದಿವೆ. ಪ್ರತಿನಿತ್ಯ ಒಂದಿಲ್ಲೊಂದು ಕಡೆ ಕುರಿ ಕಳ್ಳತನ ಮಾಡಲಾಗುತ್ತಿದೆ. ಎರಡು ದಿನದ ಹಿಂದೆ ಚೌಡಪ್ಪ ಬನ್ನಿ ಎಂಬವರು ಸಾಕುತ್ತಿದ್ದ 25 ಕ್ಕೂ ಹೆಚ್ಚು ಕುರಿಗಳನ್ನು ಕಳ್ಳತನ ಮಾಡಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರನ್ನು ಪತ್ತೆ ಮಾಡುವಂತೆ ಆಗ್ರಹಿಸಲಾಗಿದೆ.
ಇದನ್ನೂ ಓದಿ: ಕೊಪ್ಪಳ: ಕಲ್ಲಂಗಡಿ ತಿನ್ನಲು ಹೊಲಕ್ಕೆ ನುಗ್ಗಿದ ಕರಡಿಯನ್ನು ಅಟ್ಟಾಡಿಸಿದ ನಾಯಿ, ವಿಡಿಯೋ ಇಲ್ಲಿದೆ
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ