ಸುರಪುರ ದೇವಿಕೇರಾ ಜಾತ್ರೆಯಲ್ಲಿ ಅನಿಷ್ಟ ಪದ್ಧತಿ; ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ದಲಿತರಿಗೆ ಗ್ರಾಮದಿಂದ ಬಹಿಷ್ಕಾರ!

ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ಗ್ರಾಮದಿಂದಲೇ ದಲಿತರನ್ನು ಬಹಿಷ್ಕಾರ ಮಾಡಲಾಗುತ್ತದೆಯಂತೆ. ಇಂತಹ ಒಂದು ಅನಿಷ್ಟ ಪದ್ಧತಿಯನ್ನು ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ ಅನುಸರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ‌ ಕೊಟ್ಟು ಮಾಂಸವನ್ನು ದಲಿತರು ತಿನ್ನಬೇಕು ಎಂಬ ಅನಿಷ್ಟ ನಿಯಮವನ್ನು ಹೇರಲಾಗಿದೆ.

ಸುರಪುರ ದೇವಿಕೇರಾ ಜಾತ್ರೆಯಲ್ಲಿ ಅನಿಷ್ಟ ಪದ್ಧತಿ; ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ದಲಿತರಿಗೆ ಗ್ರಾಮದಿಂದ ಬಹಿಷ್ಕಾರ!
ಸುರಪುರ ದೇವಿಕೇರಾ ಜಾತ್ರೆಯಲ್ಲಿ ಹೇರಲಾಗುತ್ತಿರುವ ಅನಿಷ್ಟ ಪದ್ಧತಿ ವಿರುದ್ಧ ಯಾದಗಿರಿ ಜಿಲ್ಲಾಧಿಕಾರಿ, ಎಸ್​ಪಿಗೆ ದೂರು ನೀಡಿದ ದಲಿತ ಸಮುದಾಯ
Follow us
ಅಮೀನ್​ ಸಾಬ್​
| Updated By: Rakesh Nayak Manchi

Updated on:Dec 18, 2023 | 2:04 PM

ಯಾದಗಿರಿ, ಡಿ.16: ಜಿಲ್ಲೆಯಲ್ಲಿ (Yadgir) ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ದರೆ ಗ್ರಾಮದಿಂದಲೇ ದಲಿತರನ್ನು ಬಹಿಷ್ಕಾರ ಮಾಡಲಾಗುತ್ತದೆ. ಇಂತಹ ಒಂದು ಅನಿಷ್ಟ ಪದ್ಧತಿಯನ್ನು ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ (Surapura Devikera fair) ಅನುಸರಿಸಲಾಗುತ್ತಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ‌ ಕೊಟ್ಟು ಮಾಂಸವನ್ನು ದಲಿತರು ತಿನ್ನಬೇಕು ಎಂಬ ಅನಿಷ್ಟ ನಿಯಮವನ್ನು ಹೇರಲಾಗಿದೆ.

ದೇವಿಕೇರಾ ಗ್ರಾಮದಲ್ಲಿ ಡಿ.18 ರಿಂದ ಎರಡು ದಿನ ದ್ಯಾಮವ್ವ, ಮರೆಮ್ಮ, ಪಾಲ್ಕಮ್ಮ ಗ್ರಾಮದೇವತೆಗಳ ಜಾತ್ರೆ ನಡೆಯಲಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ‌ ಕೊಡುವ ಅನಿಷ್ಟ ಪದ್ಧತಿ ಇದೆ. ಬಲಿ ಕೊಟ್ಟ ಕೋಣದ ಮಾಂಸವನ್ನು ದಲಿತರು ತಿನ್ನಬೇಕು. ಇಲ್ಲದಿದ್ದರೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂದು ದಲಿತ ಸಮುದಾಯ ಆರೋಪ ಮಾಡಿದೆ.

ಇದನ್ನೂ ಓದಿ: ಸಾಮಾಜಿಕ ಬಹಿಷ್ಕಾರ; ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಈ ಬಗ್ಗೆ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅವರು ಜಿಲ್ಲಾಧಿಕಾರಿ, ಎಸ್​ಪಿ​​ಗೆ ದೂರು ನೀಡಿದ್ದಾರೆ‌‌‌. ದೇವಿಕೇರಾ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿಪರೀತ ಕೋಣ ಬಲಿ ನಡೆಯುತ್ತವೆ‌. ಜೊತೆಗೆ ಸುರಪುರ, ಹುಣಸಗಿ ತಾಲೂಕಿನಲ್ಲಿ ಡಿಸೆಂಬರ್​ನಿಂದ ಫೆಬ್ರವರಿ ವರೆಗೆ ಹೆಚ್ಚು ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳಲ್ಲಿ ದೇವರ ಹೆಸರಿನಲ್ಲಿ ನೂರಾರು ಪ್ರಾಣಿಗಳನ್ನು ಬಲಿ ಕೊಡಲಾಗುತ್ತಿದೆ. ಈ ತರಹದ ಮೂಢನಂಬಿಕೆ ಹೆಚ್ಚಾಗುತ್ತಿದೆ. ಇದನ್ನು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ತಡೆಯಬೇಕೆಂದು ದೂರು ನೀಡಲಾಗಿದೆ.

ಪ್ರಾಣಿ ಬಲಿ ಹೆಸರಲ್ಲಿ ಚಂದಾ ವಸೂಲಿ

ದೇವರ ಹೆಸರಲ್ಲಿ ಪ್ರಾಣಿ ಬಲಿ ಬಗ್ಗೆ ಡಂಗೂರು ಸಾರಲಾಗುತ್ತಿದೆ. ದೇವಿಕೇರಾ ಗ್ರಾಮದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿಗಾಗಿ ಪ್ರತಿ ಮನೆಯಿಂದ ಚಂದಾ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಚಂದಾ ಎತ್ತುವ ಬಗ್ಗೆ ಗೌಪ್ಯವಾಗಿರಬೇಕೆಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ. ಒಂದು ವಾರದ ಹಿಂದೆ ದೇವಿಕೇರಾ ಗ್ರಾಮದಲ್ಲಿ ಡಂಗೂರು ಸಾರಿಸಲಾಗಿದೆ ಎಂದು ಕೋಣದ ಮಾಂಸ ತಿನ್ನಲು ಆಕ್ಷೇಪಿಸಿದ ಕೆಲ ವ್ಯಕ್ತಿಗಳು ಇದರ ಬಗ್ಗೆ ತಿಳಿಸಿದ್ದಾರೆ.

ಕೋಣದ ರೀತಿ ವ್ಯಕ್ತಿಯ ಬಲಿ!

ಅನಿಷ್ಟ ಪದ್ಧತಿ ಬಗ್ಗೆ ಮಾತನಾಡಿದ ಮಲ್ಲಿಕಾರ್ಜುನ, ದೇವಿಕೇರಾ ಗ್ರಾಮದಲ್ಲಿ ದೇವರ ಜಾತ್ರೆ ವೇಳೆ ಕೋಣ ಹಾಗೂ ಕುರಿಗಳ ಬಲಿ ಕೊಡಲಾಗುತ್ತದೆ. ಜಾತ್ರೆ ವೇಳೆ ಕೋಣ ಬಲಿ ಕೊಡುವ ವೇಳೆ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗುತ್ತದೆ ಎಂದು ಜೀವ ಬೇದರಿಕೆ ಹಾಕಲಾಗಿದೆ. ಕೋಣ ರೀತಿ ಕಡಿಯಲಾಗುತ್ತದೆಂದು ಜೀವಬೇದರಿಕೆ ಹಾಕಿದ್ದಾರೆ. ದೇವಿಕೇರಾ ಗ್ರಾಮದಲ್ಲಿ ಕೋಣ ಹಾಗೂ ಕುರಿಗಳ ಬಲಿ ತಡೆಯಬೇಕು. ಜಾತ್ರೆ ವೇಳೆ ರಾಜಕೀಯ ದ್ವೇಷ ಹಾಗೂ ಹಳೆ ದ್ವೇಷದಿಂದ ಕೊಲೆ ನಡೆಯುವ ಸಂಭವ ಇರುತ್ತದೆ. ಜಾತ್ರೆ ವೇಳೆ ಪ್ರಾಣಿ ಬಲಿ ಕೊಡುವುದು ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:01 am, Sat, 16 December 23

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು