Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ಬಹಿಷ್ಕಾರ; ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಚಾಮರಾಜನಗರ (Chamarajanagar)  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ವ್ಯಕ್ತಿಯೋರ್ವ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಸಾಮಾಜಿಕ ಬಹಿಷ್ಕಾರ; ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು
ಮೃತ ವ್ಯಕ್ತಿ
Follow us
ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 21, 2023 | 9:01 AM

ಚಾಮರಾಜನಗರ, ಅ.21: ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕೆ ವ್ಯಕ್ತಿಯೋರ್ವ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಾಮರಾಜನಗರ (Chamarajanagar)  ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ. ಶಿವರಾಜು(45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇನ್ನು ಇದಕ್ಕೆ ಕಾರಣರಾದವರನ್ನು ಬಂಧಿಸುವಂತೆ ಬೇಗೂರು ಪೊಲೀಸ್ ಠಾಣೆ ಮುಂದೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇನ್ನು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಪೊಲೀಸರ ಭರವಸೆ ಪೊಲೀಸರ ಭರವಸೆ ಹಾಗೂ 17 ಮಂದಿ ವಿರುದ್ದ ಎಫ್ ಐ ಆರ್ ಮಾಡಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಸಾಮಾಜಿಕ ಬಹಿಷ್ಕಾರ ಹಾಕಿ 6 ಸಾವಿರ ರೂ ದಂಡ ವಿಧಿಸಿದ್ದ ಊರಿನ ಮುಖಂಡರು

ಹೌದು, ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಗ್ರಾಮದ ಶಿವಣ್ಣನಾಯ್ಕ ಎಂಬಾತನಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಇದರಿಂದ ಮನನೊಂದು ಶಿವಣ್ಣನಾಯ್ಕ ಆತ್ಮಹತ್ಯೆ ಗೆ ಮುಂದಾಗಿದ್ದ. ಆ ವೇಳೆ ಶಿವಣ್ಣನಾಯ್ಕನನ್ನು ಶಿವರಾಜು ಮನವೊಲಿಸಿ ಸಮಾಧಾನ ಪಡಿಸಿದ್ದ. ಇದಾದ ನಂತರ ಪ್ರಕರಣದಲ್ಲಿ ನೀನು ಶಾಮೀಲಾಗಿದ್ದೀಯಾ ಎಂದು ಊರಿನ ಮುಖಂಡರು ಸೇರಿ ಶಿವರಾಜುವುಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಜೊತೆಗೆ 6 ಸಾವಿರ ರೂ ದಂಡ ವಿಧಿಸಿದ್ದರು. ಇದರಿಂದ ಮನನೊಂದು ಶಿವರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಮೊಬೈಲ್ ಕಳೆದುಕೊಂಡ ಯುವಕ, ಹತ್ತು ದಿನ ಅದನ್ನು ಬಿಟ್ಟಿರಲಾರದೆ ನರಳಿ, ಕೋಟೆನಾಡಿನಲ್ಲಿ ಆತ್ಮಹತ್ಯೆಗೆ ಶರಣಾದ

ಮಹಿಳೆಗೆ ಮಂಕುಬೂದಿ ಎರಚಿ ಮಾಂಗಲ್ಯ ಸರ ಕಳ್ಳತನ

ನೆಲಮಂಗಲ: ಮಹಿಳೆಗೆ ಮಂಕುಬೂದಿ ಎರಚಿ ಮಾಂಗಲ್ಯ ಸರ ಕಳ್ಳತನ ಮಾಡಿದ ಘಟನೆ ನೆಲಮಂಗಲದ ಮಂಜುನಾಥ್ ನಗರದಲ್ಲಿ ನಡೆದಿದೆ. ಪ್ರಾವಿಷನ್ ಸ್ಟೋರ್ನಲ್ಲಿದ್ದ ತನುಜ ಅವರ ಬಳಿ ಪಕ್ಕದ ರಸ್ತೆಯಲ್ಲಿ ಲ್ಯಾಪ್‌ಟಾಪ್ ಕೊಡುತ್ತಿದ್ದಾರೆ ಬನ್ನಿ, ನಿಮ್ಮ ಮಗಳಿಗೆ ಆಗುತ್ತೆ ಎಂದಿದ್ದಾನೆ. ಅಷ್ಟೇ ಅಲ್ಲ, ನಿಮ್ಮ ಮಾಂಗಲ್ಯಸರ ಕವರ್​ನಲ್ಲಿ ಹಾಕಿ ತುಂಬಾ ಜನ ಇದ್ದಾರೆ ಕಳ್ಳತನ ಆಗಬಹುದೆಂದು ಹೇಳಿ ಸ್ಟೋರ್​ನಿಂದ ಆಚೆ ಕರತಂದು ಮಾಂಗಲ್ಯ ಸರ ಕದ್ದು ಬೈಕ್​ನಲ್ಲಿ ಪರಾರಿಯಾಗಿದ್ದಾನೆ. ಇದು 35ಗ್ರಾಂ ತೂಕದ ಒಂದುವರೆ ಲಕ್ಷ ಬೆಲೆಬಾಳುವ ಚಿನ್ನದ ಮಾಂಗಲ್ಯ ಸರ  ಆಗಿದ್ದು, ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ IPC 420,379 ರೀತ್ಯಾ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 am, Sat, 21 October 23