ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ ವೇಳೆ ಸಿಕ್ಕಿದ್ದ 5 ಗ್ರೆನೇಡ್​ಗಳ ನಾಶ

ಐವರು ಶಂಕಿತ ಉಗ್ರರ ಬಂಧನ ವೇಳೆ ಸಿಕ್ಕಿದ್ದ 5 ಗ್ರೆನೇಡ್​ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಆವತಿ ಪ್ರದೇಶದ ಬಳಿ ಪೊಲೀಸರಿಗೆ ಸೇರಿದ ನಿರ್ಜನ ಪ್ರದೇಶದಲ್ಲಿ ನಾಶ ಮಾಡಲಾಗಿದೆ. ಕೋರ್ಟ್ ಅನುಮತಿ ಪಡೆದು ಐಎಸ್​ಡಿ ಅಧಿಕಾರಿಗಳ ಜೊತೆ ಸೇರಿ ಸಿಸಿಬಿ ಪೊಲೀಸರಿಂದ ನಾಶ ಮಾಡಲಾಗಿದೆ.

ಬೆಂಗಳೂರು: ಐವರು ಶಂಕಿತ ಉಗ್ರರ ಬಂಧನ ವೇಳೆ ಸಿಕ್ಕಿದ್ದ 5 ಗ್ರೆನೇಡ್​ಗಳ ನಾಶ
ಗ್ರೆನೇಡ್​ಗಳನ್ನು ನಾಶ ಮಾಡಿದ ಸ್ಥಳ
Follow us
Prajwal Kumar NY
| Updated By: ಗಂಗಾಧರ​ ಬ. ಸಾಬೋಜಿ

Updated on: Oct 20, 2023 | 7:29 PM

ಬೆಂಗಳೂರು, ಅಕ್ಟೋಬರ್​​​​​ 20: ಐವರು ಶಂಕಿತ ಉಗ್ರರ ಬಂಧನ ವೇಳೆ ಸಿಕ್ಕಿದ್ದ 5 ಗ್ರೆನೇಡ್​ಗಳನ್ನು (grenades) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಆವತಿ ಪ್ರದೇಶದ ಬಳಿ ಪೊಲೀಸರಿಗೆ ಸೇರಿದ ನಿರ್ಜನ ಪ್ರದೇಶದಲ್ಲಿ ನಾಶ ಮಾಡಲಾಗಿದೆ. ಕೋರ್ಟ್ ಅನುಮತಿ ಪಡೆದು ಐಎಸ್​ಡಿ ಅಧಿಕಾರಿಗಳ ಜೊತೆ ಸೇರಿ ಸಿಸಿಬಿ ಪೊಲೀಸರಿಂದ ನಾಶ ಮಾಡಲಾಗಿದೆ. ಜು.9ರಂದು ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೈಯದ್ ಸುಹೇಲ್, ಉಮರ್, ಮುದಾಸಿರ್, ಜಾಹಿದ್ ಬಂಧಿತರು.

ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸುವ ಮೂಲಕ ಪಿಸ್ತೂಲ್, 4 ವಾಕಿಟಾಕಿ, ಫೋನ್, 5 ಜೀವಂತ ಗ್ರೆನೇಡ್ ಪತ್ತೆಯಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್​ ಪತ್ತೆ, ಸಿಸಿಬಿ ಶಾಕ್

ಶಂಕಿತ ಉಗ್ರನ ಮನೆ ಬೀರುವಿನಲ್ಲಿ 4 ಜೀವಂತ ಹ್ಯಾಂಡ್ ಗ್ರೆನೇಡ್​ಗಳು ಪತ್ತೆಯಾಗಿದ್ದವು. ಬೆಂಗಳೂರಿನ ಕೊಡಿಗೆಹಳ್ಳಿಯ ನಿವಾಸಿ ಜಾಹಿದ್ ತಬ್ರೇಜ್ ಸತ್ಯ ಬಾಯಿಬಿಟ್ಟಿದ್ದ. ಭದ್ರಪ್ಪ ಲೇಔಟ್​ನ ಮನೆಯ ರೂಮ್​​ನಲ್ಲಿ 4 ಗ್ರೆನೇಡ್ ಬಟ್ಟೆಯಲ್ಲಿ ಸುತ್ತಿ ಬೀರುವಿನಲ್ಲಿ ಇಟ್ಟಿದ. 4 ಹ್ಯಾಂಡ್ ಗ್ರೆನೇಡ್​ನ್ನ ಮಾಸ್ಟರ್​ಮೈಂಡ್ ಜುನೈದ್​ ಪಾರ್ಸೆಲ್ ಕಳಿಸಿದ್ದ ಎನ್ನಲಾಗಿತ್ತು.

ಜು 11ರಂದು ಗ್ರೆನೇಡ್ ಎಂಟನೇ ಶಂಕಿತ ಉಗ್ರ ಗ್ರೆನೇಡ್ ಪೂರೈಸಿದ್ದ. ನೆಲಮಂಗಲ ಟೋಲ್​ ಬಳಿ ಕಾರಲ್ಲಿ ತೆರಳಿ ಜಾಹಿದ್ ತಬ್ರೇಜ್ ಗ್ರೆನೇಡ್ ಪಡೆದಿದ್ದ. ಸೇಫ್ ಆಗಿ ಮನೆಯಲ್ಲಿ ಇಡುವಂತೆ ತಬ್ರೇಜ್​ಗೆ ಜುನೈದ್ ಸೂಚಿಸಿದ್ದ ಅನ್ನೋದ ಗೊತ್ತಾಗಿತ್ತು. ಕೆಲವೇ ದಿನದಲ್ಲಿ ಗ್ರೆನೇಡ್ ಸ್ಫೋಟಕ್ಕೆ ಸಂಚು ಹಾಕಿದ್ದರು ಎನ್ನಲಾಗಿತ್ತು. ಶಂಕಿತ ಉಗ್ರ ತಬ್ರೇಜ್ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ 4 ಜೀವಂತ ಹ್ಯಾಂಡ್​ ಗ್ರೆನೇಡ್​ಗಳನ್ನ ವಶಕ್ಕೆ ಪಡೆದಿತ್ತು.

ಇದನ್ನೂ ಓದಿ: Bengaluru: ಶಂಕಿತ ಉಗ್ರರ ಬಂಧನ ಪ್ರಕರಣ: ಪ್ರಾಥಮಿಕ ತನಿಖಾ ವರದಿಯನ್ನ ಕೇಂದ್ರಕ್ಕೆ ಕಳುಹಿಸಿದ ಸಿಸಿಬಿ

ಸಿಸಿಬಿ ಪೊಲೀಸರು ಶಂಕಿತ ಉಗ್ರರ ಕಳೆದ ಎರಡು ವರ್ಷಗಳ ಕರೆಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಂಕಿತರು ಈವರೆಗೆ ಯಾರ ಯಾರ ಜೊತೆ ಸಂಪರ್ಕ ಹೊಂದಿದ್ದರು ಎಂದು ಯುಎಪಿಎ ಸೆಕ್ಷನ್ ಅಡಿಯಲ್ಲಿ ಎರಡು ವರ್ಷಗಳ ಸಿಡಿಆರ್ ಪಡೆದು ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೆ ಈಗಾಗಲೇ ಕೆಲವರು ಸಿಮ್ ಬದಲಿಸಿ ಹೊಸ ಸಿಮ್​ಗಳ ಖರೀದಿ ಮಾಡಿದ್ದಾರೆ. ಈ ಹೊಸ ಸಿಮ್​ನಲ್ಲಿ ಯಾರಿಗೆಲ್ಲಾ ಕರೆ ಮಾಡಿದ್ದಾರೆ ಎಂದು ಸಿಸಿಬಿ ತನಿಖೆ ನಡೆಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ