ಪೊಲೀಸ್ ಇಲಾಖೆಗೆ ಬೆಲ್ಜಿಯಂ ನಾಯಿಮರಿ ಉಡುಗೊರೆ ನೀಡಿದ ಕೋಲಾರ ಹೆಡ್ ಕಾನ್‌ಸ್ಟೆಬಲ್, ಏನಿದರ ವಿಶೇಷತೆ?
Kolar Dog Squad: ರಾಜ್ಯ ಪೊಲೀಸ್ ಇಲಾಖೆಗೆ ಯೂರೋಪ್ ಮೂಲದ ವಿಶೇಷ ತಳಿ ನಾಯಿಮರಿಯನ್ನು ಕೊಡುಗೆಯಾಗಿ ನೀಡಲಾಗಿದೆ. 61 ದಿನದ ಬೆಲ್ಜಿಯಂ ಮಲಿನೋಸ್ ಎಂಬ ತಳಿಯ ಮುದ್ದು ಮರಿ ಇದಾಗಿದೆ. ಹೆಡ್ ಕಾನ್‌ಸ್ಟೆಬಲ್ ಸುರೇಶ್ ಅವರು ಈ ಮೆರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೋಲಾರ, ಅಕ್ಟೋಬರ್ 21: ರಾಜ್ಯ ಪೊಲೀಸ್ ಇಲಾಖೆಗೆ ಯೂರೋಪ್ ಮೂಲದ ವಿಶೇಷ ತಳಿ ನಾಯಿಮರಿಯನ್ನು (Puppy) ಕೊಡುಗೆಯಾಗಿ ನೀಡಲಾಗಿದೆ. 61 ದಿನದ ಬೆಲ್ಜಿಯಂ ಮಲಿನೋಸ್ (Belgian Malinois) ಎಂಬ ತಳಿಯ ಮುದ್ದು ಮರಿ ಇದಾಗಿದೆ. ಹೆಡ್ ಕಾನ್ಸ್ಟೇಬಲ್ ಸುರೇಶ್ ಅವರು ಈ ಮೆರಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಂದಹಾಗೆ ಯೂರೋಪ್ ಖಂಡದಲ್ಲಿ ಪೊಲೀಸ್ ಇಲಾಖೆಯಲ್ಲಿ (Dog Squad) ಈ ತಿಳಿಯ ನಾಯಿಗಳನ್ನು ಹೆಚ್ಚಾಗಿ ಬಳಸುತ್ತಾರೆ. ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಬಳಸುವ ಬೆಲ್ಜಿಯಂ ಮಲಿನೋಸ್ ತಳಿ ಇದಾಗಿದೆ.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸಮ್ಮುಖದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗೆ (Kolar Police) ನಾಯಿಮರಿಯನ್ನು ಹಸ್ತಾಂತರ ಮಾಡಲಾಗಿದೆ. ಈ ನಾಯಿಮರಿಗೆ ಒಂದು ವರ್ಷ ಕಾಲ ಪೊಲೀಸ್ ತರಬೇತಿ ನೀಡಿದ ಬಳಿಕ ಪೊಲೀಸ್ ಕಾರ್ಯಾಚರಣೆಯಲ್ಲಿ ತೊಡಗುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos