Gauribidanur Crime: ಶುಕ್ರವಾರ ಮಧ್ಯ ರಾತ್ರಿ ಆತ ಯಾರದೋ ಮನೆಯ ಬಾಗಿಲು ಬಡಿದಿದ್ದೇಕೆ? ಸ್ಥಳೀಯರು ಆತನನ್ನು ಬಡಿದು ಕೊಂದಿದ್ದೇಕೆ? ಮೂವರು ಆರೆಸ್ಟ್

ಇನ್ನು ಹತ್ಯೆಗೀಡಾದ ಮಂಜುನಾಥ ಮಧ್ಯರಾತ್ರಿ ಮನೆಗಳ ಬಳಿ ಏಕೆ ಹೋದ? ಊಟ, ತಿಂಡಿ, ನೀರು ಹುಡುಕಿಕೊಂಡು ಹೋದನಾ? ಇಲ್ಲವೇ ಕಳ್ಳತನಕ್ಕೆಂದು ಮನೆ ಬಳಿ ಹೋದನಾ? ಇಲ್ಲ ಕುಡಿತದ ನಶೆ ಹೆಚ್ಚಾಗಿ ಮನೆ ಬಾಗಿಲು ತಟ್ಟಿದನಾ ಗೊತ್ತಿಲ್ಲ? ಆದರೆ ಮನೆಬಾಗಿಲು ತಟ್ಟಿದ ಕಾರಣ ನಿವಾಸಿ ಅಂಬರೀಶ ಅಕ್ಕಪಕ್ಕದ ಮನೆಗಳಿಗೆ ಫೋನ್ ಮಾಡಿ ತಿಳಿಸಿದ್ದಾನೆ.

Gauribidanur Crime: ಶುಕ್ರವಾರ ಮಧ್ಯ ರಾತ್ರಿ ಆತ ಯಾರದೋ ಮನೆಯ ಬಾಗಿಲು ಬಡಿದಿದ್ದೇಕೆ? ಸ್ಥಳೀಯರು ಆತನನ್ನು ಬಡಿದು ಕೊಂದಿದ್ದೇಕೆ? ಮೂವರು ಆರೆಸ್ಟ್
ಶುಕ್ರವಾರ ಮಧ್ಯರಾತ್ರಿ ಗೌರಿಬಿದನೂರಿನಲ್ಲಿ ಮನೆಗಳ ಬಾಗಿಲು ಬಡಿದು ಹತ್ಯೆಗೀಡಾದ ಬೆಂಗಳೂರಿನ ವ್ಯಕ್ತಿ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಸಾಧು ಶ್ರೀನಾಥ್​

Updated on: Dec 16, 2023 | 12:45 PM

ಚಿಕ್ಕಬಳ್ಳಾಪುರ, ಡಿಸೆಂಬರ್​ 16 : ಶುಕ್ರವಾರ ಮಧ್ಯ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ ಮನೆಗಳ ಬಾಗಿಲು ಬಡಿಯುತ್ತಿದ್ದ ವ್ಯಕ್ತಿಯನ್ನು ಹಿಡಿದ ಅಕ್ಕಪಕ್ಕದ ನಿವಾಸಿಗಳು (neighbours) ಥಳಿಸಿದ ಕಾರಣ ಬಾಗಿಲು ಬಡೆದ ವ್ಯಕ್ತಿ ಮೃತಪಟ್ಟ (Murder) ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಟೌನ್‍ನ ಕರೇಕಲ್ಲಹಳ್ಳಿಯ ಸ್ವಾಗತ್ ಬಡಾವಣೆಯಲ್ಲಿ (Gauribidanur Murder) ನಡೆದಿದೆ.

ಮಧ್ಯ ರಾತ್ರಿ ಬಾಗಿಲು ಬಡಿದಿದ್ದ ವ್ಯಕ್ತಿ ಯಾರು? ಮೂಲತಃ ಬೆಂಗಳೂರಿನ ಆರ್.ಟಿ.ನಗರದ ನಿವಾಸಿ ಮಂಜುನಾಥ್ ಎನ್ನುವವರು ಮದ್ಯವಸನಿಯಾಗಿದ್ದನಂತೆ. ಇದರಿಂದ ಪತ್ನಿ ಹಾಗೂ ಮಕ್ಕಳು ಕಳೆದ 7 ತಿಂಗಳ ಹಿಂದೆಯೇ ಮನೆಯಿಂದ ಆಚೆ ಹಾಕಿದ್ದರಂತೆ. ಮಂಜುನಾಥ ಗೌರಿಬಿದನೂರು ನಗರದಲ್ಲಿ ಕೂಲಿ-ನಾಲಿ ಮಾಡಿಕೊಂಡು ಮದ್ಯ ವ್ಯಸನಿಯಾಗಿದ್ದನಂತೆ. ರಾತ್ರಿ ಮೃತಪಟ್ಟ ವ್ಯಕ್ತಿಯೇ ಮಂಜುನಾಥ ಎಂಬುದು ದೃಢವಾಗಿದೆ.

ಅಸಲಿಗೆ ಆಗಿದ್ದೇನು ? ಇನ್ನು ಮಂಜುನಾಥ ಮಧ್ಯರಾತ್ರಿ ಜನವಸತಿ ಪ್ರದೇಶಗಳ ಮನೆಗಳ ಬಳಿ ಏಕೆ ಹೋದ? ಊಟ, ತಿಂಡಿ, ನೀರು ಹುಡುಕಿಕೊಂಡು ಹೋದನಾ…? ಇಲ್ಲವೇ ಕಳ್ಳತನಕ್ಕೆಂದು ಮನೆ ಬಳಿ ಹೋದನಾ…? ಇಲ್ಲ ಕುಡಿತದ ನಶೆ ಹೆಚ್ಚಾಗಿ ಮನೆ ಬಾಗಿಲು ತಟ್ಟಿದನಾ ಗೊತ್ತಿಲ್ಲ? ಆದರೆ ಮನೆಬಾಗಿಲು ತಟ್ಟಿದ ಕಾರಣ ನಿವಾಸಿ ಅಂಬರೀಶ ಅಕ್ಕಪಕ್ಕದ ಮನೆಗಳಿಗೆ ಫೋನ್ ಮಾಡಿ ತಿಳಿಸಿದ್ದಾನೆ.

Also Read: ಚಿಕ್ಕಬಳ್ಳಾಪುರ ಅಂಚೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ, ತಿಂಗಳುಗಳೇ ಕಳೆದರೂ ವಿತರಣೆಯಾಗದ ದಾಖಲೆಗಳು

ಆಗ ಅಕ್ಕಪಕ್ಕದ ಮನೆಯ ನಿವಾಸಿಗಳಾದ ಸುನಿಲ್, ಕೈಲಾಶ್ ಆಗಮಿಸಿ ಪ್ರಶ್ನಿಸಿದ್ದಾರೆ. ಸಮರ್ಪಕ ಉತ್ತರ ನೀಡದೇ ಅನುಮಾನಸ್ಪದವಾಗಿ ವರ್ತಿಸಿದ ಕಾರಣ ಮೂವರು ಕೈಗೆ ಸಿಕ್ಕ ಪೈಪ್, ದೊಣ್ಣೆಗಳಿಂದ ಮಂಜುನಾಥನಿಗೆ ಹೊಡೆದಿದ್ದಾರೆ. ಆಗ ಮಂಜುನಾಥ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಸೇರಿಸಿದರಾದರೂ ಮಂಜುನಾಥ ಬದುಕಲಿಲ್ಲ.

ಪೊಲೀಸರಿಂದ ಕೊಲೆ ಪ್ರಕರಣ ದಾಖಲು? ಇನ್ನು ಮಂಜುನಾಥನ ಸಂಬಂಧಿಗಳು ನೀಡಿದ ದೂರಿನ ಮೇರೆಗೆ ಗೌರಿಬಿದನೂರು ವೃತ್ತ ನಿರೀಕ್ಷಕರಾದ ಕೆ.ಪಿ. ಸತ್ಯನಾರಾಯಣ, ಗೌರಿಬಿದನೂರು ನಗರಠಾಣೆ ಪಿಎಸ್‍ಐ ಗೋಪಾಲ್ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಬರೀಶ, ಸುನಿಲ್, ಕೈಲಾಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 3 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

112ಗೆ ಕರೆ ಮಾಡಬಹುದಿತ್ತು: ಮಧ್ಯರಾತ್ರಿ ಬಂದು ಮನೆ ಬಾಗಿಲು ತಟ್ಟಿದ್ದ ವ್ಯಕ್ತಿ ಮಂಜುನಾಥನನ್ನು ಹೊಡೆದು ಕೊಲ್ಲುವುದರ ಬದಲು ಪೊಲೀಸ್ ತುರ್ತು ಸಹಾಯವಾಣಿ 112ಗೆ ಕರೆ ಮಾಡಿದ್ದರೆ ಕ್ಷಣಾರ್ಧದಲ್ಲಿ 112 ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಿದ್ದರು. ಆದರೆ ಮನೆ ಬಳಿ ಅನ್ನ, ನೀರು, ಕೇಳಲೋ ಇಲ್ಲವೋ, ಕಳ್ಳತನಕ್ಕೆ ಬಂದಿದ್ದ ವ್ಯಕ್ತಿಯನ್ನು ಪೊಲೀಸರಿಗೆ ಹಿಡಿದುಕೊಡುವುದರ ಬದಲು ಹೊಡೆದು ಕೊಂದಿದ್ದಕ್ಕೆ 3 ಜನರ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ