AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ ಅಂಚೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ, ತಿಂಗಳುಗಳೇ ಕಳೆದರೂ ವಿತರಣೆಯಾಗದ ದಾಖಲೆಗಳು

ಚಿಕ್ಕಬಳ್ಳಾಪುರ ಆರ್.ಟಿ.ಓ. ಯಿಂದ ದಾಖಲೆಗಳನ್ನು ಪಡೆದಿರುವ ಚಿಕ್ಕಬಳ್ಳಾಪುರ ಅಂಚೆ ಇಲಾಖೆ 1 ತಿಂಗಳಿನಿಂದ ದಾಖಲೆಗಳನ್ನು ಅಂಚೆ ಬಟವಾಡೆ ಮಾಡದೇ ಕಛೇರಿಯಲ್ಲಿಯೇ ಸಂಗ್ರಹಿಸಿಕೊಂಡಿದೆ. ಇದರಿಂದ ಸಾರ್ವಜನಿಕರು ಆರ್.ಟಿ.ಓ ಹಾಗೂ ಅಂಚೆ ಕಛೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಅಂಚೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ, ತಿಂಗಳುಗಳೇ ಕಳೆದರೂ ವಿತರಣೆಯಾಗದ ದಾಖಲೆಗಳು
ಚಿಕ್ಕಬಳ್ಳಾಪುರ ಅಂಚೆ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಪರದಾಟ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Dec 16, 2023 | 11:59 AM

Share

ರಾಜ್ಯ ಸಾರಿಗೆ ಇಲಾಖೆಯು ತನ್ನ ಸುಪರ್ದಿಯಲ್ಲಿರುವ ಸಾರ್ವಜನಿಕರ ಎಲ್.ಎಲ್.ಆರ್, ಡಿ.ಎಲ್, ಆರ್.ಸಿ, ವಾಹನ ಟ್ರಾನ್ಸ್ ಫರ್ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸಾರ್ವಜನಿಕರಿಗೆ ವಿತರಿಸಲು ಅಂಚೆ ಇಲಾಖೆಯ (Chikkaballapur postal department) ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ. ಆದರೆ ಆರ್.ಟಿ.ಓ ( rto) ನೀಡುವ ದಾಖಲೆಗಳನ್ನು (documents) ಅಂಚೆ ಇಲಾಖೆ ಒಂದು ತಿಂಗಳಾದರೂ ಸಹಾ ಸಾರ್ವಜನಿಕರಿಗೆ ವಿತರಿಸದೇ ನಿರ್ಲಕ್ಷ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಒಂದು ವರದಿ..

ಎಲ್.ಎಲ್.ಆರ್., ಡಿ.ಎಲ್., ಆರ್.ಸಿ., ವಾಹನ ಟ್ರಾನ್ಸ್ ಫರ್ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸಾರ್ವಜನಿಕರಿಗೆ ವಿತರಿಸಲು ಆರ್.ಟಿ.ಓ ಸಾರಿಗೆ ಇಲಾಖೆ, ಭಾರತೀಯ ಅಂಚೆ ಇಲಾಖೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಆರ್.ಟಿ.ಓ. ಸಾರ್ವಜನಿಕರಿಗೆ ವಿತರಣೆ ಮಾಡುವ ದಾಖಲೆಗಳನ್ನು ಅಂಚೆ ಇಲಾಖೆಗೆ ನೀಡುತ್ತಾರೆ. ಅಂಚೆ ಇಲಾಖೆ ಸಕಾಲಕ್ಕೆ ಅವುಗಳನ್ನು ಸಂಬಂಧಿಸಿದ ಸಾರ್ವಜನಿಕರಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸಿಕೊಡಬೇಕು.

ತಲಾ ಪತ್ರಕ್ಕೆ ಅಂಚೆ ಇಲಾಖೆ ರೂ. 50 ಹಣ ಪಡೆಯುತ್ತದೆ. ಆದರೆ ಚಿಕ್ಕಬಳ್ಳಾಪುರ ಆರ್.ಟಿ.ಓ. ಯಿಂದ ದಾಖಲೆಗಳನ್ನು ಪಡೆದುಕೊಂಡಿರುವ ಚಿಕ್ಕಬಳ್ಳಾಪುರದ ಅಂಚೆ ಇಲಾಖೆ ಕಳೆದ ಒಂದು ತಿಂಗಳಿನಿಂದ ದಾಖಲೆಗಳನ್ನು ಅಂಚೆ ಬಟವಾಡೆ ಮಾಡದೇ ಕಛೇರಿಯಲ್ಲಿಯೇ ಸಂಗ್ರಹಿಸಿಕೊಟ್ಟುಕೊಂಡಿದೆ. ಇದರಿಂದ ಸಾರ್ವಜನಿಕರು ಆರ್.ಟಿ.ಓ ಹಾಗೂ ಅಂಚೆ ಕಛೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಆರ್.ಟಿ.ಓ ಹಾಗೂ ಅಂಚೆ ಇಲಾಖೆಗಳು ಒಪ್ಪಂದ ಮಾಡಿಕೊಂಡಿದ್ದು, ತಲಾ ಪತ್ರಕ್ಕೆ ರೂ. 50 ಶುಲ್ಕವನ್ನು ಸಾರ್ವಜನಿಕರಿಂದಲೇ ಪಡೆಯುತ್ತಾರೆ. ಸ್ವತಃ ಪೋಸ್ಟ್​​ ಮ್ಯಾನ್‍ಗಳು ಆರ್.ಟಿ.ಓ ಕಛೇರಿಗೆ ಹೋಗಿ ದಾಖಲೆಗಳನ್ನು ಪಡೆದು, ಅದಕ್ಕೆ ಕವರಿಂಗ್ ಲಕೋಟೆಗಳನ್ನು ರೆಡಿ ಮಾಡಿ, ಸಂಬಂಧಿಸಿದ ವ್ಯಕ್ತಿಗೆ ನೋಂದಾಯಿತ ಅಂಚೆ ಮೂಲಕ ತಲುಪಿಸಬೇಕು. ಆದರೆ ಚಿಕ್ಕಬಳ್ಳಾಪುರದ ಅಂಚೆ ಇಲಾಖೆ ಅಧಿಕಾರಿಗಳು ಕರ್ತವ್ಯಲೋಪ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇನ್ನು ಪೋಸ್ಟ್ ಮಾಸ್ಟರ್ ಮಂಜುರವರನ್ನು ಪ್ರಶ್ನಿಸಿದರೆ ಸಿಬ್ಬಂದಿ ಕೊರತೆ ನೆಪ ಹೇಳಿದ್ದಾರೆ.

ಇನ್ನು ಒಪ್ಪಂದದಂತೆ ಆರ್.ಟಿ.ಓ. ಸಾರ್ವಜನಿಕ ದಾಖಲೆಗಳನ್ನು ಬೈ ಹ್ಯಾಂಡ್ ನೀಡುವಂತಿಲ್ಲ. ನೋಂದಾಯಿತ ಅಂಚೆ ಮೂಲಕವೇ ಸಾರ್ವಜನಿಕರು ಪಡೆಯಬೇಕು. ಆದರೆ ಚಿಕ್ಕಬಳ್ಳಾಪುರದ ಅಂಚೆ ಇಲಾಖೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತಲುಪಬೇಕಾಗಿರುವ ಸಾವಿರಾರು ಮಹತ್ವದ ದಾಖಲೆಗಳು ಅಂಚೆ ಇಲಾಖೆಯಲ್ಲಿಯೇ ಕೊಳೆಯುತ್ತಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್