ಕೊಪ್ಪಳ: ಕಲ್ಲಂಗಡಿ ತಿನ್ನಲು ಹೊಲಕ್ಕೆ ನುಗ್ಗಿದ ಕರಡಿಯನ್ನು ಅಟ್ಟಾಡಿಸಿದ ನಾಯಿ, ವಿಡಿಯೋ ಇಲ್ಲಿದೆ
ಕಲಂಗಡಿ ತಿಂದು ಹಾಳು ಮಾಡುತ್ತಿದ್ದ ಕರಡಿಯನ್ನು ನಾಯಿಯೊಂದು ಅಟ್ಟಾಡಿಸಿ ಓಡಿಸಿದ ಘಟನೆ ಕೊಪ್ಪಳ ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಹಲವೆಡೆ ಕರಡಿ ದಾಳಿಗಳು ನಡೆದಿದ್ದು, ತಾಲೂಕಿನಲ್ಲಿ ಕರಡಿ ಹಾವಳಿ ಹೆಚ್ಚುತ್ತಿದೆ. ಹೀಗಾಗಿ ಕರಡಿಗಳ ಹಾವಳಿಗೆ ಬ್ರೇಕ್ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.
ಕೊಪ್ಪಳ, ಡಿ.15: ಕಲ್ಲಂಗಡಿ ತಿನ್ನಲು ಹೊಲಕ್ಕೆ ನುಗ್ಗಿದ ಕರಡಿಯನ್ನ (Bear) ನಾಯಿಯೊಂದು ಅಟ್ಟಾಡಿಸಿ ಓಡಿಸಿದ ಘಟನೆ ಕೊಪ್ಪಳ (Koppal) ತಾಲೂಕಿನ ಗಂಗನಾಳ ಗ್ರಾಮದಲ್ಲಿ ನಡೆದಿದೆ. ಕರಡಿಯೊಂದು ರೈತ ವಿರೂಪಾಕ್ಷಿ ಎಂಬವರ ಜಮೀನಿಗೆ ನುಗ್ಗಿ ಕಲ್ಲಂಗಡಿ ಹಣ್ಣುಗಳನ್ನು ತಿಂದು ಹಾಕಿದೆ. ಈ ವೇಳೆ ನಾಯಿ ಕರಡಿಯನ್ನು ಓಡಿಸಿದೆ. ಕೊಪ್ಪಳ ಜಿಲ್ಲೆಯ ಹಲವು ಕಡೆಗಳಲ್ಲಿ ನಿರಂತರ ಕರಡಿ ದಾಳಿ ನಡೆಯುತ್ತಿದೆ. ರೈತರ ಜಮೀನುಗಳಿಗೆ ದಿನನಿತ್ಯ ಕರಡಿ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕುವಂತೆ ರೈತರು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos