ಬೆಳಗಾವಿ ಅಧಿವೇಶನ: ಕಾರ್ಯಕಪಾಪಗಳು ಇವತ್ತಿಗೆ ಕೊನೆ, ಸದನದಲ್ಲಿ ಬೆರಳೆಣಿಕೆಯಷ್ಟು ಸದಸ್ಯರು!
ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ಅಧಿವೇಶನವನ್ನು ಎರಡು ದಿನಗಳಷ್ಟು ಮೊದಲು ಮುಕ್ತಾಯಗೊಳಿಸಲಾಗಿತ್ತು. ಅವಧಿಗೆ ಮೊದಲು ಕೊನೆಗೊಳಿಸುವುದು, ಸಚಿವರು, ಸದಸ್ಯರು ಗೈರಾಗುವುದೇ ಅಧಿವೇಶನದ ಹೈಲೈಟ್ ಆದರೆ ಯಾವ ಪುರುಷಾರ್ಥಕ್ಕೆ ಬೆಳಗಾವಿಯಲ್ಲಿ ಅಧಿವೇಶನವನ್ನು ನಡೆಸಲಾಗುತ್ತಿದೆ? ಉತ್ತರ ಕರ್ನಾಟಕ ಜನರಿಗೆ ಮಂಕುಬೂದಿ ಎರಚುವುದನ್ನು ಸಂಬಂಧಪಟ್ಟವರು ನಿಲ್ಲಿಸದೆ ಹೋದರೆ ಈ ಭಾಗದ ಕನ್ನಡಿಗರು ರೊಚ್ಚಿಗೆದ್ದಾರು.
ಬೆಳಗಾವಿ: ಸುವರ್ಣ ಸೌಧದಲ್ಲಿ ಕಳೆದ ವಾರದಿಂದ ನಡೆಯುತ್ತಿರುವ ವಿಧಾನಮಂಡಲ ಎರಡು ಸದನಗಳ ಚಳಿಗಾಲದ ಅಧಿವೇಶನಕ್ಕೆ ಇವತ್ತು ಕೊನೆಯ ದಿನ. ಬೆಳಗಾವಿಯಲ್ಲಿ ಅಧಿವೇಶನ (Belagavi Assembly Session) ನಡೆಸುತ್ತಿರುವುದರ ಉದ್ದೇಶ ಈಡೇರಿತೋ ಅಥವಾ ಪ್ರತಿಬಾರಿಯಂತೆ ನಿರರ್ಥಕವಾಯಿತೋ ಅಂತ ಸರ್ಕಾರ ಮತ್ತು ಪ್ರತಿಪಕ್ಷಗಳ ಸದಸ್ಯರು ಕನ್ನಡಿಗರಿಗೆ ಹೇಳಬೇಕು. ಕೊನೆದಿನದ ಕಾರ್ಯಕಲಾಪ (proceedings) ಹೇಗೆ ನಡೆಯುತ್ತಿದೆ ಅಂತ ಒಮ್ಮೆ ನೋಡಿ, ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಹಾಜರಿದ್ದಾರೆ. ಸದಸ್ಯರ ಹೆಸರು ಕೂಗಿ, ಯಾಕೆ ಬಂದಿಲ? ಯಾಕೆ ತಡ? ಅಂತ ಕೇಳುತ್ತಿದ್ದ ಸ್ಪೀಕರ್ ಯುಟಿ ಖಾದರ್ (UT Khader), ಸಚಿವರ ಪರ ಬ್ಯಾಟಿಂಗ್ ಮಾಡಿದ್ದು ಆಶ್ಚರ್ಯ ಹುಟ್ಟಿಸಿತು. ಸಚಿವರು ಸದನದಲ್ಲಿ ಸಚಿವರು ಹಾಜರಿಲ್ಲದಾಗ ವಿಪಕ್ಷ ಸದಸ್ಯರು ಆಕ್ಷೇಪಣೆ ಎತ್ತೋದು ಸಹಜ. ಸ್ಪೀಕರ್ ಕೇವಲ ಒಂದರೆಡು ದಿನಗಳಮಟ್ಟಿಗೆ ಮಾತ್ರ ಸದನದಲ್ಲಿ ಹೆಡ್ ಮಾಸ್ಟರ್ ನಂತೆ ವರ್ತಿಸಿದರು ಅನಿಸುತ್ತೆ. ಸಚಿವರು ಮತ್ತು ಯಾವುದೇ ಪಕ್ಷದ ಶಾಸಕರು ಯೋಗ್ಯ, ಸೂಕ್ತ ಮತ್ತು ನ್ಯಾಯಬದ್ಧ ಕಾರಣವಿಲ್ಲದೆ ಗೈರಾದರೆ, ಅವರ ವಿರುದ್ಧ ಶಿಸ್ತು ಕ್ರಮ ಜರರುಗಿಸುವ ಪರಿಪಾಠ ಆರಂಭವಾಗಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ