IND vs SA Test: ಟೆಸ್ಟ್ ಆರಂಭಕ್ಕೆ ಇನ್ನೂ 10 ದಿನಗಳಿರುವಾಗ ದಿಢೀರ್ ದ. ಆಫ್ರಿಕಾಕ್ಕೆ ಹೊರಟ ವಿರಾಟ್ ಕೊಹ್ಲಿ

IND vs SA Test: ಟೆಸ್ಟ್ ಆರಂಭಕ್ಕೆ ಇನ್ನೂ 10 ದಿನಗಳಿರುವಾಗ ದಿಢೀರ್ ದ. ಆಫ್ರಿಕಾಕ್ಕೆ ಹೊರಟ ವಿರಾಟ್ ಕೊಹ್ಲಿ

Vinay Bhat
|

Updated on:Dec 15, 2023 | 11:33 AM

Virat Kohli, South Africa vs India: ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಕೊನೆಯ ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಕೊಹ್ಲಿ, ಒಂದು ತಿಂಗಳ ವಿಶ್ರಾಂತಿಯ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ಆಡಲು ಹರಿಣಗಳ ನಾಡಿಗೆ ಪ್ರಯಾಣ ಬೆಳೆಸಿದರು.

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಸದ್ಯ ಟಿ20 ಸರಣಿ ಮುಕ್ತಾಯಗೊಂಡಿದೆ. 1-1 ಅಂಕಗಳ ಅಂತರದಿಂದ ಸರಣಿ ಸಮಬಲಗೊಂಡಿತು. ಇದೀಗ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಗೆ ಸಜ್ಜಾಗಬೇಕಿದೆ. ಇದಾದ ಬಳಿಕ ಎರಡು ಟೆಸ್ಟ್ ಪಂದ್ಯ ನಡೆಯಲಿದೆ. ಟೆಸ್ಟ್ ಸರಣಿ ಆರಂಭಕ್ಕೆ ಇನ್ನೂ 10 ದಿನಗಳು ಬಾಕಿಯಿದೆ. ಹೀಗಿರುವಾಗ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ಕೊನೆಯ ಬಾರಿ ವಿಶ್ವಕಪ್ ಫೈನಲ್‌ನಲ್ಲಿ ಆಡಿದ ಕೊಹ್ಲಿ, ಒಂದು ತಿಂಗಳ ವಿಶ್ರಾಂತಿಯ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ಆಡಲು ಹರಿಣಗಳ ನಾಡಿಗೆ ಪ್ರಯಾಣ ಬೆಳೆಸಿದರು. ವೈಟ್-ಬಾಲ್ ಕ್ರಿಕೆಟ್‌ನಿಂದ (ODIs ಮತ್ತು T20Is) ವಿಶ್ರಾಂತಿ ಪಡೆಯಲು ನಿರ್ಧರಿಸಿದ ನಂತರ, ಕೊಹ್ಲಿ ಇದೀಗ ಏರ್ಪೋರ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 15, 2023 11:29 AM