Virat Kohli: ಗೂಗಲ್ ಸರ್ಚ್ನಲ್ಲೂ ವಿರಾಟ್ ಕೊಹ್ಲಿಯೇ ಕಿಂಗ್..!
Virat Kohli: ಗೂಗಲ್ ಸರ್ಚ್ ಇಂಜಿನ್ನ ಅತ್ಯಂತ ಜನಪ್ರಿಯ ಕ್ರಿಕೆಟ್ ತಾರೆಯಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ. ಇನ್ನು ಕ್ರೀಡಾಪಟುಗಳ ಪಟ್ಟಿಯಲ್ಲಿ ಗೂಗಲ್ ಹುಡುಕಾಟದಲ್ಲಿ ಮುಂದಿರುವುದು ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರು.
ಕ್ರಿಕೆಟ್ ಅಂಗಳದಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾ ನಾಗಾಲೋಟ ಮುಂದುವರೆಸಿರುವ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಹಿರಿಮೆಗೆ ಪಾತ್ರರಾಗಿದ್ದಾರೆ. ಅದು ಕೂಡ ಗೂಗಲ್ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರಿಕೆಟಿಗನಾಗಿ. ಅಂದರೆ 25 ವರ್ಷಗಳ ಗೂಗಲ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಕ್ರಿಕೆಟಿಗ ವಿರಾಟ್ ಕೊಹ್ಲಿ ಎಂದು ಗೂಗಲ್ ಘೋಷಿಸಿದೆ.
ಈ ಮೂಲಕ ಗೂಗಲ್ ಸರ್ಚ್ ಇಂಜಿನ್ನ ಅತ್ಯಂತ ಜನಪ್ರಿಯ ಕ್ರಿಕೆಟ್ ತಾರೆಯಾಗಿ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ. ಇನ್ನು ಕ್ರೀಡಾಪಟುಗಳ ಪಟ್ಟಿಯಲ್ಲಿ ಗೂಗಲ್ ಹುಡುಕಾಟದಲ್ಲಿ ಮುಂದಿರುವುದು ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರು.
ಪೋರ್ಚುಗಲ್ನ ಖ್ಯಾತ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಗೂಗಲ್ ಸರ್ಚ್ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಫುಟ್ಬಾಲ್ ಆಟಗಾರ. ಈ ಪಟ್ಟಿಯಲ್ಲಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು
ಹಾಗೆಯೇ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಕ್ರೀಡೆ ಫುಟ್ಬಾಲ್. ಕಾಲ್ಚೆಂಡಾಟದ ಕುರಿತಾಗಿ ವಿಶ್ವ ಕ್ರೀಡಾ ಪ್ರೇಮಿಗಳು ಅತೀ ಹೆಚ್ಚು ಬಾರಿ ಸರ್ಚ್ ಮಾಡಿದ್ದಾರೆ.
2023 ರಲ್ಲಿ ಭಾರತೀಯರು ಗೂಗಲ್ನಲ್ಲಿ ಹೆಚ್ಚು ಹುಡುಕಿದ್ದೇನು?
ಗೂಗಲ್ 2023 ರಲ್ಲಿ ಭಾರತೀಯರು ಹುಡುಕಿದ ವಿಷಯಗಳ ಪಟ್ಟಿಯನ್ನು ಕೂಡ ಪ್ರಕಟಿಸಿದೆ. ಕ್ರೀಡಾ ವಿಭಾಗದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಅತೀ ಹೆಚ್ಚು ಬಾರಿ ಸರ್ಚ್ ಮಾಡಿದ್ದಾರೆ. ಇನ್ನು ಕ್ರಿಕೆಟ್ ವರ್ಲ್ಡ್ ಕಪ್, ಏಷ್ಯಾಕಪ್ ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್ ನಂತರದ ಸ್ಥಾನಗಳಲ್ಲಿವೆ.
If the last 25 years have taught us anything, the next 25 will change everything. Here’s to the most searched moments of all time. #YearInSearch pic.twitter.com/MdrXC4ILtr
— Google (@Google) December 11, 2023
ಭಾರತೀಯರು ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಾಡಿದ ಕ್ರೀಡಾ ವಿಷಯಗಳು:
- ಇಂಡಿಯನ್ ಪ್ರೀಮಿಯರ್ ಲೀಗ್
- ಕ್ರಿಕೆಟ್ ವರ್ಲ್ಡ್ ಕಪ್
- ಏಷ್ಯಾ ಕಪ್
- ವುಮೆನ್ಸ್ ಪ್ರೀಮಿಯರ್ ಲೀಗ್
- ಏಷ್ಯನ್ ಗೇಮ್ಸ್
- ಇಂಡಿಯನ್ ಸೂಪರ್ ಲೀಗ್
- ಪಾಕಿಸ್ತಾನ ಸೂಪರ್ ಲೀಗ್
- ಆ್ಯಶಸ್
- ವುಮೆನ್ಸ್ ಕ್ರಿಕೆಟ್ ವಿಶ್ವಕಪ್
- SA20 (ಸೌತ್ ಆಫ್ರಿಕಾ 20)
Published On - 3:35 pm, Tue, 12 December 23