Stop-clock in Cricket: ಇಂದಿನಿಂದ ಹೊಸ ನಿಯಮ ಜಾರಿ: ಬೌಲರ್ಗಳ ಮೇಲೆ ಬಿಗ್ ಎಫೆಕ್ಟ್..!
England vs West Indies: ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಮೊದಲ ಬಾರಿಗೆ ಈ ನಿಯಮ ಜಾರಿಗೆ ಬರಲಿದ್ದು, ಮುಂದಿನ 6 ತಿಂಗಳ ಕಾಲ ವಿವಿಧ ಟಿ20 ಸರಣಿಗಳಲ್ಲಿ ಈ ನಿಯಮವನ್ನು ಜಾರಿಯಾಗೊಳಿಸಲಾಗುತ್ತದೆ. ಈ ಮೂಲಕ ಹೊಸ ನಿಯಮದ ಪ್ರತಿಕೂಲ ಪರಿಣಾಮವನ್ನು ಅಳೆಯಲಾಗುತ್ತದೆ.
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮದ ಪ್ರಯೋಗ ಇಂದಿನಿಂದ (ಡಿಸೆಂಬರ್ 12) ಪ್ರಾರಂಭವಾಗಲಿದೆ. ಈ ನಿಯಮದ ಜಾರಿಯೊಂದಿಗೆ, ಫೀಲ್ಡಿಂಗ್ ತಂಡವು ಓವರ್‌ನ ಅಂತ್ಯದ ನಂತರ ಹೆಚ್ಚು ಸಮಯವನ್ನು ವ್ಯರ್ಥ ಮಾಡಲು ಸಾಧ್ಯವಿಲ್ಲ. ಸದ್ಯ ಈ ನಿಯಮವನ್ನು ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಮಾತ್ರ ಪರಿಚಯಿಸಲಾಗುತ್ತಿದೆ.
ಇಂದಿನಿಂದ ಆರಂಭವಾಗಲಿರುವ ಇಂಗ್ಲೆಂಡ್ vs ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಮೊದಲ ಬಾರಿಗೆ ಈ ನಿಯಮ ಜಾರಿಗೆ ಬರಲಿದ್ದು, ಮುಂದಿನ 6 ತಿಂಗಳ ಕಾಲ ವಿವಿಧ ಟಿ20 ಸರಣಿಗಳಲ್ಲಿ ಈ ನಿಯಮವನ್ನು ಜಾರಿಯಾಗೊಳಿಸಲಾಗುತ್ತದೆ. ಈ ಮೂಲಕ ಹೊಸ ನಿಯಮದ ಪ್ರತಿಕೂಲ ಪರಿಣಾಮವನ್ನು ಅಳೆಯಲಾಗುತ್ತದೆ. ಇದಾದ ಬಳಿಕ ಐಸಿಸಿ ಹೊಸ ನಿಯಮವನ್ನು ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಕಡ್ಡಾಯಗೊಳಿಸಲಿದೆ.
ಸ್ಟಾಪ್ ಕ್ಲಾಕ್ ನಿಯಮ ಎಂದರೇನು?
ಈ ನಿಯಮದ ಪ್ರಕಾರ, ಬೌಲಿಂಗ್ ತಂಡವು ಒಂದು ಓವರ್‌ನ ಅಂತ್ಯದ 60 ಸೆಕೆಂಡ್‌ಗಳ ಒಳಗೆ ಎರಡನೇ ಓವರ್ ಅನ್ನು ಬೌಲ್ ಮಾಡಲು ಸಿದ್ಧರಾಗಿರಬೇಕು. ಅಂದರೆ ಒಂದು ಓವರ್ ಮುಗಿದ ತಕ್ಷಣ ಥರ್ಡ್ ಅಂಪೈರ್ ಸಮಯ ಗಡುವು ನೀಡುತ್ತಾರೆ.
ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ 60 ಸೆಕೆಂಡ್‌ಗಳ ಕೌಂಟಿಂಗ್ ಕಾಣಿಸಲಿದೆ. ಬೌಲಿಂಗ್ ತಂಡವು 60 ಸೆಕೆಂಡುಗಳ ಒಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕು. ಒಂದು ವೇಳೆ 60 ಸೆಕೆಂಡ್‌ಗಳ ಒಳಗಾಗಿ ಓವರ್ ಪ್ರಾರಂಭವಾಗದಿದ್ದರೆ 2 ಬಾರಿ ವಿನಾಯಿತಿ ನೀಡಲಾಗುತ್ತದೆ. ಮೂರನೇ ಬಾರಿಗೆ ಪುನರಾವರ್ತನೆಯಾದರೆ, ಬೌಲಿಂಗ್ ತಂಡಕ್ಕೆ 5 ರನ್ ದಂಡ ವಿಧಿಸಲಾಗುತ್ತದೆ. ಅಂದರೆ ಬ್ಯಾಟಿಂಗ್ ತಂಡಕ್ಕೆ 5 ಹೆಚ್ಚುವರಿ ರನ್ ಸಿಗಲಿದೆ.
ಇದೇ ವೇಳೆ ಬ್ಯಾಟಿಂಗ್ ತಂಡವು ವಿನಾಕಾರಣ ಸಮಯವನ್ನು ವ್ಯರ್ಥ ಮಾಡಿದರೆ, ಅವರ ಬೌಲಿಂಗ್ ಸಮಯದಿಂದ ಆ ವ್ಯರ್ಥ ಮಾಡಿದ ಸಮಯವನ್ನು ಕಳೆಯಲಾಗುತ್ತದೆ. ಈ ಮೂಲಕ ಆಟದ ವೇಗವನ್ನು ಹೆಚ್ಚಿಸಲು ಸ್ಟಾಪ್ ಕ್ಲಾಕ್ ನಿಯಮವನ್ನು ಪರಿಚಯಲಿಸಲು ಐಸಿಸಿ ಮುಂದಾಗಿದೆ.
ಬೌಲರ್ಗಳ ಮೇಲೆ ಬಿಗ್ ಎಫೆಕ್ಟ್:
ಈ ಹೊಸ ನಿಯಮದಿಂದಾಗಿ ಬೌಲರ್ಗಳು ಓವರ್ಗಳ ಬಳಿಕ ಬೇಗನೆ ಮತ್ತೊಂದು ಓವರ್ ಎಸೆಯಲು ಸಜ್ಜಾಗಿರಬೇಕಾಗುತ್ತದೆ. ಇದು ಮುಖ್ಯವಾಗಿ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ ಮಾಡುವ ವೇಗದ ಬೌಲರ್ಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು
ಸದ್ಯ ಈ ನಿಯಮವನ್ನು 6 ತಿಂಗಳ ಕಾಲ ಪ್ರಯೋಗಾತ್ಮಕವಾಗಿ ಬಳಸಲಾಗುತ್ತಿದ್ದು, ಆ ನಂತರ ಈ ನಿಯಮದ ಸಾಧಕ-ಬಾಧಕಗಳ ಸಂಪೂರ್ಣ ವಿಶ್ಲೇಷಿಸಲಾಗುತ್ತದೆ. ಇದರ ನಂತರವಷ್ಟೇ ಏಕದಿನ-ಟಿ20 ಕ್ರಿಕೆಟ್‌ನಲ್ಲಿ ಈ ನಿಯಮವನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಐಸಿಸಿ ತಿಳಿಸಿದೆ.