IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು

IPL 2024 Auction: ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ವೇಳೆ 333 ಆಟಗಾರರ ಹೆಸರುಗಳನ್ನು ಬಿಡ್ಡಿಂಗ್​ಗಾಗಿ ಕೂಗಲಾಗುತ್ತದೆ. ಇದರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಐಪಿಎಲ್ 2024 ರಲ್ಲಿ ಅವಕಾಶ ದೊರೆಯಲಿದೆ.

IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು
IPL 2024
Follow us
| Updated By: ಝಾಹಿರ್ ಯೂಸುಫ್

Updated on:Dec 12, 2023 | 3:07 PM

ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024)  17ನೇ ಆವೃತ್ತಿಯ ಹರಾಜಿಗಾಗಿ ಫೈನಲ್ ಪಟ್ಟಿ ಸಿದ್ಧವಾಗಿದೆ. ಈ ಬಾರಿಯ ಐಪಿಎಲ್​ ಆಕ್ಷನ್​ಗಾಗಿ ಹೆಸರು ನೋಂದಾಯಿಸಿಕೊಂಡಿದ್ದ 1166 ಆಟಗಾರರಲ್ಲಿ ಕೇವಲ 333 ಪ್ಲೇಯರ್ಸ್​​​ಗೆ ಮಾತ್ರ ಹರಾಜಿನಲ್ಲಿ ಅವಕಾಶ ನೀಡಲಾಗಿದೆ. ಇವರಲ್ಲಿ 214 ಭಾರತೀಯ ಆಟಗಾರಿದ್ದರೆ, 121 ವಿದೇಶಿ ಆಟಗಾರರಿದ್ದಾರೆ. ವಿಶೇಷ ಎಂದರೆ ಈ 333 ಆಟಗಾರರಲ್ಲಿ ಕೇವಲ 23 ಆಟಗಾರರು ಮಾತ್ರ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಅಂದರೆ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿರುವುದು ಕೇವಲ 23 ಆಟಗಾರರು ಮಾತ್ರ. ಇವರಲ್ಲಿ 20 ವಿದೇಶಿ ಆಟಗಾರರು ಎಂಬುದು ವಿಶೇಷ. ಅಂದರೆ ಮೂವರು ಭಾರತೀಯ ಆಟಗಾರರು ಮಾತ್ರ 2 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಆಟಗಾರರು ಯಾರೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

2 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿ:

  1. ಹ್ಯಾರಿ ಬ್ರೂಕ್ – ಇಂಗ್ಲೆಂಡ್
  2. ಟ್ರಾವಿಸ್ ಹೆಡ್ – ಆಸ್ಟ್ರೇಲಿಯಾ
  3. ರಿಲೀ ರೊಸೊವ್ – ಸೌತ್ ಆಫ್ರಿಕಾ
  4. ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ
  5. ಜೆರಾಲ್ಡ್ ಕೋಟ್ಝಿ – ದಕ್ಷಿಣ ಆಫ್ರಿಕಾ
  6. ಪ್ಯಾಟ್ ಕಮ್ಮಿನ್ಸ್ – ಆಸ್ಟ್ರೇಲಿಯಾ
  7. ಕ್ರಿಸ್ ವೋಕ್ಸ್ – ಇಂಗ್ಲೆಂಡ್
  8. ಜೋಶ್ ಇಂಗ್ಲಿಸ್ – ಆಸ್ಟ್ರೇಲಿಯಾ
  9. ಲಾಕಿ ಫರ್ಗುಸನ್ – ನ್ಯೂಜಿಲೆಂಡ್
  10. ಜೋಶ್ ಹ್ಯಾಝಲ್‌ವುಡ್ – ಆಸ್ಟ್ರೇಲಿಯಾ
  11. ಮಿಚೆಲ್ ಸ್ಟಾರ್ಕ್ – ಆಸ್ಟ್ರೇಲಿಯಾ
  12. ಮುಜೀಬ್ ಉರ್ ರೆಹಮಾನ್ – ಅಫ್ಘಾನಿಸ್ತಾನ್
  13. ಜೇಮೀ ಓವರ್ಟನ್ – ಇಂಗ್ಲೆಂಡ್
  14. ಡೇವಿಡ್ ವಿಲ್ಲಿ – ಇಂಗ್ಲೆಂಡ್
  15. ಬೆನ್ ಡಕೆಟ್ – ಇಂಗ್ಲೆಂಡ್
  16. ಮುಸ್ತಾಫಿಜುರ್ ರೆಹಮಾನ್ – ಬಾಂಗ್ಲಾದೇಶ್
  17. ಆದಿಲ್ ರಶೀದ್ – ಇಂಗ್ಲೆಂಡ್
  18. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ – ಸೌತ್ ಆಫ್ರಿಕಾ
  19. ಜೇಮ್ಸ್ ವಿನ್ಸ್ – ಇಂಗ್ಲೆಂಡ್
  20. ಸೀನ್ ಅಬಾಟ್ – ಆಸ್ಟ್ರೇಲಿಯಾ
  21. ಹರ್ಷಲ್ ಪಟೇಲ್ – ಭಾರತ
  22. ಶಾರ್ದೂಲ್ ಠಾಕೂರ್ – ಭಾರತ
  23. ಉಮೇಶ್ ಯಾದವ್ – ಭಾರತ

ಇದನ್ನೂ ಓದಿ: IPL 2024: ಐಪಿಎಲ್ ಹರಾಜಿಗೂ ಮುನ್ನವೇ ಹೊರಬಿದ್ದ ಕೇದಾರ್ ಜಾಧವ್

ಐಪಿಎಲ್ ಸೀಸನ್ 17 ಹರಾಜು ಯಾವಾಗ?

ಈ ಬಾರಿಯ ಐಪಿಎಲ್​ನಲ್ಲಿ ಮಿನಿ ಹರಾಜು ನಡೆಯಲಿದೆ. ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ವೇಳೆ 333 ಆಟಗಾರರ ಹೆಸರುಗಳನ್ನು ಬಿಡ್ಡಿಂಗ್​ಗಾಗಿ ಕೂಗಲಾಗುತ್ತದೆ. ಇದರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಐಪಿಎಲ್ 2024 ರಲ್ಲಿ ಅವಕಾಶ ದೊರೆಯಲಿದೆ.

Published On - 3:06 pm, Tue, 12 December 23

ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ