U19 Asia Cup, 2023: ರಾಜ್ ಲಿಂಬಾನಿ ಮಿಂಚಿನ ಬೌಲಿಂಗ್: ಎರಡಂಕಿ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್
India U19 vs Nepal U19: ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರಾಜ್ ಲಿಂಬಾನಿ 9.1 ಓವರ್ಗಳಲ್ಲಿ 13 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಲಿಂಬಾನಿಗೆ ಉತ್ತಮ ಸಾಥ್ ನೀಡಿದ ಆರಾಧ್ಯ ಶುಕ್ಲ 2 ವಿಕೆಟ್ ಪಡೆದರೆ, ಅರ್ಶಿನ್ ಕುಲ್ಕರ್ಣಿ ಒಂದು ವಿಕೆಟ್ ಕಬಳಿಸಿದರು.
ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾಕಪ್ (U19 Asia Cup, 2023) ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಟೀಮ್ ಇಂಡಿಯಾ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು ರಾಜ್ ಲಿಂಬಾನಿ ಮಾರಕ ದಾಳಿಗೆ ತತ್ತರಿಸಿತು. ಐದನೇ ಓವರ್ನಲ್ಲಿ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಲಿಂಬಾನಿ, ಆ ಬಳಿಕ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದು ಗಮನ ಸೆಳೆದರು.
ಕರಾರುವಾಕ್ ದಾಳಿಯೊಂದಿಗೆ ಮಿಂಚಿದ ರಾಜ್ ಲಿಂಬಾನಿ ನೇಪಾಳ ತಂಡದ ಯಾವುದೇ ಬ್ಯಾಟ್ಸ್ಮನ್ ಅನ್ನು ಎರಡಂಕಿ ಗಳಿಸಲು ಬಿಡಲಿಲ್ಲ ಎಂಬುದು ವಿಶೇಷ. ಪರಿಣಾಮ ನೇಪಾಳ ತಂಡವು 22.1 ಓವರ್ಗಳಲ್ಲಿ 52 ರನ್ಗಳಿಸಿ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ರಾಜ್ ಲಿಂಬಾನಿ 9.1 ಓವರ್ಗಳಲ್ಲಿ 13 ರನ್ ನೀಡಿ 7 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಲಿಂಬಾನಿಗೆ ಉತ್ತಮ ಸಾಥ್ ನೀಡಿದ ಆರಾಧ್ಯ ಶುಕ್ಲ 2 ವಿಕೆಟ್ ಪಡೆದರೆ, ಅರ್ಶಿನ್ ಕುಲ್ಕರ್ಣಿ ಒಂದು ವಿಕೆಟ್ ಕಬಳಿಸಿದರು.
ಕೇವಲ 57 ರನ್ಗಳ ಸುಲಭ ಗುರಿ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾದ ಅರ್ಶಿನ್ ಕುಲ್ಕರ್ಣಿ (40) ಹಾಗೂ ಆದರ್ಶ್ ಸಿಂಗ್ (13) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ 7.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57 ರನ್ಗಳಿಸಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು.
ಭಾರತ ಅಂಡರ್ 19 ಪ್ಲೇಯಿಂಗ್ ಇಲೆವೆನ್: ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ಉದಯ್ ಸಹರಾನ್ (ನಾಯಕ), ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಎ ಅವಿನಾಶ್ (ವಿಕೆಟ್ ಕೀಪರ್), ರಾಜ್ ಲಿಂಬಾನಿ, ಆರಾಧ್ಯ ಶುಕ್ಲಾ, ಮುರುಗನ್ ಅಭಿಷೇಕ್, ಸೌಮಿ ಪಾಂಡೆ.
ಇದನ್ನೂ ಓದಿ: IPL 2024 Auction: 2 ಕೋಟಿ ರೂ. ಮೂಲ ಬೆಲೆಯಲ್ಲಿ ಕೇವಲ ಮೂವರು ಭಾರತೀಯರು
ನೇಪಾಳ ಅಂಡರ್ 19 ಪ್ಲೇಯಿಂಗ್ ಇಲೆವೆನ್: ದೇವ್ ಖಾನಲ್ (ನಾಯಕ), ಅರ್ಜುನ್ ಕುಮಾಲ್, ದೀಪಕ್ ಪ್ರಸಾದ್ ದುಮ್ರೆ, ಹೇಮಂತ್ ಧಾಮಿ, ಉತ್ತಮ್ ರಂಗು ಥಾಪಾ ಮಗರ್ (ವಿಕೆಟ್ ಕೀಪರ್) , ದೀಪೇಶ್ ಕಾಂಡೇಲ್, ಆಕಾಶ್ ಚಂದ್, ಸುಭಾಷ್ ಭಂಡಾರಿ, ದೀಪಕ್ ಬೋಹರಾ, ಗುಲ್ಸನ್ ಝಾ, ದೀಪಕ್ ಬೋಹರಾ.