AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ ಹರಾಜಿಗಾಗಿ ಫೈನಲ್ ಪಟ್ಟಿ ಪ್ರಕಟ

IPL 2024 Auction: ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2.30 ರಿಂದ ಹರಾಜು ಪ್ರಕ್ರಿಯೆ ಶುರುವಾಗಲಿದ್ದು, ಈ ಮೂಲಕ 333 ಆಟಗಾರರ ಐಪಿಎಲ್ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

IPL 2024: ಐಪಿಎಲ್​ ಹರಾಜಿಗಾಗಿ ಫೈನಲ್ ಪಟ್ಟಿ ಪ್ರಕಟ
IPL 2024 Auction
TV9 Web
| Edited By: |

Updated on:Dec 18, 2023 | 12:19 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಹರಾಜಿಗಾಗಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಾರಿಯ ಹರಾಜಿನಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇದಕ್ಕೂ ಮುನ್ನ ಐಪಿಎಲ್​ಗೆ ಆಕ್ಷನ್​ಗೆ ಒಟ್ಟು 1166 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರು. ಈ ಆಟಗಾರರ ಪಟ್ಟಿಯನ್ನು ಶಾರ್ಟ್ ಲೀಸ್ಟ್ ಮಾಡಲಾಗಿದ್ದು, ಅದರಂತೆ ಕೇವಲ 333 ಆಟಗಾರರಿಗೆ ಐಪಿಎಲ್​ ಹರಾಜಿನಲ್ಲಿ ಅವಕಾಶ ನೀಡಲಾಗಿದೆ.

333 ಆಟಗಾರರಲ್ಲಿ 214 ಭಾರತೀಯರು ಮತ್ತು 119 ವಿದೇಶಿ ಆಟಗಾರರಿದ್ದಾರೆ. ಹಾಗೆಯೇ ಅಸೋಷಿಯೇಟ್ ದೇಶದ ಇಬ್ಬರು ಆಟಗಾರರಿಗೂ ಅವಕಾಶ ನೀಡಲಾಗಿದೆ. ಇನ್ನು ಒಟ್ಟು ಆಟಗಾರರ ಪಟ್ಟಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ 116 ಆಟಗಾರರು, ರಾಷ್ಟ್ರೀಯ ತಂಡಗಳ ಪರ ಆಡದ 215 ಆಟಗಾರರಿದ್ದಾರೆ.

ಕೇವಲ 77 ಸ್ಥಾನಗಳಿಗೆ ಅವಕಾಶ:

ಈ ಬಾರಿಯ ಹರಾಜಿಗೂ ಮುನ್ನ 10 ತಂಡಗಳು ಒಟ್ಟು 77 ಆಟಗಾರರನ್ನು ಬಿಡುಗಡೆ ಮಾಡಿದೆ. ಅದರಂತೆ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 333 ಆಟಗಾರರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಇನ್ನು ಈ ಬಾರಿಯ ಹರಾಜಿನಲ್ಲಿ 2 ಕೋಟಿ ಮೂಲಬೆಲೆಯ 23 ಆಟಗಾರರಿದ್ದು, 1.5 ಕೋಟಿ ಮೂಲ ಬೆಲೆಯೊಂದಿಗೆ 13 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ.

ಹರಾಜು ಪ್ರಕ್ರಿಯೆ ಯಾವಾಗ?

ಐಪಿಎಲ್ ಸೀಸನ್ 17 ಹರಾಜು ಪ್ರಕ್ರಿಯೆ ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2.30 ರಿಂದ ಹರಾಜು ಪ್ರಕ್ರಿಯೆ ಶುರುವಾಗಲಿದ್ದು, ಈ ಮೂಲಕ 333 ಆಟಗಾರರ ಐಪಿಎಲ್ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

10 ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಹೀಗಿದೆ:

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಥೀಶ ಪತಿರಾಣ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ​: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಝ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್, ವೈಭವ್ ಅರೋರಾ, ಸುಯಶ್ ಶರ್ಮಾ, ಕುಲ್ವಂತ್ ಖೆಜ್ರೋಲಿಯಾ, ಮನ್‌ದೀಪ್ ಸಿಂಗ್, ಜೇಸನ್ ರಾಯ್.

ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಕುನಾಲ್ ಸಿಂಗ್ ರಾಥೋಡ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಜೋಸ್ ಬಟ್ಲರ್, ಡೊನೊವನ್ ಫೆರೇರಾ, ಧ್ರುವ್ ಜುರೆಲ್, ಟ್ರೆಂಟ್ ಬೌಲ್ಟ್, ಯುಜ್ವೇಂದ್ರ ಚಹಲ್, ನವದೀಪ್ ಸೈನಿ, ಕುಲದೀಪ್ ಸೇನ್, ಆ್ಯಡಮ್ ಝಂಪಾ, ಸಂದೀಪ್ ಶರ್ಮಾ, ಅವೇಶ್ ಖಾನ್. ಡೆಲ್ಲಿ ಕ್ಯಾಪಿಟಲ್ಸ್ ತಂಡ: ಡೇವಿಡ್ ವಾರ್ನರ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಕುಲ್ದೀಪ್ ಯಾದವ್, ಲುಂಗಿ ಎನ್ಗಿಡಿ, ಅಕ್ಷರ್ ಪಟೇಲ್, ಮಿಚೆಲ್ ಮಾರ್ಷ್, ಅಭಿಷೇಕ್ ಪೊರೆಲ್, ಇಶಾಂತ್ ಶರ್ಮಾ, ರಿಷಬ್ ಪಂತ್, ಲಲಿತ್ ಯಾದವ್, ಮುಖೇಶ್ ಕುಮಾರ್, ಯಶ್ ಧುಲ್.

ಸನ್​ರೈಸರ್ಸ್​ ಹೈದರಾಬಾದ್ ತಂಡ: ಐಡೆನ್ ಮಾರ್ಕ್ರಾಮ್, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ, ಸಂವಿರ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್, ಅಬ್ದುಲ್ ಸಮದ್, ಅನ್ಮೋಲ್‌ಪ್ರೀತ್ ಸಿಂಗ್, ಗ್ಲೆನ್ ಫಿಲಿಪ್ಸ್, ಫಝಲ್‌ಹಕ್ ಫಾರೂಕಿ, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್, ಹೆನ್ರಿಕ್ ಕ್ಲಾಸೆನ್, ಉಪೇಂದ್ರ ಸಿಂಗ್ ಯಾದವ್.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ರಿಷಭ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್, ವಿಕ್ಕಿ ಓಸ್ತ್ವಾಲ್, ಪೃಥ್ವಿ ಶಾ, ಅನ್ರಿಕ್ ನೋಕಿಯಾ, ಅಭಿಷೇಕ್ ಪೊರೆಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ಲಲಿತ್ ಯಾದವ್, ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್, ಇಶಾಂತ್ ಶರ್ಮಾ, ಇಶಾಂತ್ ಶರ್ಮಾ , ಮುಕೇಶ್ ಕುಮಾರ್.

ಪಂಜಾಬ್ ಕಿಂಗ್ಸ್ ತಂಡ: ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಪ್ರಭ್​ಸಿಮ್ರಾನ್ ಸಿಂಗ್, ಹರ್‌ಪ್ರೀತ್ ಭಾಟಿಯಾ, ಜಿತೇಶ್ ಶರ್ಮಾ, ಶಿವಂ ಸಿಂಗ್, ಅಥರ್ವ ಟೈಡೆ, ಸಿಕಂದರ್ ರಾಝ, ರಿಷಿ ಧವನ್, ಹರ್‌ಪ್ರೀತ್ ಬ್ರಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕಗಿಸೊ ರಬಾಡ, ರಾಹುಲ್ ಚಾಹರ್, ನಾಥನ್ ಎಲ್ಲಿಸ್, ವಿದ್ವತ್ ಕಾವೇರಪ್ಪ.

ಲಕ್ನೋ ಸೂಪರ್​ ಜೈಂಟ್ಸ್ ತಂಡ: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ದೀಪಕ್ ಹೂಡಾ, ಕೆ ಗೌತಮ್, ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ಪ್ರೇರಕ್ ಮಂಕಡ್, ಯುಧ್ವೀರ್ ಸಿಂಗ್, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯಿ, ಯಶ್ ಥಾಕಿ , ಅಮಿತ್ ಮಿಶ್ರಾ, ನವೀನ್-ಉಲ್-ಹಕ್.

ಗುಜರಾತ್ ಟೈಟಾನ್ಸ್ ತಂಡ: ಡೇವಿಡ್ ಮಿಲ್ಲರ್, ಶುಭ್​ಮನ್ ಗಿಲ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಆರ್ ಸಾಯಿ ಕಿಶೋರ್, ರಶೀದ್ ಖಾನ್, ಜೋಶ್ ಲಿಟಲ್, ಮೋಹಿತ್ ಶರ್ಮಾ.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಕ್ಯಾಮರೂನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್‌ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್, ಹಾರ್ದಿಕ್ ಪಾಂಡ್ಯ.

ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಕ್ಯಾಮರೋನ್ ಗ್ರೀನ್.

Published On - 2:19 pm, Tue, 12 December 23