IND vs SA: ಇಂದಿನ ಟಿ20 ಪಂದ್ಯಕ್ಕೂ ಮಳೆಯ ಭೀತಿ; ಇಲ್ಲಿದೆ ಹವಾಮಾನ ವರದಿ
ಒಂದೊಮ್ಮೆ ಮಳೆಯ ತೀವ್ರತೆ ಹೆಚ್ಚಿದ್ದರೆ ಎರಡನೇ ಪಂದ್ಯವೂ ರದ್ದಾಗಲಿದೆ. ಕೊನೆಯ ಪಂದ್ಯ ಗುರುವಾರ (ಡಿಸೆಂಬರ್ 14) ಜೊಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಆ ಬಳಿಕ ಡಿಸೆಂಬರ್ 17ರಿಂದ ಏಕದಿನ ಸರಣಿ ಆರಂಭ ಆಗಲಿದೆ.
ಸೌತ್ ಆಫ್ರಿಕಾ Vs ಭಾರತ ನಡುವಿನ ಎರಡನೇ ಟಿ 20 ಪಂದ್ಯ ಇಂದು (ಡಿಸೆಂಬರ್ 12) ದಕ್ಷಿಣ ಆಫ್ರಿಕಾದ (South Africa) ಗೆಬರ್ಹದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಮ್ಯಾಚ್ ಮಳೆಗೆ ಆಹುತಿಯಾಗಿದೆ. ಸರಣಿ ಗೆಲ್ಲಲು ಎರಡು ಹಾಗೂ ಮೂರನೇ ಪಂದ್ಯ ಗೆಲ್ಲಲೇಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾಗೆ ಇದೆ. ಹವಾಮಾನ ವರದಿಗಳ ಪ್ರಕಾರ ಈ ಪಂದ್ಯವೂ ಮಳೆಗೆ ಆಹುತಿ ಆಗಲಿದೆ. ಈ ವಿಚಾರ ಕೇಳಿ ಕ್ರಿಕೆಟ್ ಪ್ರಿಯರು ಬೇಸರ ಮಾಡಿಕೊಂಡಿದ್ದಾರೆ.
ಸೋಮವಾರ (ಡಿಸೆಂಬರ್ 11) ಗೆಬರ್ಹದಲ್ಲಿ ಮಳೆ ಆಗಿದೆ. ಇಂದು ಕೂಡ ಈ ಭಾಗದಲ್ಲಿ ತೀವ್ರ ಮಳೆ ಆಗುವ ಸಾಧ್ಯತೆ ಇದೆ. ಹಗಲಿನಲ್ಲಿ ಮಳೆ ಆಗುವ ಸಾಧ್ಯತೆ ಶೇ.84 ಇದ್ದು, ರಾತ್ರಿ ವೇಳೆ ಮಳೆ ಆಗುವ ಸಾಧ್ಯತೆ ಶೇ.6 ಇದೆ. ಈ ಭಾಗದಲ್ಲಿ ಈಗಾಗಲೇ ಮೋಡ ಕವಿದ ವಾತಾವರಣ ಇದೆ. ಒಂದೊಮ್ಮೆ ಮಳೆಯ ತೀವ್ರತೆ ಹೆಚ್ಚಿದ್ದರೆ ಎರಡನೇ ಪಂದ್ಯವೂ ರದ್ದಾಗಲಿದೆ. ಕೊನೆಯ ಪಂದ್ಯ ಗುರುವಾರ (ಡಿಸೆಂಬರ್ 14) ಜೊಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಆ ಬಳಿಕ ಡಿಸೆಂಬರ್ 17ರಿಂದ ಏಕದಿನ ಸರಣಿ ಆರಂಭ ಆಗಲಿದೆ.
ಇನ್ನು ತಂಡದ ಆಯ್ಕೆಯು ಕೋಚ್ ರಾಹುಲ್ ದ್ರಾವಿಡ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಟೀಂ ಇಂಡಿಯಾದಲ್ಲಿ ಯುವ ಆಟಗಾರರ ದಂಡೇ ಇದೆ. ಎಲ್ಲರೂ ಹೊಡಿಬಡಿ ಆಟಗಾರರೇ. ಹೀಗಾಗಿ ಯಾರಿಗೆ ಅವಕಾಶ ನೀಡಬೇಕು ಎನ್ನುವ ಬಗ್ಗೆ ರಾಹುಲ್ ದ್ರಾವಿಡ್ ನಿರ್ಧಾರ ಮಾಡಬೇಕಿದೆ. ಓಪನರ್ ಸ್ಥಾನಕ್ಕೆ ಇಶಾನ್ ಕಿಶನ್, ಶುಭ್ಮನ್ ಗಿಲ್, ರುತುರಾಜ್ ಗಾಯಕ್ವಾಡ್ ಹಾಗೂ ಯಶಸ್ವಿ ಜೈಸ್ವಾಲ್ ಇದ್ದಾರೆ. 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಪಂದ್ಯಗಳು ತುಂಬಾನೇ ಮುಖ್ಯ ಎನಿಸಿಕೊಂಡಿದೆ.
ಇದನ್ನೂ ಓದಿ: IND vs SA: ಬಲಿಷ್ಠ ಭಾರತ: ಟೀಮ್ ಇಂಡಿಯಾ ಪರ ಕಣಕ್ಕಿಳಿಯುವವರು ಯಾರು?
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ಶ್ರೇಯಸ್ ಅಯ್ಯರ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ದೀಪಕ್ ಚಹರ್, ರವೀಂದ್ರ ಜಡೇಜಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್ , ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಕುಲ್ದೀಪ್ ಯಾದವ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:27 am, Tue, 12 December 23