ಚಾಲಕ ಸ್ಟೇರಿಂಗ್ ತಿರುಗಿಸುತ್ತಿದ್ದರೂ ಚಕ್ರಗಳು ತಿರುಗಲೇ ಇಲ್ಲ! ಗದಗ ಸಾರಿಗೆ ಇಲಾಖೆಯಲ್ಲಿ ಮತ್ತೊಂದು ಅಧ್ವಾನ
ಮೊನ್ನೆಯಷ್ಟೇ ಡಿಸೆಂಬರ್ 13 ರಂದು ಟಿವಿ9 ಗದಗ ಸಾರಿಗೆ ಇಲಾಖೆ ಅಧ್ವಾನಗಳನ್ನು ಬಯಲು ಮಾಡಿತ್ತು. ಟಿವಿ9 ರಹಸ್ಯ ಕಾರ್ಯಾಚರಣೆ ಹಾಗೂ ರಿಯಾಲಿಟಿ ಚೆಕ್ ನಲ್ಲಿ ಡೇಂಜರಸ್ ಡಕೋಟಾ ಬಸ್ ಗಳ ಅಸಲಿಯತ್ತು ಬಯಲಾಗಿತ್ತು.
ಗದಗ ಸಾರಿಗೆ ಇಲಾಖೆಯಲ್ಲಿ (Gadag transport department) ಅಧ್ವಾನ ಸರಮಾಲೆ ಮುಂದುವರಿದಿದೆ. ಮತ್ತೊಂದು ಅಧ್ವಾನದ ವಿಡಿಯೋ ಬೆಳಕಿಗೆ ಬಂದಿದೆ. ಚಾಲಕ (Driver) ಸ್ಟೇರಿಂಗ್ (Steering) ತಿರುಗಿಸಿದ್ರೂ ಬಸ್ಸಿನ ಚಕ್ರಗಳು (Wheels) ತಿರುಗಿಲ್ಲ. ಸರ್ಕಾರಿ ಬಸ್ ದುಃಸ್ಥಿತಿಯನ್ನು ನೋಡಿ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಡಕೋಟಾ ಬಸ್ ಸ್ಥಿತಿ ಅರಿತ ಪ್ರಯಾಣಿಕರು ಶಪಿಸುತ್ತಾ, ಅರ್ಧದಲ್ಲೇ ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಗುರುವಾರ ರಾತ್ರಿ ಗದಗ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದು ಗದಗ-ಮುಂಡರಗಿ ನಾನ್ ಸ್ಟಾಪ್ ಬಸ್ನ ದುಸ್ಥಿತಿಯಾಗಿದೆ.
ಮೊನ್ನೆಯಷ್ಟೇ ಡಿಸೆಂಬರ್ 13 ರಂದು ಟಿವಿ9 ಗದಗ ಸಾರಿಗೆ ಇಲಾಖೆ ಅಧ್ವಾನಗಳನ್ನು ಬಯಲು ಮಾಡಿತ್ತು. ಟಿವಿ9 ರಹಸ್ಯ ಕಾರ್ಯಾಚರಣೆ ಹಾಗೂ ರಿಯಾಲಿಟಿ ಚೆಕ್ ನಲ್ಲಿ ಡೇಂಜರಸ್ ಡಕೋಟಾ ಬಸ್ ಗಳ ಅಸಲಿಯತ್ತು ಬಯಲಾಗಿತ್ತು.
ಇದನ್ನೂ ಓದಿ: ಟಿವಿ9 ಕಾರ್ಯಾಚರಣೆಯಲ್ಲಿ ಗದಗ ಡಿಪೋದಲ್ಲಿರುವ ಡಕೋಟಾ ಬಸ್ಗಳ ಅಸಲಿಯತ್ತು ಹೀಗಿದೆ ನೋಡಿ
ಈಗ ಗದಗ ಸಾರಿಗೆ ಇಲಾಖೆ ಮತ್ತೊಂದು ಅಧ್ವಾನದ ಎಕ್ಸಕ್ಲ್ಯೂಸಿವ್ ವಿಡಿಯೋ ಟಿವಿ9 ನಲ್ಲಿ ಬಿತ್ತರವಾಗಿದೆ. ಶೋಚನೀಯವೆಂದರೆ ಗದಗ ಸಾರಿಗೆ ಇಲಾಖೆಯ ಮಾನ ಹರಾಜು ಆದ್ರೂ ಸ್ಥಳೀಯ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಇದೇ ವೇಳೆ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಸಹ ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ, ಜಿಲ್ಲಾಡಳಿತ ನಿರ್ಲಕ್ಷ್ಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ