ಟಿವಿ9 ಕಾರ್ಯಾಚರಣೆಯಲ್ಲಿ ಗದಗ ಡಿಪೋದಲ್ಲಿರುವ ಡಕೋಟಾ ಬಸ್​​ಗಳ ಅಸಲಿಯತ್ತು ಹೀಗಿದೆ ನೋಡಿ

ಟಿವಿ9 ಕಾರ್ಯಾಚರಣೆಯಲ್ಲಿ ಗದಗ ಡಿಪೋದಲ್ಲಿರುವ ಡಕೋಟಾ ಬಸ್​​ಗಳ ಅಸಲಿಯತ್ತು ಹೀಗಿದೆ ನೋಡಿ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on:Dec 13, 2023 | 12:41 PM

Gadag bus depot : ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಗದಗ ಜಿಲ್ಲೆಯ ಸರ್ಕಾರಿ ಡಿಪೋದಲ್ಲಿರುವ ಡೇಂಜರಸ್ ಡಕೋಟಾ ಬಸ್ ( Dakota buses) ಗಳ ಅಸಲಿಯತ್ತು ಏನು ಎಂಬುದನ್ನು ಅಲ್ಲಿನ ಚಾಲಕರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಗದಗ (Gadag) ಜಿಲ್ಲೆಯ ಸರ್ಕಾರಿ ಡಿಪೋದಲ್ಲಿರುವ (Gadag bus depot ) ಡೇಂಜರಸ್ ಡಕೋಟಾ ಬಸ್ ( Dakota buses) ಗಳ ಅಸಲಿಯತ್ತು ಏನು ಎಂಬುದನ್ನು ಅಲ್ಲಿನ ಚಾಲಕರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮುಂಡರಗಿ ಡಿಪೋ ಬಸ್ ಗಳ ಸ್ಥಿತಿಯೂ (Plight) ಹೀಗೆಯೇ ಇದೆ…. ಮುಂಡರಗಿ ಬಸ್ ಚಾಲಕ ಬಸ್ ಗಳ ಕಂಡಿಷನ್ ಬಗ್ಗೆ ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಹೇಳಿದ್ದು ಇಲ್ಲಿ ದಾಖಲಾಗಿದೆ.

ಚಾಲಕ : ನಮಸ್ಕಾರಿ ಸರ್
ಟಿವಿ9 : ಏನ್ ಸಮಸ್ಯೆ ಇದೆ.
ಚಾಲಕ : ನೋ ಗ್ಯಾರಂಟಿ ಗಾಡಿ ರೀ. ಒಂದು ಗಾಡಿನೂ ಓಕೆ ಗಾಡಿ ಇಲ್ಲ.
ಟಿವಿ9 : ಹೇಗೆ ಚಾಲಕರ ಪರಿಸ್ಥಿತಿ.
ಚಾಲಕ : ದೇವರೇ ಕಾಪಾಡಬೇಕು.
ಟಿವಿ9 : ಏನಾದ್ರೂ ಹೆಚ್ಚುಕಡಿಮೆ ಆದ್ರೆ.
ಚಾಲಕ : ದೇವರೇ ಕಾಪಾಡಬೇಕು.
ಟಿವಿ9 : ಸಮಸ್ಯೆ ಏನಿದೆ.
ಚಾಲಕ : ಗಾಡಿ ಮೆಂಟೆನೆನ್ಸ್ ಇಲ್ಲ.
ಟಿವಿ9 : ಹೇಗೆ ತೆಗೆದುಕೊಂಡು ಹೋಗ್ತೀರಿ.
ಚಾಲಕ : ಏನ್ ಮಾಡೋದು ಸರ್ ಹೊಟ್ಟೆಪಾಡು.. ನೌಕರಿ ಆಗಬೇಕಲ್ಲ. ನೀ ಒಲ್ಲೆ ಅಂದ್ರೆ ಬಿಡು ಅಂತಾರೆ. ಹೋಗೋಗೆ 10 ಚಾಲಕರು ರೆಡಿ ಇರ್ತಾರೆ..
ಟಿವಿ9 : ಒಂದೂ ಗಾಡಿ ಕಂಡಿಷನ್ ಇಲ್ವಾ.?.
ಚಾಲಕ : ನೋ ಗ್ಯಾರಂಟಿ ಗಾಡಿ. ಒಂದು ಗಾಡಿ ಕಂಡಿಷನ್ ಇಲ್ಲ. ಕ್ಲಚ್ ಇಲ್ಲ. ಬ್ರೇಕ್ ಇಲ್ಲಾ. ಇಂಜೀನ್ ಆಯಿಲ್ ಇಲ್ಲ.
ಟಿವಿ9 : ಸರ್ಕಾರದಿಂದ ಹಣ ಬರುತ್ತೋ ಇಲ್ವೋ..
ಚಾಲಕ : ಸರ್ಕಾರದ ಹಣ ಡಿಸೇಲ್, ವೇತನಕ್ಕೆ ಅಷ್ಟೇ ಕೊಡ್ತೀದ್ದಾರೆ.
ಟಿವಿ9 : ಮೆಂಟೆನೆನ್ಸ್ ಇಲ್ವಾ.
ಚಾಲಕ : ದುಡ್ಡು ಬರುವಾಗ್ಲೇ ಮಾಡಿಲ್ಲ ಈಗ ಮಾಡ್ತಾರಾ…
ಟಿವಿ9 : ರಿಪೇರಿ ಗಾಡಿ ಒಳಗೆ ಬಹಳ ಇದಾವಾ..
ಚಾಲಕ : 57 ಸ್ಕ್ಯ್ರಾಪ್ ಗಾಡಿ ಇವೆ. ಹೊರಗೆ ತೆಗೆಯಬಾರದು ಅಂಥ ಗಾಡಿ ಅವು.
ಟಿವಿ9 : ನಿಲ್ಲಿಸಿದ್ದಾರಾ…
ಚಾಲಕ : ನಿಲ್ಲಿಸಿಲ್ಲಾ ಅವೇ ಓಡಿಸ್ತಾಯಿದ್ದಾರೆ.
ಟಿವಿ9 : ಚಾಲಕರಿಗೆ ಡ್ಯೂಟಿ ಕೊಡ್ತಾಯಿಲ್ಲವಂತೆ
ಚಾಲಕ : ಅಯ್ಯೋ ದೊಡ್ಡ ಸಮಸ್ಯೆ ಇದೆ. ಯಾರೂ ಹೇಳಲ್ಲ.
ಟಿವಿ9 : ಡ್ಯೂಟಿ ಕೊಡ್ತಾರೋ ಇಲ್ವೋ
ಚಾಲಕ : ಎಲ್ಲಿ ಡ್ಯೂಟಿ ಕುಂತಿದ್ದಾರೆ ಕಟ್ಟಿಗೆ ಇಲ್ಲಿ ನೋಡಿ.. ಈಗ ಹೋದ್ನಲ್ಲ ಅವ್ನೇ ಡಿಪೋ ಮ್ಯಾನೇಜರ್…
ಟಿವಿ9 : ಎಲ್ಲಿ ಡಿಪೋ ಮ್ಯಾನೇಜರ್ ಹೋದ್ರಾ.
ಚಾಲಕ : ಇವ್ರು ಡಿಪೋ ಮ್ಯಾನೇಜರ್ ಅಲ್ಲಾ. ಡಿಪೋ ಮ್ಯಾನೇಜರ್ ಲೆಕ್ಕಕ್ಕೆ ಅದಾನ್. ಅವ್ನ ತಗೊಂಡು ದುರ್ಗಾವಿಹಾರ ಹೋಟೆಲ್ ಗೆ ಹೋಗ್ಬೇಕು. ಸೆಟಿಂಗ್ ಮಾಡಬೇಕು. ಚಹಾ ಕುಡಿಸಿ, ಎಣ್ಣೆ ಹೊಡಿಸಿ ಸೆಟಿಂಗ್ ಮಾಡಬೇಕು.
ಟಿವಿ9 : ಯಾರು ಅವ್ರು
ಚಾಲಕ : ಎಟಿಎಸ್ (ಅಸಿಸ್ಟಂಟ್ ಟ್ರಾಫಿಕ್ ಇನ್ಸಪೆಕ್ಟರ್) ಧನ್ಯಾಳ ಅಂತ.
ಟಿವಿ9 : ಎಟಿಎಸ್ ಗೆ ಬೆಣ್ಣೆ ಹಚ್ಚಿದ್ರೆ ಅಷ್ಟೇ ಡ್ಯೂಟಿನಾ.
ಚಾಲಕ : ಹಾಂ ಬೆಣ್ಣೆ ಹಚ್ಚಿದ್ರೆ, ರೊಕ್ಕಾ ಕೊಟ್ರೆ. ಕುಡಿಸಿದ್ರೆ ತಿನಿಸಿದ್ರೆ ಅಷ್ಟೇ.
ಟಿವಿ9 : ಗಾಡಿ ರಿಪೇರಿ ಬಹಳ ಇದಾವಾ..
ಚಾಲಕ : ಸಾಕಷ್ಟು ಗಾಡಿ ಅದಾವ್ರಿ. ಒಳಗೆ ನಿಮಗೆ ಅಲಾವ್ ಇಲ್ಲಾ..
ಟಿವಿ9 : ಎಲ್ಲಾ ರಿಪೇರಿ ಇದ್ರೆ. ನಿಮ್ಮ ಡ್ಯೂಟಿ ಹೇಗೆ.
ಚಾಲಕ : ಯಾರೂ ರೊಕ್ಕಾ ಕೊಟ್ಟು ಒಂದು ಟ್ರಿಪ್ ತೊಗೊಂಡು ಹೋಗ್ತಾರೆ.. ಗಾಡಿ ಅಲ್ಲೇ ನಿಲ್ಲುತ್ತೆ. ಅವ್ರಿಗೆ ನೌಕರಿ ಹಾಕ್ತಾರೆ. 1 ಟ್ರಿಪ್ಗೆ ಸೆಟಿಂಗ್ ಇದ್ದ ಗಿರಾಕಿಗೆ ಹಾಗೆ. ಸೆಟಿಂಗ್ ಗೆ ನಾವು ದುಡ್ಡು ಕೊಡಲ್ಲ. ಈ ತಿಂಗಳ 5 ದಿನ ಪಗಾರ ತೆಗೆದಿಲ್ಲ. 3 ದಿನಕ್ಕೆ ಒಂದು ವಾರದ ಪಗಾರ ಹಾಕಿಲ್ಲ. 5-6 ಸಾವಿರ ನಮ್ದು ಹೊಯ್ತು. 20ವರ್ಷ ದುಡಿದ ನಮ್ಗೆ ಈ ಹಣೆ ಬರಹ ಇದೆ. ಹೊಸಬರ ಪರಿಸ್ಥಿತಿ ಹೇಗೆ…
ಟಿವಿ9 : ಹೀಗಾದ್ರೆ ನಿಮ್ಮ ಪರಿಸ್ಥಿತಿ ಹೇಗೆ
ಚಾಲಕ : ನಮಗೆ ದೇವರೇ ಕಾಪಾಡಬೇಕು. ಎಲ್ಲಿ ಹೋದ್ರು ನ್ಯಾಯ ಸಿಗಲ್ಲ. ಎಲ್ಲ ಪ್ರಯತ್ನ ಮಾಡಿವಿ. ಪೊಲೀಸ್ ಠಾಣೆಗೆ ಹೋಗಿವಿ. ಕೋರ್ಟ್ ಗೆ ಹೋಗಿವಿ ಎಲ್ಲೂ ನ್ಯಾಯ ಸಿಕ್ಕಿಲ್ಲ. ಎಂಡಿ ಭೇಟಿ ಆಗಿವಿ. ಎಲ್ಲೆಲ್ಲೂ ಸಣ್ಣ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ.
ಟಿವಿ9 : ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಮಸ್ಯೆನಾ..
ಚಾಲಕ : ಶಕ್ತಿ ಯೋಜನೆಗಿಂತ ಮೊದಲು ಬಾದ್ ಆಗಿದೆ… ಅಂತ ಮಾತು ಮುಗಿಸಿ ಹೋದ ಚಾಲಕ….

ಭಾಗ-2

ಮುಂಡರಗಿ ಡಿಪೋ ಬಸ್ ಗಳ ಸ್ಥಿತಿಯೂ ಹೀಗೆ…. ಮುಂಡರಗಿ ಬಸ್ ಚಾಲಕ ಬಸ್ ಗಳ ಕಂಡಿಷನ್ ಬಗ್ಗೆ ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಹೇಳಿದ್ದು.

ಟಿವಿ9 : ಬಸ್ ಕಂಡಿಷನ್ ಸರಿ ಇಲ್ಲ ಅಂತೀರಿ. ಬಂದ ಬಿದ್ರೆ ಒತ್ತಬೇಕಾ (ತಳ್ಳಬೇಕಾ)..?
ಚಾಲಕ : ಗಾಡಿಗೆ ಸೇಲ್ಫ್ ಇಲ್ಲ. ಬಂದ್ ಬಿದ್ರೆ ತಳ್ಳಬೇಕು.
ಟಿವಿ9 : ಬ್ರೇಕ್, ಕ್ಲಚ್ ಕಂಡಿಷನ್ ಇದಾವಾ.?
ಚಾಲಕ : ಎಲ್ಲಿವೆ .. ಇಲ್ಲಿ ಬ್ರೇಕ್ ಒತ್ತಿದ್ರೆ ಅಲ್ಲಿ ಹೋಗಿ ನಿಲ್ಲುತ್ತೆ.
ಟಿವಿ9 : ಶಕ್ತಿ ಯೋಜನೆ ಜಾರಿ ಬಳಿಕ ಗಾಡಿ ಫುಲ್ ರಷ್ ಇರ್ತಾವೆ.
ಚಾಲಕ : ಏನ್ ಮಾಡಕ್ ಆಗುತ್ತೆ. ಬ್ರೇಕ್ ಇಲ್ಲ, ಕ್ಲಚ್ ಇಲ್ಲ. ಗಾಡಿ ಕಂಡಿಷನ್ ಇಲ್ಲ.
ಟಿವಿ9 : ನಾಳೆ ಏನಾದ್ರೂ ಆದ್ರೆ, ಜವಾಬ್ದಾರಿ ಯಾರು…?
ಚಾಲಕ : ಡ್ರೈವರ್, ಕಂಡಕ್ಟರ್ ಮೇಲೆ ಅದು.
ಟಿವಿ9 : ಕಂಡಿಷನ್ ಇಲ್ದೇ ಕೊಟ್ರೆ ಹೇಗೆ ನೀವು ಜವಾಬ್ದಾರಿ ಆಗ್ತೀರಿ..?
ಚಾಲಕ : ಎಲ್ಲಾ ಗಾಡಿ ಹಂಗ್ ಅದಾವ್ರಿ ಸರ್. ಇದು ಬಿಡು ಅದು ಒಯ್ಯಿ ಅಂತಾರೆ. ಏನಾದ್ರೂ ಒಂದು ಪ್ರಾಬ್ಲಂ ಇದ್ದೇ ಇರ್ತಾವೆ.
ಟಿವಿ9 : ಹೆಂಗೆ ಜೀವನ ಅನಿವಾರ್ಯವಾಗಿ ಗಾಡಿ ಓಡಿಸ್ತೀರಿ..?
ಚಾಲಕ : ಅನಿವಾರ್ಯವಾಗಿದೆ. ಏನ್ ಮಾಡಕ್ ಆಗಲ್ಲ..

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published on: Dec 13, 2023 12:40 PM