AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಆಧಿವೇಶನ: ವಿಜಯೇಂದ್ರ ಮಾತಾಡುವಾಗ ಶಿವಕುಮಾರ್ ಅಡ್ಡಿಪಡಿಸಲು ಯತ್ನಿಸಿದ್ದು ಉದ್ದೇಶಪೂರ್ವಕವೋ?

ಬೆಳಗಾವಿ ಆಧಿವೇಶನ: ವಿಜಯೇಂದ್ರ ಮಾತಾಡುವಾಗ ಶಿವಕುಮಾರ್ ಅಡ್ಡಿಪಡಿಸಲು ಯತ್ನಿಸಿದ್ದು ಉದ್ದೇಶಪೂರ್ವಕವೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 13, 2023 | 2:11 PM

Share

ಅಧಿವೇಶನ ನಡೆಯುವಾಗ ಗಮನ ಸೆಳೆಯುವ ಸೂಚನೆಗಳು ಹರಿದಾಡುತ್ತವೆ ಅದರೆ ಶಿವಕುಮಾರ್ ಅವರು ವಿಜಯೇಂದ್ರ ಮಾತಾಡುವಾಗ ಮಾಡಿದ್ದು ಶಾಸಕನ ಗಮನ ಕದಡುವ ಪ್ರಯತ್ನ. ಒಂದು ಅತ್ಯಂತ ಪ್ರಸ್ತುತ ವಿಷಯವನ್ನು ಬಿಜೆಪಿ ಶಾಸಕ ಸದನದ ಗಮನಕ್ಕೆ ತರುವ ಪ್ರಯತ್ನ ಮಾಡುವಾಗ ಶಿವಕುಮಾರ್ ಸುಖಾಸುಮ್ಮನೆ ಅಡ್ಡಿಪಡಿಸಿ ಸದನಕ್ಕೆ ಬೇಕಿರದ ಮಾತನ್ನು ಹೇಳುತ್ತಾರೆ.

ಬೆಳಗಾವಿ: ವಿಧಾನಸಭಾ ಅಧಿವೇಶನದ ಕಾರ್ಯಕಲಾಪಗಳು ನಡೆಯುತ್ತಿದ್ದಾಗ ಇಂದು ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ಒಂದು ಬ್ರೀಫ್ ಮಾತಿನ ಚಕಮಕಿ ನಡೆಯಿತು. ಬರಗಾಲದ ಸ್ಥಿತಿಯಲ್ಲಿ ಪಶು ಆಹಾರದ (cattle feed) ದರವನ್ನು ಹೆಚ್ಚಿಸಿದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳುತ್ತಿದ್ದ ವಿಜಯೇಂದ್ರ ಅವರ ಮಾತಿನ ಓಘಕ್ಕೆ ಕಡಿವಾಣ ಹಾಕುವ ಪ್ರಯತ್ನ ಶಿವಕುಮಾರ್ ಅವರಿಂದ ನಡೆಯುತ್ತದೆ. ತನ್ನ ಮಾತು ಮುಗಿದ ಬಳಿಕ ಮಾತಾಡುವಂತೆ ವಿಜಯೇಂದ್ರ ಹೇಳಿದರೂ ಮಾತು ನಿಲ್ಲಿಸದ ಶಿವಕುಮಾರ್, ಸದನದಲ್ಲಿ ಮೊದಲ ಬಾರಿ ಭಾಷಣ ಮಾಡುತ್ತಿರುವ ನಿಮ್ಮಲ್ಲಿ ಉತ್ಸಾಹ ಇರೋದು ಸ್ವಾಭಾವಿಕ, ಮಾತಾಡಿ; ಆದರೆ ನೀವು ಸರಕಾರಕ್ಕೆ ಕಣ್ಣಿಲ್ಲ, ಕಿವಿಯಿಲ್ಲ, ಹೃದಯವಿಲ್ಲ ಅಂತ ಹೇಳಿದ್ದಕ್ಕೆ ಮಾತಾಡಬೇಕಾಯಿತು ಅನ್ನುತ್ತಾರೆ. ಸರ್ಕಾರಕ್ಕೆ ಹೃದಯವಿಲ್ಲ ಅಂತ ತಾನಲ್ಲ ರಾಜ್ಯದ ಜನತೆ ಹೇಳುತ್ತಿದೆ ಎಂದು ಹೇಳಿದ ವಿಜಯೇಂದ್ರ, ಶಿವಕುಮಾರ್ ಮಾತನ್ನು ಕಡೆಗಣಿಸಿ ವಿಷಯಕ್ಕೆ ಬರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ