ಬೆಳಗಾವಿ ಅಧಿವೇಶನ: ಗಾಲಿ ಜನಾರ್ಧನ ರೆಡ್ಡಿ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಮುಂದುವರಿದ ಮಾತಿನ ಚಕಮಕಿ
Belagavi Assembly Winter Session: ಬಳ್ಳಾರಿಗೆ ಪುನಃ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳೇ ವಾಪಸ್ಸು ಬಂದಿದ್ದಾರೆ ಅಂತ ಖುದ್ದು ಗೃಹ ಸಚಿವ ಜಿ ಪರಮೇಶ್ವರ್ ಅವರೇ ಹೇಳಿದ್ದಾರೆ ಅಂತ ರೆಡ್ಡಿ ಹೇಳಿದಾಗ ಕಾಂಗ್ರೆಸ್ ಸದಸ್ಯರು ಎಲ್ಲರೂ ಅನ್ನಬೇಡಿ, ಒಂದಿಬ್ಬರು ಅಂತ ಹೇಳಿ ಅನ್ನುತ್ತಾರೆ.
ಬೆಳಗಾವಿ: ಸದನದಲ್ಲಿ ಇಂದು ಮತ್ತೇ ಬಳ್ಳಾರಿ ಅಕ್ರಮ ಗಣಿಗಾರಿಕೆ ವಿಷಯ ಚರ್ಚೆಗೆ ಬಂದಾಗ ಕಾಂಗ್ರೆಸ್ ಶಾಸಕರು ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ಧನರೆಡ್ಡಿ (Gali Janardhan Reddy) ಅವರ ನಡುವೆ ವಾಗ್ವಾದ ನಡೆಯುತ್ತದೆ. ರೆಡ್ಡಿಯವರು ಸದನದಲ್ಲಿ ಯಾವಾಗಲೂ ಬ್ಯಾಕ್ ಫುಟ್ ನಲ್ಲೇ ಮಾತಾಡುತ್ತಾರೆ. ಹೆದರಿಕೊಂಡು ಮಾತಾಡುತ್ತಿದ್ದಾರೋ ಅಂತ ಭಾಸವಾಗುತ್ತದೆ. ಬಿಎಸ್ ಯಡಿಯೂರಪ್ಪನವರು (BS Yediyurappa) ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಶೇಕಡ 6 ಅರಣ್ಯಾಭಿವೃದ್ಧಿ ತೆರಿಗೆಯ (forest development tax) ವಿಚಾರ ಮೊದಲು ರಾಜ್ಯ ಉಚ್ಚ ನ್ಯಾಯಾಲಯ ನಂತರ ಸರ್ವೋಚ್ಛ ನ್ಯಾಯಾಲಯಲ್ಲಿ ವಿಚಾರಣೆಗೆ ಬಂದು ಆಮೇಲೆ ಹಣ ಜಮಾ ಆಗಿದ್ದು ಕಡತಕ್ಕೆ ಸೇರಲಿ ಅಂತ ಹೇಳಿ, ಅರಣ್ಯಾಭಿವೃದ್ಧಿ ತೆರಿಗೆಯನ್ನು ಜಾರಿಗೆ ತಂದಿದ್ದು ಯಡಿಯೂರಪ್ಪನವರೋ ಅಥವಾ ಸಿದ್ದರಾಮಯ್ಯನವರ ಆಡಳಿತದಲ್ಲಿ ಜಾರಿಗೊಂಡಿತೋ ಅದು ಮಾಧ್ಯಮದವರಿಗೆ ಹೇಳಲು ಸಾಧ್ಯವಾಗುತ್ತದೆ ಎಂದಾಗ, ಕಾಂಗ್ರೆಸ್ ಶಾಸಕರು ಇದನ್ನು ನಿನ್ನೆಯೇ ಹೇಳಿದ್ದೀರಿ ಅನ್ನುತ್ತಾರೆ. ಬಳ್ಳಾರಿಗೆ ಪುನಃ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳೇ ವಾಪಸ್ಸು ಬಂದಿದ್ದಾರೆ ಅಂತ ಖುದ್ದು ಗೃಹ ಸಚಿವ ಜಿ ಪರಮೇಶ್ವರ್ ಅವರೇ ಹೇಳಿದ್ದಾರೆ ಅಂತ ರೆಡ್ಡಿ ಹೇಳಿದಾಗ ಕಾಂಗ್ರೆಸ್ ಸದಸ್ಯರು ಎಲ್ಲರೂ ಅನ್ನಬೇಡಿ, ಒಂದಿಬ್ಬರು ಅಂತ ಹೇಳಿ ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ