ಬಳ್ಳಾರಿಯ ಶಾಸಕ ಮತ್ತು ಸಚಿವರು ಕೆಆರ್​ಪಿಪಿ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ನಿಲ್ಲಿಸದಿದ್ದರೆ ಉಗ್ರ ಹೋರಾಟ: ಗಾಲಿ ಜನಾರ್ಧನರೆಡ್ಡಿ

ಬಳ್ಳಾರಿಯ ಶಾಸಕ ಮತ್ತು ಸಚಿವರು ಕೆಆರ್​ಪಿಪಿ ಕಾರ್ಯಕರ್ತರಿಗೆ ಕಿರುಕುಳ ನೀಡುವುದು ನಿಲ್ಲಿಸದಿದ್ದರೆ ಉಗ್ರ ಹೋರಾಟ: ಗಾಲಿ ಜನಾರ್ಧನರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 25, 2023 | 7:28 PM

ಜಿಲ್ಲೆಯ ಮಂತ್ರಿಗಳು ಮತ್ತು ಶಾಸಕರು ಬಳ್ಳಾರಿಯ ಜನ ತನ್ನನ್ನು ನೆನಪಿಗೆ ತಂದುಕೊಳ್ಳದಂಥ ಕೆಲಸಗಳನ್ನು ಮಾಡಿ ಅವರ ಮೆಚ್ಚುಗೆಗೆ ಪಾತ್ರರಾಗಬೇಕೆ ಹೊರತು ತನ್ನ ಪಕ್ಷದ ಕಾರ್ಯಕರ್ತರನ್ನು ಪೀಡಿಸುವ ಕೆಲಸಕ್ಕಿಳಿಯಬಾರದು. ತಾನು ಬಳ್ಳಾರಿಯಿಂದ ಕೇವಲ 60 ಕಿಮೀ ದೂರ ಇರುವುದಾಗಿ ಹೇಳಿದ ರೆಡ್ಡಿ, ತಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಮುಂದುವರಿದರೆ, ವಿಧಾನ ಸೌಧದ ಒಳಗೆ ಮತ್ತು ಹೊರಗೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಬಳ್ಳಾರಿ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷ ಮತ್ತು ಶಾಸಕ ಗಾಲಿ ಜನಾರ್ಧನರೆಡ್ಡಿ (Gali Janardhan Reddy) ಬಳ್ಳಾರಿ ಜಿಲ್ಲೆಯ ಶಾಸಕರು ಮತ್ತು ಸಚಿವರನ್ನು ಎಚ್ಚರಿಸಿದರು. ವಿಷಯವವೇನೆಂದರೆ, ಬಳ್ಳಾರಿಯಲ್ಲಿ ಕೆಅರ್​ಪಿಪಿ ಕಾರ್ಯಕರ್ತರಿಗೆ (KRPP workers) ತೊಂದರೆ ನೀಡಲಾಗುತ್ತಿದೆಯಂತೆ. ತೊಂದರೆ ಕೊಡುತ್ತಿರುವವರು ಯಾವ ಪಕ್ಷದವರು ಅಂತ ನಿರ್ದಿಷ್ಟವಾಗಿ ರೆಡ್ಡಿ ಹೇಳಲಿಲ್ಲವಾದರೂ ಶಾಸಕರು ಮತ್ತು ಸಚಿವರು (MLAs and ministers) ಅಂತ ಮಾತ್ರ ಹೇಳಿದರು. ಜಿಲ್ಲೆಯ ಮಂತ್ರಿಗಳು ಮತ್ತು ಶಾಸಕರು ಬಳ್ಳಾರಿಯ ಜನ ತನ್ನನ್ನು ನೆನಪಿಗೆ ತಂದುಕೊಳ್ಳದಂಥ ಕೆಲಸಗಳನ್ನು ಮಾಡಿ ಅವರ ಮೆಚ್ಚುಗೆಗೆ ಪಾತ್ರರಾಗಬೇಕೆ ಹೊರತು ತನ್ನ ಪಕ್ಷದ ಕಾರ್ಯಕರ್ತರನ್ನು ಪೀಡಿಸುವ ಕೆಲಸಕ್ಕಿಳಿಯಬಾರದು. ತಾನು ಬಳ್ಳಾರಿಯಿಂದ ಕೇವಲ 60 ಕಿಮೀ ದೂರ ಇರುವುದಾಗಿ ಹೇಳಿದ ರೆಡ್ಡಿ, ತಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಮುಂದುವರಿದರೆ, ವಿಧಾನ ಸೌಧದ ಒಳಗೆ ಮತ್ತು ಹೊರಗೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ